RBI Limit: ದಿನಕ್ಕೆ ಇಷ್ಟು ಹಣ ಮಾತ್ರ, ಈ ಬ್ಯಾಂಕಿನ ತಗೆಯುವ ನಿಯಮದಲ್ಲಿ ಬದಲಾವಣೆ ಮಾಡಿದ RBI.

ಬ್ಯಾಂಕ್ ನಿಂದ ಹಣ ಹಿಂಪಡೆಯುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಮಹತ್ವದ ಮಾಹಿತಿ ನೀಡಿದೆ.

RBI Money Withdrawing Limit: ಭಾರತೀಯ ರಿಸರ್ವ್ ಬ್ಯಾಂಕ್ (RBI ) ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ನಿಯಮವನ್ನು ಜಾರಿಗೊಳಿಸುತ್ತಿದೆ. ರಿಸರ್ವ್ ಬ್ಯಾಂಕ್ ಈ ತಿಂಗಳಿನಲ್ಲಿ ಐದು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ.

ಬ್ಯಾಂಕ್ ಗಳಲ್ಲಿ ಕಡಿಮೆ ಹೂಡಿಕೆ ಮತ್ತು ಬಂಡವಾಳದ ಕೊರತೆಯಿಂದ ಆರ್ ಬಿಐ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇದೀಗ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ.

RBI has changed the rules for withdrawing money from banks
Image Credit: Hindustantimes

ಆರ್ ಬಿಐ ಮಹತ್ವದ ನಿರ್ಧಾರ
ಇದೀಗ ಆರ್ ಬಿಐ ಬ್ಯಾಂಕಿನಿಂದ ಹಣ ತಗೆಯುವ ನಿಯಮದಲ್ಲಿ ಬದಲಾವಣೆ ತಂದಿದೆ. ಸಹಕಾರಿ ಬ್ಯಾಂಕ್ ನಿಂದ ಹಣವನ್ನು ಹಿಂಪಡೆಯಲು ಆರ್ ಬಿಐ ಮಿತಿಯನ್ನು ನಿಗದಿಪಡಿಸಿದೆ. ಇದೀಗ ಆರ್ ಬಿಐ ಯಾವ ಬ್ಯಾಂಕ್ ನ ಹಣ ತೆಗೆಯುವ ನಿಯಮ ಬದಲಾಯಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ನೀವು ಈ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಆರ್ ಬಿಐ ಹೊಸ ಮಿತಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಬ್ಯಾಂಕಿಂದ ಹಣ ತಗೆಯುವ ನಿಯಮದಲ್ಲಿ ಬದಲಾವಣೆ ಮಾಡಿದ RBI
ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಸಹಕಾರಿ ಬ್ಯಾಂಕ್ (National Cooperative Bank) ಗೆ ಸಂಬಂಧಿಸಿದಂತೆ ಆರ್ ಬಿಐ ಹಣ ತೆಗೆಯುವ ಮಿತಿಯನ್ನು ನಿಗದಿಪಡಿಸಿದೆ. ಬ್ಯಾಂಕ್ ನ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಸಹಕಾರಿ ಬ್ಯಾಂಕ್ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 13 ಶಾಖೆಗಳನ್ನು ಹೊಂದಿದೆ.

RBI has fixed withdrawal limit for National Co-operative Bank in Bangalore.
Image Credit: NCBL

ಹೊಸ ಸಾಲಗಳನ್ನು ನೀಡಲು ಸಾಧ್ಯವಲ್ಲ, ಇದರೊಂದಿಗೆ ಬ್ಯಾಂಕ್ ಯಾವುದೇ ಹೊಸ ಸಾಲವನ್ನು ನೀಡಲು ಸಾಧ್ಯವಿಲ್ಲ ಅಥವಾ ಕೇಂದ್ರ ಬ್ಯಾಂಕಿನ ಅನುಮತಿಯಿಲ್ಲದೆ ತಾಜಾ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ. ಆರ್ ಬಿಐ 24 ಜುಲೈ 2023 ರಂದು ವ್ಯವಹಾರ ಮುಕ್ತಾಯದಿಂದ 6 ತಿಂಗಳ ಅವಧಿಗೆ ರಾಷ್ಟ್ರೀಯ ಸಹಕಾರಿ ಬ್ಯಾಂಕ್ ಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ. ಬ್ಯಾಂಕಿನ ಠೇವಣಿದಾರರು ಠೇವಣಿ ವಿಮೆಯ ಅಡಿಯಲ್ಲಿ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ನಲ್ಲಿ 5 ಲಕ್ಷ ರೂ. ಗಳನ್ನೂ ಕ್ಲೈಮ್ ಮಾಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group