RBI Order: ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ RBI ನಿಂದ ಇನ್ನೊಂದು ಖಡಕ್ ಆದೇಶ, ಈಗಲೇ ಚೆಕ್ ಮಾಡಿಕೊಳ್ಳಿ.
ಸಾಲ ಮರುಪಾವತಿಗೆ ಸಂಬಂಧಿಸಿದಂತೆ RBI ಆದೇಶ.
RBI New Order For Loan Repayment: Reserve Bank Of India ಇತ್ತೀಚಿಗೆ ಬ್ಯಾಂಕುಗಳ ಸಾಲದ ನಿಯಮದಲ್ಲಿ ಅನೇಕ ಬದಲಾವಣೆಯನ್ನು ತರುತ್ತಿದೆ. ಸಾಲಗಾರರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುವುದರ ಜೊತೆಗೆ ವಿವಿಧ ನಿಯಮವನ್ನು ಕೂಡ RBI ಪರಿಚಯಿಸುತ್ತಿದೆ.
RBI ಈಗಾಗಲೇ ಸಾಲದ ದಂಡದ ನಿಯಮ ಮತ್ತು ಸಾಲದ ಮರುಪಾವತಿಯ ನಿಯಮದಲ್ಲಿ ಬದಲಾವಣೆಯನ್ನು ತಂದಿತ್ತು. ಸಾಲಗಾರರಿಗೆ ಹೆಚ್ಚಿನ ಬಡ್ಡಿಯನ್ನು ದಂಡದ ರೂಪದಲ್ಲಿ ವಿಧಿಸಬಾರದು ಎಂದು RBI ಘೋಷಿಸಿತ್ತು. ದಂಡದ ನಿಯಮದ ಬದಲಾವಣೆಯ ಜೊತೆಗೆ ಸಾಲ ಮರುಪಾವತಿಯ ಬಗ್ಗೆ ಕೂಡ ಮಹತ್ವದ ಆದೇಶವನ್ನು ಹೊರಡಿಸಿತ್ತು.
ಸಾಲ ಮರುಪಾವತಿಗೆ ಸಂಬಂಧಿಸಿದಂತೆ RBI ಆದೇಶ
ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು. ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.
ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ. ಸದ್ಯ ಈ ನಿಯಮ ಜಾರಿಗೊಳಿಸಿದ ಬೆನ್ನಲ್ಲೇ RBI ಸಾಲ ಪಡೆದವರಿಗೆ ಹೊಸ ನಿಯಮ ಪರಿಚಯಿಸಿದೆ. ನಿಗದಿತ ಸಮಯದೊಳಗೆ ಸಾಲ ಮರುಪಾವತಿ ಮಾಡದವರಿಗೆ RBI ಸೊತ್ತೋಲೆ ಹೊರಡಿಸಿದೆ. ಸಾಲ ಮರುಪಾವತಿ ಮಾಡದೆ ಇರುವವರಿಗೆ RBI ಹೊರಡಿಸಿರುವ ನಿಯಮದ ಬಗ್ಗೆ ವಿವಿರ ಇಲ್ಲಿದೆ.
ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ RBI ನಿಂದ ಇನ್ನೊಂದು ಖಡಕ್ ಆದೇಶ
Reserve Bank ಇದೀಗ ಸಾಲ ಮರುಪಾವತಿ ಮಾಡದೆ ಇರುವವರಿಗೆ ಹೊಸ ಆದೇಶ ಹೊರಡಿಸಿದೆ. ಉದ್ದೇಶಪೂರ್ವಕವಾಗಿ ಸಾಲವನ್ನು ಮರುಪಾವತಿ ಮಾಡದ ಯಾವುದೇ ಸಾಲದಾತರನ್ನು ಪ್ರತ್ಯೇಕ ವರ್ಗಕ್ಕೆ ವಿಂಗಡಿಸಲಾಗುವುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಸಾಲಗಾರರ ವಿರುದ್ಧ ಯಾವುದೇ ತಾರತಮ್ಯ ಮಾಡಬಾರದು ಎನ್ನುವ ಉದ್ದೇಶದಿಂದ RBI ಈ ಸುತ್ತೋಲೆ ಹೊರಡಿಸಿದೆ.
ಡಿಫಾಲ್ಟರ್ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವುದು ಹೇಗೆ..?
ಸಾಲಗಾರನು ನಿಗದಿತ ಸಮಯದೊಳಗೆ ಉದ್ದೇಶಪೂರ್ವಕವಾಗಿ ಸಾಲವನ್ನು ಮರುಪಾವತಿ ಮಾಡದಿದ್ದರೆ ಅಂತವರ ಹೆಸರನ್ನು ಡಿಫಾಲ್ಟರ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಸಾಲಗಾರನು ಬ್ಯಾಂಕ್ ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಸಾಲಗಾರನು ಒಪ್ಪಂದದ ಮೊತ್ತವನ್ನು ಸಹ ಪಾವತಿಸಬೇಕಾಗುತ್ತದೆ. ಸಾಲಗಾರನು ಉದ್ದೇಶಪೂರ್ವಕವಾಗಿ ಸಾಲವನ್ನು ಪಾವತಿಸದಿದ್ದರೆ ಬ್ಯಾಂಕ್ ಅಂತವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ.