Bank Locker: ಬ್ಯಾಂಕ್ ಲಾಕರ್ ನಿಯಮದಲ್ಲಿ ದೊಡ್ಡ ಬದಲಾವಣೆ, ಇನ್ನುಮುಂದೆ ಈ ವಸ್ತುಗಳನ್ನ ಮಾತ್ರ ಇಡಬಹುದು.

ಯಾವ ರೀತಿಯ ವಸ್ತುಗಳನ್ನು ಮಾತ್ರ ಬ್ಯಾಂಕ್ ಲಾಕರ್ ನಲ್ಲಿ ಇರಿಸಬೇಕು ಎನ್ನುವ ಬಗ್ಗೆ RBI ಮಾರ್ಗ ಸೂಚಿ ಬಿಡುಗಡೆ ಮಾಡಿದೆ.

RBI New Rule For Bank Locker: ಗ್ರಾಹಕರು ತಮ್ಮ ಬಳಿ ಇರುವ ಪ್ರಮುಖ ದಾಖಲೆ ಹಾಗೂ ಬೆಲೆಬಾಳುವ ಚಿನ್ನದ ಸುರಕ್ಷತೆಗಾಗಿ ಬ್ಯಾಂಕ್ ಲಾಕರ್ (Bank Locker) ಅನ್ನು ಬಳಸುತ್ತಾರೆ. ಇತ್ತೀಚಿಗೆ ಆರ್ ಬಿಐ ಲಾಕರ್ ನಿಯಮವನ್ನು ಬದಲಾಯಿಸಿದೆ. ಗ್ರಾಹಕರಿಗೆ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ ಆರ್ ಬಿಐ (Reserve Bank Of India) ಸೂಚನೆ ನೀಡಿದೆ.

ಆರ್ ಬಿಐ ನೀಡಿರುವ ಹೇಳಿಕೆಯ ಪ್ರಕಾರ ಗ್ರಾಹಕರು ಪರಿಷ್ಕ್ರತ ಲಾಕರ್ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಾರೆ. ಇನ್ನು ಆರ್ ಬಿಐ ಲಾಕರ್ ನಿಯಮದಲ್ಲಿ ಹೊಸ ಮಾರ್ಗಸೂಚಿಯನ್ನು ಅಳವಡಿಸಿದೆ. ಇದೀಗ ಆರ್ ಬಿಐ ಲಾಕರ್ ನಲ್ಲಿ ಯಾವ ರೀತಿಯ ವಸ್ತುಗಳನ್ನು ಮಾತ್ರ ಇರಿಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದೆ.

RBI releases new guidelines on locker rules
Image Credit: Businessleague

ಆರ್ ಬಿಐ ಲಾಕರ್ ನಿಯಮದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ
ಆರ್ ಬಿಐ ಹೊಸ ನಿಯಮವನ್ನು ಹೊರಡಿಸಿದ್ದು ಗ್ರಾಹಕರು ಈ ನಿಯಮದ ಬಗ್ಗೆ ತಿಳಿಯುವುದು ಸೂಕ್ತ. ಈ ಹೊಸ ನಿಯಮ ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಜೂನ್ 30 ರಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ ಆಗಲಿದೆ. ಜೂನ್ 30 ರೊಳಗೆ ಪರಿಷ್ಕ್ರತ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ಇಂಟರ್ನೆಟ್ ನಲ್ಲಿ ಲಾಕರ್ ಹೊಂದಿರುವವರಿಗೆ ಮನವಿ ಮಾಡಲಾಗಿದೆ. ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಗ್ರಾಹಕರು ಸಹಿ ಹಾಕುವಂತೆ ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡುತ್ತಿದೆ.

ಇನ್ನುಮುಂದೆ ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನ ಮಾತ್ರ ಇಡಬಹುದು
ಆರ್ ಬಿಐ ಹೊಸ ಬ್ಯಾಂಕ್ ಲಾಕರ್ ನಿಯಮದ ಪ್ರಕಾರ, ಗ್ರಾಹಕರು ಬ್ಯಾಂಕ್ ಲಾಕರ್ ನಲ್ಲಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳಂತಹ ಕಾನೂನು ಬದ್ದವಾಗಿ ಮಾನ್ಯವಾದ ವಸ್ತುಗಳನ್ನು ಮಾತ್ರ ಇಡಲು ಸಾಧ್ಯವಾಗುತ್ತದೆ. ಒಪ್ಪಂದದಲ್ಲಿ ಯಾವ ವಸ್ತುಗಳು ಇರಿಸಲಾಗುವುದು ಮತ್ತು ಯಾವ ವಸ್ತುಗಳನ್ನು ಇರಿಸುವಂತಿಲ್ಲ ಎನ್ನುವ ಬಗ್ಗೆ ಅನುಮತಿಸಲಾಗುತ್ತದೆ.

RBI releases new guidelines on locker rules
Image Credit: Outlookindia

ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನು ನಿಷೇದಿಸಲಾಗಿದೆ
ಇನ್ನುಮುಂದೆ ಗ್ರಾಹಕರಿಗೆ ಬ್ಯಾಂಕ್ ಲಾಕರ್ ಅನ್ನು ಅವರ ವೈಯಕ್ತಿಕ ಬಳಕೆಗಾಗಿ ಮಾತ್ರ ನೀಡಲಾಗುತ್ತದೆ. ಬ್ಯಾಂಕ್ ಲಾಕರ್ ಗಳನ್ನೂ ವರ್ಗಾವಣೆ ಮಾಡಲಾಗುವುದಿಲ್ಲ. ಗ್ರಾಹಕರು ತಮ್ಮ ಲಾಕರ್ ಗಳಲ್ಲಿ ನಗದು ಅಥವಾ ವಿದೇಶಿ ಕರೆನ್ಸಿಗಳನ್ನುಇಡಲು ಸಾಧ್ಯವಾಗುವುದಿಲ್ಲ. ಶಸ್ತ್ರಾಸ್ತ್ರ, ಔಷಧ ಅಥವಾ ಇನ್ನಿತರ ವಿಷಕಾರಿ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿಇರಿಸುವುದನ್ನು ನಿಷೇದಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group