Bank Rule: SBI, ICICI ಮತ್ತು HDFC ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಸೆಪ್ಟೆಂಬರ್ 1 ರಿಂದ ಹೊಸ ನಿಯಮ, RBI ಆದೇಶ.
ಆರ್ ಬಿಐ ಕೆಲ ಬ್ಯಾಂಕ್ ಗಳ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
RBI New Rule For Bank: ಇತ್ತೀಚಿಗೆ ಆರ್ ಬಿಐ (RBI) ಬ್ಯಾಂಕುಗಳ ನಿಯಮದಲ್ಲಿ ಬಾರಿ ಬದಲಾವಣೆಯನ್ನು ತರುತ್ತಿದೆ. ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಆರ್ ಬಿಐ ಕೆಲವು ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಬ್ಯಾಂಕ್ ಗ್ರಾಹಕರ ಭದ್ರತೆಗಾಗಿ ಆರ್ ಬಿಐ ಹೊಸ ನಿಯಮವನ್ನು ಪರಿಚಯಿಸುತ್ತಿದೆ.
2023 ರ ಆರಂಭದಿಂದರು ಬ್ಯಾಂಕುಗಳ ನಿಯಮಗಳು ಬದಲಾಗುತ್ತಿದೆ. ದೇಶದ ಪ್ರತಿಷ್ಠಿತ ಬ್ಯಾಂಕುಗಳು ಆರ್ ಬಿಐ ನಿಯಮದ ಪ್ರಕಾರ ವಹಿವಾಟನ್ನು ನಡೆಸುತ್ತಿದೆ. ಇದೀಗ ಆರ್ ಬಿಐ ಕೆಲ ಬ್ಯಾಂಕ್ ಗಳ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
ಬ್ಯಾಂಕುಗಳ ನಿಯಮದಲ್ಲಿ ಮಹತ್ವದ ಬದಲಾವಣೆ
ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಎಲ್ಲ ಬ್ಯಾಂಕುಗಳಿಗೆ ಮಹತ್ವದ ಸೂಚನೆಯನ್ನು ನೀಡಿದೆ. ಆಗಸ್ಟ್ 31 ರೊಳಗೆ ವೆಬ್ ಸೈಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ ನಲ್ಲಿ ಲೋಗೋ ಮತ್ತು ಕ್ಯೂಆರ್ ಕೋಡ್ ಅನ್ನು ಪ್ರಮುಖವಾಗಿ ಪ್ರದರ್ಶಿಸಲು ಡಿಐಸಿಜಿಸಿ ಬ್ಯಾಂಕುಗಳಿಗೆ ಹೇಳಿದೆ. HDFC , SBI , ಮತ್ತು ICICI ಬ್ಯಾಂಕ್ ಗ್ರಾಹಕರು ಇದರ ಪ್ರಯೋಜವನ್ನು ಪಡೆಯಬಹುದಾಗಿದೆ. ಈ ಎಲ್ಲ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರು ಆರ್ ಬಿಐ ಹೊಸ ನಿಯಮದ ಪ್ರಕಾರ ವಹಿವಾಟನ್ನು ನಡೆಸಬೇಕಿದೆ.
ಈ ಮೂರು ಬ್ಯಾಂಕ್ ಖಾತೆದಾರರಿಗೆ ಹೊಸ ನಿಯಮ ಅನ್ವಯ
ಹೆಚ್ ಡಿಎಫ್ ಸಿ, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಗಳು ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಠೇವಣಿ ವಿಮಾ ಯೋಜನೆಯ ಬಗ್ಗೆ ಜಾಗ್ರತಿ ಮೂಡಿಸುವ ಉದ್ದೇಶದಿಂದ ಡಿಐಸಿಜಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಡಿಐಸಿಜಿಸಿ 5 ಲಕ್ಷದ ವರೆಗಿನ ಬ್ಯಾಂಕ್ ಠೇವಣಿಗಳನ್ನು ವಿಮೆ ಮಾಡುತ್ತದೆ.
ಸೆಪ್ಟೆಂಬರ್ ನಿಂದ ಹೊಸ ನಿಯಮಗಳು ಅನ್ವಯ
ವಾಣಿಜ್ಯ ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು, ಪಾವತಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಠೇವಣಿಗಳನ್ನು DICGC ಯ ವಿಮಾ ಯೋಜನೆಯಡಿ ಒಳಗೊಂಡಿದೆ.
ಬ್ಯಾಂಕುಗಳಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಠೇವಣಿ ವಿಮೆ ಪ್ರಮುಖ ಪಾತ್ರ ವಹಿಸುತ್ತದೆ. ಕೇಂದ್ರ ಬ್ಯಾಂಕಿಂಗ್ ನೊಂದಿಗೆ ಸಮಾಲೋಚಿಸಿ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸೆಪ್ಟೆಂಬರ್ ನಿಂದಲೇ ಈ ನಿಯಮಗಳು ಅನ್ವಯವಾಗಲಿದೆ.