Bank Rule: ಈ ಬ್ಯಾಂಕಿನ ಗ್ರಾಹಕರು ಇನ್ನುಮುಂದೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನ ಖಾತೆಯಿಂದ ತಗೆಯುವಂತಿಲ್ಲ, RBI ಆದೇಶ.
ಈ ಬ್ಯಾಂಕ್ ಗ್ರಾಹಕರಿಗೆ RBI ಹಣ ಹಿಂಪಡೆಯುವಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
RBI New Rule For Color Merchants Cooperative Bank: RBI ಇದೀಗ ದೇಶದ ವಿವಿಧ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ದೇಶದ ವಿವಿಧ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದ RBI ಸದ್ಯ ಕೆಲ ಬ್ಯಾಂಕ್ ಗಳಿಗೆ ದಂಡ ವಿಧಿಸುದರ ಜೊತೆಗೆ ಅಹಮದಾಬಾದ್ ಮೂಲದ ಕಲರ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಹೊಸ ನಿರ್ಬಂಧನೆಯನ್ನು ನೀಡಿದೆ. ಈ ಬ್ಯಾಂಕ್ ಗೆ RBI ಹಣ ಹಿಂಪಡೆಯುವಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
RBI ಮಹತ್ವದ ನಿರ್ಧಾರ
ಸದ್ಯ RBI ದೇಶದಲ್ಲಿ SBI, Indian Bank and Punjab and Sindh Bank ಗಳಿಗೆ ಬಾರಿ ಮೊತ್ತದ ದಂಡವನ್ನು ವಿಧಿಸಿದೆ. ಈ ಬ್ಯಾಂಕುಗಳಿಗೆ ದಂಡ ವಿಧಿಸಿದ ಬೆನ್ನಲ್ಲೇ RBI Color Merchants Cooperative Bank ನ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸದ್ಯ ಅಹಮದಾಬಾದ್ ಮೂಲದ ಕಲರ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದೀಗ RBI Color Merchants Cooperative Bank ಗೆ ವಿಧಿಸಿರುವ ನಿರ್ಬಂಧದ ಬಗ್ಗೆ ವಿವರ ತಿಳಿಯೋಣ.
ಈ ಬ್ಯಾಂಕಿನ ಗ್ರಾಹಕರು ಇನ್ನುಮುಂದೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನ ಖಾತೆಯಿಂದ ತೆಗೆಯುವಂತಿಲ್ಲ
RBI ಇದೀಗ Color Merchants Cooperative Bank ಗೆ ಹೊಸ ನಿಯಮವನ್ನು ವಿಧಿಸಿದೆ. Septembar 26 ರಿಂದ ಈ ಬ್ಯಾಂಕ್ ಗೆ RBI ನ ಹೊಸ ನಿರ್ಬಂಧಗಳು ಅನ್ವಯವಾಗಲಿದೆ. RBI ಹೊರಡಿಸಿದ ಆದೇಶದ ಪ್ರಕಾರ, ಈ ನಿರ್ಬಂಧಗಳು ಮುಂದಿನ ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ. ಕಲರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ತನ್ನ ಪೂರ್ವಾನುಮತಿ ಇಲ್ಲದೆ ಸಾಲ ನೀಡುವಂತಿಲ್ಲ ಅಥವಾ ಹಳೆಯ ಸಾಲವನ್ನು ನವೀಕರಿಸುವಂತಿಲ್ಲ ಎಂದು RBI ಹೇಳಿದೆ.
ಇದರ ಜೊತೆಗೆ ಯಾವುದೇ ಹೂಡಿಕೆ ಮತ್ತು ಹೊಸ ಠೇವಣಿಗಳನ್ನು ಸ್ವೀಕರಿಸುವುದನ್ನು ಸಹ ನಿರ್ಬಂಧಿಸಲಾಗಿದೆ. ಠೇವಣಿದಾರ ತನ್ನ ಒಟ್ಟು ಠೇವಣಿಗಳಿಂದ 50,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅನುಮತಿಸುವುದಿಲ್ಲ ಎಂದು RBI ಆದೇಶ ಹೊರಡಿಸಿದೆ. ಹಾಗೆಯೆ ಬ್ಯಾಂಕ್‌ನ ಖಾತೆದಾರರು 5 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ನಿಂದ ಠೇವಣಿ ವಿಮೆ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.