Credit Card Rule: ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಇನ್ನೊಂದು ಘೋಷಣೆ, EMI ನಿಯಮ ಬದಲಾವಣೆ.

ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಹೊಸ ರೂಲ್ಸ್.

RBI New Rule For Credit Card: ಜನರು ತಮ್ಮ ಆರ್ಥಿಕ ಸಮಸ್ಯೆಯ ನಿವಾರಣೆಗೆ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ. ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಾಲವು Unsecured Loan ಆಗಿದೆ. ಈ ಅಸುರಕ್ಷಿತ ಸಾಲಗಳನ್ನು ಪಡೆಯುವುದರಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಇನ್ನು ದೇಶದ ಜನಪ್ರಿಯ ಬ್ಯಾಂಕ್ ಗಳು ಹಾಗೂ ಬ್ಯಾಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು ಈ ಅಸುರಕ್ಷಿತ ಸಾಲವನ್ನು ನೀಡುತ್ತವೆ. ಸದ್ಯ RBI ಈ ಅಸುರಕ್ಷಿತ ಸಾಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನುಮುಂದೆ ಬ್ಯಾಂಕ್ ನಲ್ಲಿ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲವನ್ನು ಪಡೆಯುವ ಮುನ್ನ ಎಚ್ಚರಿಕೆ ಈ ಹೊಸ ನಿಯಮನ್ನು ತಿಳಿಯುವುದು ಉತ್ತಮ.

Credit Card New Rule
Image Credit: Bizzbuzz

ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಇನ್ನೊಂದು ಘೋಷಣೆ
RBI ಕಳೆದ ವಾರದಲ್ಲಿ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್‌ ಗಳು ಮತ್ತು NBFC ಗಳು ತಮ್ಮ ಅಸುರಕ್ಷಿತ ಸಾಲ ಪೋರ್ಟ್‌ ಫೋಲಿಯೊಗಳಿಗೆ ಹೆಚ್ಚಿನ ಬಂಡವಾಳವನ್ನು ಮೀಸಲಿಡಬೇಕು ಎಂದು RBI ಘೋಷಿಸಿದೆ. ಈ ಅಗತ್ಯವು ಹಿಂದಿನ ಆದೇಶಕ್ಕಿಂತ 25% ಹೆಚ್ಚಾಗಿದೆ.

ಉದಾಹರಣೆಗೆ, ಬ್ಯಾಂಕ್ ರೂ. 5 ಲಕ್ಷದ ವೈಯಕ್ತಿಕ ಸಾಲವನ್ನು ನೀಡಿದರೆ ಈ ಹಿಂದೆ ಅದೇ ಮೊತ್ತವನ್ನು ಬಂಡವಾಳವಾಗಿ ಮೀಸಲಿಡಬೇಕಿತ್ತು. ಆದರೆ ಪ್ರಸ್ತುತ RBI ಹೊಸ ನಿಯಮದ ಪ್ರಕಾರ, ಮೊದಲಿಗಿಂತ ಶೇ. 25 ರಷ್ಟು ಹೆಚ್ಚು ಅಂದರೆ ರೂ. 6.25 ಲಕ್ಷ ಮಂಜೂರು ಮಾಡಬೇಕಿದೆ. ಅಸುರಕ್ಷಿತ ಸಾಲಗಳಲ್ಲಿನ ಈ ಹೆಚ್ಚಳವು ಹೆಚ್ಚಿನ ಡೀಫಾಲ್ಟ್ ದರಗಳಿಗೆ ಮತ್ತು ಸಕಾಲಿಕ ಪಾವತಿಗಳಲ್ಲಿ ಕಡಿತಕ್ಕೆ ಕಾರಣವಾಗಿದೆ. ಈ ಅಪಾಯಗಳನ್ನು ಕಡಿಮೆಗೊಳಿಸಲು RBI ನಿಯಮಗಳನ್ನು ಬಿಗಿಗೊಳಿಸಿದೆ.

RBI New Rule For Credit Card
Image Credit: Business Today

ಗ್ರಾಹಕರ ಮೇಲೆ RBI ಹೊಸ ನಿಯಮ ಹೇಗೆ ಪರಿಣಾಮ ಬೀರಲಿದೆ..?
RBI ಹೊಸ ಮಾರ್ಗಸೂಚಿ ಪ್ರಕಾರ, ಬ್ಯಾಂಕ್‌ ಗಳು ಮತ್ತು ಎನ್‌ ಬಿಎಫ್‌ ಸಿಗಳು ಅಸುರಕ್ಷಿತ ಸಾಲಗಳಿಗೆ ಹೆಚ್ಚಿನ ಬಂಡವಾಳವನ್ನು ಕಾಯ್ದಿರಿಸಬೇಕಾಗುತ್ತದೆ. ಇದು ಅಂತಹ ಸಾಲಗಳಿಗೆ ಕಡಿಮೆ ಹಣದ ಲಭ್ಯತೆಯ ಬಗ್ಗೆ ತಿಳಿಸುತ್ತದೆ. ಬ್ಯಾಂಕ್‌ ಗಳು ಮತ್ತು ಎನ್‌ ಬಿಎಫ್‌ ಸಿಗಳು ಸಾಲ ಮಂಜೂರಾತಿಗಾಗಿ ಕಟ್ಟುನಿಟ್ಟಿನ ಮಾನದಂಡಗಳನ್ನು ಸಹ ಪರಿಚಯಿಸಿದೆ. ಇದರಿಂದಾಗಿ ಗ್ರಾಹಕರಿಗೆ ಇನ್ನುಮುಂದೆ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲ ಪಡೆಯುವುದು ಕಷ್ಟವಾಗಬಹುದು.

Join Nadunudi News WhatsApp Group

Join Nadunudi News WhatsApp Group