RBI Rule: ಪ್ರತಿ ತಿಂಗಳು ಬ್ಯಾಂಕ್ ಸಾಲ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ RBI, ಇಂದಿನಿಂದ ಹೊಸ ರೂಲ್ಸ್ ಜಾರಿಗೆ.

ಬ್ಯಾಂಕ್ ಸಾಲಗಾರರಿಗೆ ವಿಧಿಸುವ ದಂಡದಲ್ಲಿ ಆರ್ ಬಿಐ ಹೊಸ ನಿಯಮವನ್ನು ಹೊರಡಿಸಿದೆ.

RBI New Rule For Loan Penalty: ಪ್ರಸ್ತುತ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಹೊಸ ಹಣಕಾಸು ವರ್ಷ ಆರಂಭದಿಂದ ಹಣಕಾಸಿನ ನಿಯಮ ಅಂದರೆ ಬ್ಯಾಂಕ್ ನ ನಿಯಮದಲ್ಲಿ ಬಾರಿ ಬದಲಾವಣೆ ತರಲಾಗುತ್ತಿದೆ. ಆರ್ ಬಿಐ (Reserve Bank Of India) ಬ್ಯಾಂಕ್ ಲಾಕರ್ ಒಪ್ಪಂದದಿಂದ ಹಿಡಿದು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡುವ ಹಣದ ಮಿತಿಯವರೆಗೂ ನಿಯಮವನ್ನು ಬದಲಿಸಿದೆ. 

RBI New Rule For Loan Penalty
Image Credit: Rightsofemployees

ಸಾಲ ಪಡೆದವರಿಗೆ ಸಿಹಿ ಸುದ್ದಿ ನೀಡಿದ RBI
ಇನ್ನು ಸಾಲಗಾರರು ಸಾಲವನ್ನು ಪಡೆಯುವಾಗ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕು. ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದ ನಂತರ ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಸಾಲ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪಾದಲ್ಲಿ ಬ್ಯಾಂಕ್ ಸಾಲಗಾರರಿಗೆ ದಂಡ ವಿಧಿಸುತ್ತದೆ.

ಇದೀಗ ಪ್ರತಿ ತಿಂಗಳು ಬ್ಯಾಂಕ್ ಸಾಲ ಕಟ್ಟುವವರಿಗೆ ಆರ್ ಬಿಐ ಸಿಹಿ ಸುದ್ದಿ ನೀಡಿದೆ. ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದವರು ಚಿಂತಿಸುವ ಅಗತ್ಯ ಇರುವುದಿಲ್ಲ. ದೇಶದ ಪ್ರತಿಷ್ಠಿತ ಬ್ಯಾಂಕುಗಳಿಗೆ ಹಾಗು ಸಾಲ ನೀಡುವ ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ಪ್ರತಿ ತಿಂಗಳು ಬ್ಯಾಂಕ್ ಸಾಲ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ RBI
ಬ್ಯಾಕ್ ಗಳು ಸಾಲ ನೀಡುವ ಮೊದಲು ಸಾಲದ ನಿಯಮಗಳನ್ನು ತಿಳಿಸುತ್ತವೆ. ಬ್ಯಾಂಕ್ ನ ಸಾಲದ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇನ್ನು ಸಾಲಗಾರರು ತಮ್ಮ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ. ಇದೀಗ ಬ್ಯಾಂಕ್ ಸಾಲಗಾರರಿಗೆ ವಿಧಿಸುವ ದಂಡದಲ್ಲಿ ಆರ್ ಬಿಐ ಹೊಸ ನಿಯಮವನ್ನು ಹೊರಡಿಸಿದೆ. ಆರ್ ಬಿಐ ವಿಧಿಸಿರುವ ಹೊಸ ನಿಯಮದ ಕೋಟ್ಯಾಂತರ ಸಾಲಗಾರರಿಗೆ ಖುಷಿ ನೀಡಿದೆ.

RBI has issued an order to all banks.
Image Credit: Currentaffairs

ಸಾಲಗಳ ಮೇಲೆ ದಂಡವನ್ನು ವಿಧಿಸುವಂತಿಲ್ಲ
ಸಾಲವನ್ನು ನಿಗದಿತ ಸಮಯದೊಳಗೆ ಪಾವತಿ ಮಾಡದಿದ್ದರೆ ಬ್ಯಾಂಕ್ ಗಳು ಅಥವಾ ಕೆಲವು ಹಣಕಾಸು ಸಂಸ್ಥೆಗಳು ಸಾಮಾನ್ಯ ಬಡ್ಡಿದರದ ಜೊತೆಗೆ ಹೆಚ್ಚಿನ ದಂಡವನ್ನು ವಿಧಿಸುತ್ತದೆ. ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಳ ಖಾತೆಯ ದಂಡದ ಬಗ್ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ.

Join Nadunudi News WhatsApp Group

ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಶುಲ್ಕ ಎಂದು ಪರಿಗಣಿಸಬೇಕೇ ಹೊರತು, ಒಟ್ಟು ಬಡ್ಡಿದರ ಎಂದು ಬಡ್ಡಿಯ ಜತೆಗೆ ಸೇರಿಸಬಾರದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಬ್ಯಾಂಕುಗಳು ಸಾಲಗಾರರಿಗೆ ದಂಡವನ್ನು ವಿಧಿಸುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಬಾರದು. ಅದು ದಂಡದ ಪರಿಕಲ್ಪನೆಯ ದುರ್ಬಳಕೆ ಆಗುತ್ತದೆ ಎಂದು ಆರ್ ಬಿಐ ತಿಳಿಸಿದೆ.

RBI New Rule For Loan Penalty
Image Credit: Thelogicalindian

ಸಾಲಗಳ ಕಂತುಗಳಿಗೆ ಸಂಬಂಧಿಸಿದಂತೆ ಶುಲ್ಕ ವಿಧಿಸಬೇಕೇ ಹೊರತು ಒಟ್ಟು ಸಾಲಕ್ಕೆ ಚಕ್ರಬಡ್ಡಿ ಹಾಕಬಾರದು ಎಂದು RBI ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನ ಹೊರಡಿಸಿದೆ. ಸಾಲದ ಖಾತೆಗಳ ಮೇಲೆ ದಂಡದ ಆಯ್ಕೆಯನ್ನು ಬಳಸಬಾರದು ಎಂದು ಆರ್ ಬಿಐ ಮಾರ್ಗಸೂಚಿಯನ್ನು ಹೊರಡಿಸಿದೆ.

Join Nadunudi News WhatsApp Group