Loan Recovery: ಬ್ಯಾಂಕಿನವರು ಈ ಸಮಯದಲ್ಲಿ ಜನರಿಂದ ಸಾಲ ವಸೂಲಿ ಮಾಡುವಂತಿಲ್ಲ, RBI ನಿಂದ ಬ್ಯಾಂಕ್ ಸಾಲಗಾರರಿಗೆ ಗುಡ್ ನ್ಯೂಸ್.

ಈ ಸಮಯದಲ್ಲಿ ಬ್ಯಾಂಕಿನವರು ಸಾಲ ವಸೂಲಿ ಮಾಡುವಂತಿಲ್ಲ, RBI ನಿಂದ ಹೊಸ ನಿಯಮ.

RBI New Rule For Loan Recovery: ಬ್ಯಾಂಕುಗಳು ಗ್ರಾಹಕರಿಗೆ ವೈಯಕ್ತಿಕ ಸಾಲ, ಗೃಹ ಸಾಲ ಸೇರಿದಂತೆ ವಾಹನ ಸಾಲಗಳನ್ನು ನೀಡುತ್ತದೆ ಎನ್ನುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಬ್ಯಾಂಕ್ ಗಳು ನೀಡುವ ಸಾಲ ಸೌಲಭ್ಯದಿಂದಾಗಿ ಜನರು ತಮ್ಮ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳುತ್ತಿದ್ದರೆ ಎಂದರೆ ತಪ್ಪಾಗಲಾರದು. ಇತ್ತೀಚಿಗೆ Reserve Bank Of India ಸಾಲಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದೆ.

ಸಾಲ ನೀಡುವ ಬ್ಯಾಂಕುಗಳಿಗೆ RBI ಹೊಸ ಹೊಸ ನಿಯಮವನ್ನು ನೀಡುತ್ತಿದೆ. ಬ್ಯಾಂಕುಗಳಲ್ಲಿ ಸಾಲ ಪಡೆದವರು ಹೆಚ್ಚಿನ ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ RBI ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗಷ್ಟೇ RBI ಸಾಲದ ದಂಡ ಹಾಗೂ ಸಾಲ ಪಡೆಯುವಾಗ ಅಡಮಾನವಾಗಿ ಇರಿಸಿಕೊಳ್ಳುವ ಆಸ್ತಿ ದಾಖಲೆಗಳ ಕುರಿತು ಮಹತ್ವದ ಆದೇಶ ಹೊರಡಿಸಿತ್ತು. ಸದ್ಯ RBI ಬ್ಯಾಂಕುಗಳು ಸಾಲ ವಸೂಲಿ ಮಾಡುವಲ್ಲಿ ಮಹತ್ವದ ಆದೇಶವನು ಹೊರಡಿಸಿದೆ.

Loan Recovery Latest Update
Image Credit: Lokmat

ಬ್ಯಾಂಕುಗಳಿಗೆ RBI ಮಹತ್ವದ ಸೂಚನೆ
ಈ ಹಿಂದೆ RBI ವಾಹನ ಸಾಲಗಳಿಗೆ ಸಂಬಂಧಿಸಿದಂತೆ ಸಾಲಗಾರರು ಸಾಲ ಪಾವತಿಸುವಲ್ಲಿ ವಿಳಂಭ ಮಾಡಿದರೆ ಯಾವುದೇ ಕಾರಣಕ್ಕೂ ರಿಕವರಿ ಅಜೇಂಟ್ ಗಳನ್ನೂ ಬಳಸುವಂತಿಲ್ಲ ಎಂದು ಆದೇಶವನ್ನು ಹೊರಡಿಸಿತ್ತು. ಸದ್ಯ ಬ್ಯಾಂಕುಗಳು ಯಾವ ಯಾವ ಸಮಯದಲ್ಲಿ ಮಾತ್ರ ಸಾಲವನ್ನು ವಸೂಲಿ ಮಾಡಬಹುದು ಎಂದು RBI ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಇನ್ನುಮುಂದೆ ಬ್ಯಾಂಕುಗಳು ಸಾಲವನ್ನು ವಸೂಲಿ ಮಾಡುವಾಗ RBI ನಿಯಮವನ್ನು ಪಾಲಿಸಬೇಕಿದೆ.

ಬ್ಯಾಂಕಿನವರು ಈ ಸಮಯದಲ್ಲಿ ಜನರಿಂದ ಸಾಲ ವಸೂಲಿ ಮಾಡುವಂತಿಲ್ಲ
ಸಾಮಾನ್ಯವಾಗಿ ಬ್ಯಾಂಕ್ ಗಳು ಸಾಲವನ್ನು ಮರುಪಾವತಿ ಮಾಡದೆ ಇರುವವರಿಗೆ ಮೊದಲು ಕರೆ ಮಾಡಿ ಸಾಲವನ್ನು ಮರುಪಾವತಿ ಮಾಡುವಂತೆ ಸೂಚನೆ ನೀಡುತ್ತದೆ. ಕರೆಯ ಬಳಿಕ ನೋಟಿಸ್ ಜಾರಿ ಮಾಡಲು ಮುಂದಾಗುತ್ತದೆ. ಸದ್ಯ ಬಾಕಿ ಇರುವ ಸಾಲದ ವಸೂಲಾತಿಗೆ ಸಂಬಂಧಿಸಿದಂತೆ RBI ಕಠಿಣ ಕ್ರಮ ಕೈಗೊಂಡಿದೆ.

RBI New Rules For Loan Recovery
Image Credit: Moneycontrol

RBI ಹೊಸ ನಿಯಮದ ಪ್ರಕಾರ, ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಸೂಲಾತಿ ಏಜೆನ್ಟ್ ಗಳು ಸಾಲಗಾರರನ್ನು ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆ ಮಾಡುವಂತಿಲ್ಲ ಎಂದು RBI ಖಡಕ್ ಆದೇಶ ಹೊರಡಿಸಿದೆ. ಇನ್ನು ಸಾಲ ಮರುಪಾವತಿಗೆ ಕರೆ ಮಾಡಲು ಬ್ಯಾಂಕುಗಳಿಗೆ RBI ಸಮಯಾವಕಾಶವನ್ನು ನಿಗದಿಪಡಿಸಿದೆ. ದೇಶದ ಎಲ್ಲ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group