RBI Rule: ಇನ್ನುಮುಂದೆ ಬ್ಯಾಂಕಿನವರೇ ನಿಮಗೆ ಕೊಡಬೇಕು ಪ್ರತಿನಿತ್ಯ 5000 ರೂ, ಬ್ಯಾಂಕ್ ಲೋನ್ ಮಾಡಿದವರಿಗೆ ಗುಡ್ ನ್ಯೂಸ್.

ಬ್ಯಾಂಕುಗಳು ಈ ತಪ್ಪು ಮಾಡಿದರೆ ನೀಡಬೇಕು 5000 ದಂಡ.

RBI New Rule For Loan Repayment: ದೇಶದಲ್ಲಿ ಇತ್ತೀಚಿಗೆ ಬ್ಯಾಂಕುಗಳ ನಿಯಮಗಳು ಸಾಕಷ್ಟು ಬದಲಾಗುತ್ತಿದೆ. RBI ದೇಶದ ಕೆಲ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದ ಬಳಿಕ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ದೇಶದ ವಿವಿಧ ಬ್ಯಾಂಕುಗಳಿಗೆ Reserve Bank Of India ಅನೇಕ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ದೇಶದ ಎಲ್ಲಾ ಪ್ರತಿಷ್ಠಿತ ಬ್ಯಾಂಕುಗಳು RBI ನಿಯಮಾನುಸಾರ ಗ್ರಾಹಕರ ಜೊತೆ ವಹಿವಾಟನ್ನು ನಡೆಸಬೇಕಿದೆ.

ಇತ್ತೀಚಿಗೆ RBI ಸಾಲಗಾರರಿಗಾಗಿ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಬ್ಯಾಂಕುಗಳಲ್ಲಿ ಸಾಲ ಪಡೆಯುತ್ತಿರುವವರಿಗೆ RBI ಹೆಚ್ಚಿನ ಭದ್ರತೆಯನ್ನು ನೀಡುತ್ತಿದೆ. ಬ್ಯಾಂಕುಗಳು ಸಾಲಗಾರರಿಗೆ RBI ನಿಯಮದ ಪ್ರಕಾರ ಸಾಲವನ್ನು ನೀಡಬೇಕಿದೆ. ಇನ್ನು ಇತ್ತೀಚೆಗಷ್ಟೇ RBI ಸಾಲದ ದಂಡದ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿತ್ತು. ಇದೀಗ ಸಾಲದ ದಂಡದ ನಿಯಮ ಬದಲಾವಣೆಯ ಬೆನ್ನಲ್ಲೇ RBI ಬ್ಯಾಂಕುಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ.

RBI New Rule For Loan Repayment
Image Credit: Other Source

ದೇಶದ ಎಲ್ಲಾ ಬ್ಯಾಂಕುಗಳಿಗೂ RBI ಮಹತ್ವದ ಮಾಹಿತಿ
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸಬೇಕಾಗುತ್ತದೆ. ಗ್ರಾಹಕರು ಇರಿಸುವ ಆಸ್ತಿ ಪುರಾವೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಇದೀಗ ಸಾಲದ ಸಮಯದಲ್ಲಿ ಬ್ಯಾಂಕುಗಳಲ್ಲಿ ಇರಿಸಲಾದ ಆಸ್ತಿ ಪತ್ರದ ಮರುಕಳಿಸುವಿಕೆಯ ಬಗ್ಗೆ RBI ದೇಶದ ಎಲ್ಲಾ ಬ್ಯಾಂಕುಗಳಿಗೂ ಮಾರ್ಗಸೂಚಿ ಹೊರಡಿಸಿದೆ.

ಬ್ಯಾಂಕುಗಳಿ 30 ದಿನದೊಳಗೆ ಈ ಕೆಲಸ ಮಾಡುವುದು ಕಡ್ಡಾಯ
ಇದೀಗ RBI ಸಾಲ ನೀಡುವ ಬ್ಯಾಂಕುಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು ಎಂದು ಆದೇಶ ಹೊರಡಿಸಿದೆ. ಸಾಲ ಮರುಪಾವತಿಸಿದ ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಸಾಲಗಾರರಿಗೆ ಹಿಂತಿರುಗಿಸಬೇಕಿದೆ.

Loan Repayment Documents Delay
Image Credit: Etvbharat

ಬ್ಯಾಂಕುಗಳು ಈ ತಪ್ಪು ಮಾಡಿದರೆ ನೀಡಬೇಕು 5000 ದಂಡ
ಸಾಲಗಾರರು ಸಾಲ ಮರುಪಾವತಿಸಿದ ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

Join Nadunudi News WhatsApp Group

ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ. ನಿಗದಿತ ದಿನಗಳ ಒಳಗೆ ಬ್ಯಾಂಕ್ ಸಾಲಗಾರರಿಗೆ Property Documents ಗಳನ್ನೂ ನೀಡದಿದ್ದರೆ ದಿನಕ್ಕೆ 5000 ರೂ ದಂಡವನ್ನ ನೀಡಬೇಕಾಗುತ್ತದೆ.

Join Nadunudi News WhatsApp Group