RBI New Guideline: 500 ರೂ ನೋಟುಗಳ ಮೇಲೆ ಹೊಸ ಮಾರ್ಗಸೂಚಿ ಪ್ರಕಟಿಸಿದ RBI, ಹಣ ಇದ್ದವರು ತಪ್ಪದೆ ಈ ಕೆಲಸ ಮಾಡಿ.
RBI 500 ರೂ. ಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
RBI New Guideline On 500 Rupees: ಸದ್ಯ ದೇಶದಲ್ಲಿ 2000 ರೂ. ನೋಟ್ ಬ್ಯಾನ್ ಆದ ನಂತರ 500 ರೂ. ನೋಟುಗಳು ಹೆಚ್ಚು ಮೌಲ್ಯವನ್ನು ಪಡೆದುಕೊಂಡಿದೆ ಎನ್ನಬಹುದು. RBI ಪ್ರಸ್ತುತ 10, 20, 50, 100, 500 ಮುಖಬೆಲೆಯ ನೋಟುಗಳನ್ನು ಚಲಾವಣೆಯಲ್ಲಿರಿಸಿದೆ. ಇನ್ನು 2000 ರೂಪಾಯಿ ನೋಟ್ ಬ್ಯಾನ್ ಆದ ಬಳಿಕ 500 ರೂ. ಕೂಡ ಬ್ಯಾನ್ ಆಗುವುದಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದು, ಈ ಬಗ್ಗೆ RBI ಸ್ಪಷ್ಟನೆ ನೀಡಿದೆ.
ಸದ್ಯ 500 ರೂ. ಬ್ಯಾನ್ ಭೀತಿ ಜನರಲ್ಲಿ ಹೋಗಿದೆ ಎನ್ನಬಹುದು. ಸದ್ಯ 500 ರೂಪಾಯಿಯ ಎರಡು ನೋಟುಗಳಿದ್ದು, ಮತ್ತು ಎರಡಕ್ಕೂ ಒಂದೇ ಸರಣಿ ಸಂಖ್ಯೆ ಇದ್ದರೆ ಅಂತಹ ನೋಟುಗಳ ಬಗ್ಗೆ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಇನ್ನು 500 ರೂ. ನೋಟುಗಳ ಕುರಿತಾಗಿ ನೀವು ಚಿಂತಿಸುವ ಅಗತ್ಯ ಇಲ್ಲ. RBI 500 ರೂ. ಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
500 ರೂ ನೋಟುಗಳ ಮೇಲೆ ಹೊಸ ಮಾರ್ಗಸೂಚಿ ಪ್ರಕಟಿಸಿದ RBI
ಇನ್ನು ಸಾಕಷ್ಟು ಬಾರಿ ಎಟಿಎಂನಿಂದ ಹಣ ಡ್ರಾ ಮಾಡುವಾಗಲೂ ವಿಕೃತ ಅಥವಾ ಹಳೆಯ ನೋಟುಗಳು ಪತ್ತೆಯಾಗುತ್ತವೆ. ಈ ಸಮಯದಲ್ಲಿ ಜನರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ RBI ಇದೀಗ ಬ್ಯಾಂಕುಗಳಿಗೆ ಹರಿದ ಅಥವಾ ಕೊಳಕಾದ ನೋಟುಗಳ ವಿನಿಮಯ ಮಾಡುವಂತೆ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ. RBI ನಿಯಮದ ಅಡಿಯಲ್ಲಿ ದೇಶದ ಎಲ್ಲ ಬ್ಯಾಂಕ್ ಗಳು ಹರಿದ ಅಥವಾ ಕೊಳಕಾದ ನೋಟುಗಳನ್ನೂ ವಿನಿಮಯ ಮಾಡಿಕೊಳ್ಳಬೇಕಿದೆ.
RBI ನಿಯಮದ ಪ್ರಕಾರ, ನಿಮ್ಮ ಬಳಿ ಇರುವ ಹರಿದ ಅಥವಾ ಕೊಳಕಾದ ನೋಟುಗಳು 50 ಪ್ರತಿಶತಕ್ಕಿಂತ ಕಡಿಮೆ ಹಾಳಾಗಿದ್ದರೆ ನೀವು ನೋಟಿನ ಪೂರ್ಣ ಮೊತ್ತವನ್ನು ಪಡೆಯುತ್ತೀರಿ. ನಿಮ್ಮ ಬಳಿ ಇರುವ ಹರಿದ 500 ರೂಪಾಯಿ ನೋಟಿನ ಗಾತ್ರವು 80 ಚದರ ಸೆಂಟಿಮೀಟರ್ ಆಗಿದ್ದರೆ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ, ಆದರೆ ಅದು 40 ಚದರ ಸೆಂಟಿಮೀಟರ್ ಆಗಿದ್ದರೆ, ಅರ್ಧದಷ್ಟು ಮರುಪಾವತಿಯನ್ನು ನೀಡಲಾಗುತ್ತದೆ.
ನಕಲಿ ನೋಟುಗಳನ್ನು ಪತ್ತೆಹಚ್ಚುವ ವಿಧಾನ ಹೇಗೆ..?
*500 ರೂ. ನೋಟಿನ ಬಣ್ಣವು ಸ್ಟೋನ್ ಗ್ರೇ ಆಗಿದ್ದು, ಕೆಂಪು ಕೋಟೆಯ ಲಕ್ಷಣವನ್ನು ಹೊಂದಿದ್ದು, ಮಹಾತ್ಮಗಾಂಧಿ ಸರಣಿಯಲ್ಲಿನ ರೂ. 500 ಮುಖಬೆಲೆಯ ನೋಟುಗಳು ಆರ್ ಬಿಐ ಗವರ್ನರ್ ಸಹಿಯನ್ನು ಹೊಂದಿದೆ.
*RBI ನೀಡಿರುವ ಮಾಹಿತಿಯ ಪ್ರಕಾರ, 500 ರೂ. ನೋಟಿನ ಗಾತ್ರವು 63 mm x 150 mm ಆಗಿದ್ದು, ದೇವನಾಗರಿ ಲಿಪಿಯಲ್ಲಿ ಭರತ್ ಮತ್ತು ಇಂಡಿಯಾ ಎಂದು ಬರೆಯಲಾಗಿದೆ.
*ಭಾರತ್ ಮತ್ತು RBI ಶಾಸನಗಳೊಂದಿಗೆ ಬಣ್ಣದ ಭದ್ರತಾ ದಾರ ಇರುತ್ತದೆ. ನೋಟನ್ನು ತಿರುಗಿಸಿದಾಗ ದಾರದ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
*500 ರೂ. ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನ ಇದ್ದು, ನೋಟಿನ ಮೇಲೆ ಎಡ ಮತ್ತು ಕೆಳಭಾಗದಲ್ಲಿ ಆರೋಹಣ ಹಾಗೂ ಮುಂಭಾಗದಲ್ಲಿ ಅಂಕಿಗಳೊಂದಿಗೆ ಸಂಖ್ಯೆಯ ಫಲಕವನ್ನು ಇರಿಸಲಾಗಿದೆ.