RBI Update 2024: 2000 ರೂ ನೋಟುಗಳ ಮೇಲೆ ಇನ್ನೊಂದು ಘೋಷಣೆ ಮಾಡಿದ RBI, ಸುತ್ತೋಲೆ ಹೊರಡಿಸಿದ RBI.

2000 ರೂ ನೋಟುಗಳ ಮೇಲೆ ಇನ್ನೊಂದು ಘೋಷಣೆ ಮಾಡಿದ RBI

RBI New Update On 2000 Note: ದೇಶದಲ್ಲಿ ಮೊದಲ ಬಾರಿಗೆ ನೋಟ್ ಬ್ಯಾನ್ ಆದ ಸಮಯದಲ್ಲಿ ಚಲಾವಣೆಗೆ ಬಂದಿದ್ದ ಗುಲಾಬಿ ಬಣ್ಣದ 2000 ರೂ. ನೋಟುಗಳು ಭಾರತೀಯ ಕರೆನ್ಸಿ ಸ್ಥಾನವನ್ನುಕಳೆದುಕೊಂಡು ಸಾಕಷ್ಟು ಸಮಯವಾಗಿದೆ. ದೇಶದಲ್ಲಿ May 19 ರಂದು RBI 2000 ರೂ. ನೋಟುಗಳನ್ನು ಅಮಾನ್ಯಗೊಳಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. October 7 ರ ವರೆಗೆ ಜನರು ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು.

RBI About 2000 Note
Image Credit: India TV News

2000 ರೂ. ನೋಟಿನ ಬಗ್ಗೆ ಬಿಗ್ ಅಪ್ಡೇಟ್
ಇನ್ನು October 8 ರಿಂದ ಬ್ಯಾಂಕ್ ನಲ್ಲಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸಿಸದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ. Reserve Bank Of India (RBI) 19 ಕಚೇರಿಗಳಲ್ಲಿ 2000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯ ವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಸದ್ಯ RBI ಕಚೇರಿಗಳಲ್ಲಿ ನೋಟು ವಿನಿಮಯಪ್ರಕ್ರಿಯೆ ನಡೆಯುತ್ತಿರುವ ವೇಳೆ RBI 2000 ರೂ. ನೋಟಿನ ಕುರಿತಾಗಿ ಮಹತ್ವದ ಘೋಷಣೆ ಹೊರಡಿಸಿದೆ.

2000 ರೂ ನೋಟುಗಳ ಮೇಲೆ ಇನ್ನೊಂದು ಘೋಷಣೆ ಮಾಡಿದ RBI
RBI ಗುರುವಾರ 2000 ರೂ. ನೋಟಿನ ಬಗ್ಗೆ ದೊಡ್ಡ ನವೀಕರಣವನ್ನು ನೀಡಿದೆ. 97.5 ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಆದರೆ, 8,897 ಕೋಟಿ ಮೌಲ್ಯದ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ.

RBI New Update On 2000 Note
Image Credit: India Today

ಕೇಂದ್ರ ಬ್ಯಾಂಕ್ ಹೇಳಿಕೆಯ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಹೇಳಿಕೆಯಲ್ಲಿ, “ಮೇ 19, 2023 ರಂದು 2,000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದಾಗ, ಆ ದಿನದ ವ್ಯವಹಾರದ ಮುಕ್ತಾಯದ ಸಮಯದಲ್ಲಿ, ಒಟ್ಟು 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ಅಂತಹ ನೋಟುಗಳು ಚಲಾವಣೆಯಲ್ಲಿದ್ದವು. ಜನವರಿ 2024 ರಂದು ವ್ಯವಹಾರದ ಮುಕ್ತಾಯದ ವೇಳೆಗೆ ಈ ಮೊತ್ತವು 8,897 ಕೋಟಿ ರೂ. ಗೆ ಇಳಿಕೆಯಾಗಿದೆ. ಮೇ 19, 2023 ರವರೆಗೆ ಚಲಾವಣೆಯಲ್ಲಿರುವ 2,000 ರೂ. ಗಳ ಒಟ್ಟು ನೋಟುಗಳಲ್ಲಿ 97.5 ಪ್ರತಿಶತವು ಹಿಂತಿರುಗಿದೆ. ಇನ್ನು ಸ್ವಲ್ಪ ಪ್ರಮಾಣದ ನೋಟುಗಳು ಹಿಂದಿರುಗುವುದು ಬಾಕಿ ಇದೆ. ಹೀಗಾಗಿ, “2,000 ರೂ. ಬ್ಯಾಂಕ್ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ” ಎಂದು RBI ಹೇಳಿದೆ.

Join Nadunudi News WhatsApp Group

Join Nadunudi News WhatsApp Group