Ads By Google

OD Account: ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಈಗ ನಿಮಗೆ ಸಿಗಲಿದೆ 10000 ರೂ, ಕೇಂದ್ರದ ಯೋಜನೆಗೆ ಇಂದೇ ಸೇರಿ.

overdraft facility

Image Credit: Original Source

Ads By Google

RBI Overdraft Facility: ದೇಶದ ಎಲ್ಲಾ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತಲೇ ಇರುತ್ತದೆ. RBI ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ರೀತಿಯ ಸೌಲಭ್ಯವನ್ನು ಪರಿಚಯಿಸುತ್ತದೆ. ಇದೀಗ Non-Banking Financial Company (NBFC) ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಇನ್ನುಮುಂದೆ ಗ್ರಾಹಕರು ತಮ್ಮ ಬ್ಯಾಂಕ್ ನಲ್ಲಿ ಶೂನ್ಯ ಹಣ ಇದ್ದರು ಕೂಡ ಖಾತೆಯಿಂದ ಹಣ ಪಡೆಯಲು ಅವಕಾಶ ಸಿಗಲಿದೆ. ಗ್ರಾಹಕರಿಗೆ ಈ ಸೌಲಭ್ಯ ನೀಡಲು RBI Overdraft Facility ಯನ್ನು ಪರಿಚಯಿಸಿದೆ. ಈ ಸೌಲಭ್ಯದ ಮೂಲಕ ಗ್ರಾಹಕರು ಸುಲಭವಾಗಿ ತಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ಕೊಡ ಹಣವನ್ನು ಹಿಂಪಡೆಯಬಹುದಾಗಿದೆ.

Image Credit: Lendingkart

RBI Overdraft Facility
RBI ಯುಪಿಐ ವ್ಯವಸ್ಥೆಯಲ್ಲಿ ವಹಿವಾಟುಗಳಿಗಾಗಿ ಬ್ಯಾಂಕ್‌ಗಳು ನೀಡುವ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳನ್ನು ಸೇರಿಸಲು ಸಹ ಘೋಷಿಸಿದೆ. ಇಲ್ಲಿಯವರೆಗೆ UPI ವ್ಯವಸ್ಥೆಯ ಮೂಲಕ ಠೇವಣಿ ಮೊತ್ತದ ವಹಿವಾಟುಗಳನ್ನು ಮಾತ್ರ ಮಾಡಬಹುದಾಗಿತ್ತು. ಇದೀಗ UPI ವ್ಯಾಪ್ತಿಯನ್ನು ವಿಸ್ತರಿಸಿದ್ದು ಗ್ರಾಹಕರು ಹೆಚ್ಚಿನ ಅನುಕೂಲವನ್ನು ಪಡೆಯಬಹುದು.

ಬ್ಯಾಂಕ್‌ ಗಳಲ್ಲಿ ಈಗಾಗಲೇ ಅನುಮೋದಿಸಲಾದ ಸಾಲ ಸೌಲಭ್ಯದಿಂದ ವರ್ಗಾವಣೆಯನ್ನು ಅನುಮೋದಿಸಲು ಹೇಳಲಾಗಿದೆ. ಪ್ರಸ್ತುತ ಉಳಿತಾಯ ಖಾತೆಗಳು, Overdraft ಖಾತೆಗಳು, ಪ್ರಿಪೇಯ್ಡ್ ವ್ಯಾಲೆಟ್‌ ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು UPI ಗೆ ಲಿಂಕ್ ಮಾಡಬಹುದು. ರಿಸರ್ವ್ ಬ್ಯಾಂಕ್ UPI ಮೂಲಕ ಬ್ಯಾಂಕ್‌ ಗಳಲ್ಲಿ ಪೂರ್ವ-ಅನುಮೋದಿತ ಸಾಲ ಸೌಲಭ್ಯದ ಬಗ್ಗೆ ಸುತ್ತೋಲೆಯನ್ನು ಸಹ ಹೊರಡಿಸಿದೆ. UPI ವ್ಯಾಪ್ತಿಗೆ ಸಾಲ ಸೌಲಭ್ಯವನ್ನೂ ಸೇರಿಸಲಾಗಿದೆ ಎಂದು RBI ಮೂಲಕ ಮಹತ್ವದ ವಿಷಯ ತಿಳಿಸಿದೆ.

Image Credit: Thequint

ಓವರ್‌ ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ವಯಸ್ಸಿನ ಮಿತಿ ಎಷ್ಟು..?
ಓವರ್‌ ಡ್ರಾಫ್ಟ್ ಸೌಲಭ್ಯವನ್ನು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಒದಗಿಸುತ್ತವೆ. ಓವರ್‌ ಡ್ರಾಫ್ಟ್ ಅನ್ನು ಗ್ರಾಹಕರ ಉಳಿತಾಯ ಅಥವಾ ಚಾಲ್ತಿ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುವ ಗ್ರಾಹಕರು ವಯಸ್ಸು 21 ವರ್ಷದಿಂದ 65 ವರ್ಷಗಳ ನಡುವೆ ಇರಬೇಕು.

ಗ್ರಾಹಕರ CIBIL ಸ್ಕೋರ್ ಉತ್ತಮವಾಗಿರಬೇಕು, ಆಗ ಮಾತ್ರ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದು. ಓವರ್‌ ಡ್ರಾಫ್ಟ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು, ಸಂಸ್ಕರಣಾ ಶುಲ್ಕದ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಿ. ಕೆಲವು ಬ್ಯಾಂಕ್‌ಗಳು ಈ ಸೇವೆಗೆ ಸಂಸ್ಕರಣಾ ಶುಲ್ಕವನ್ನೂ ವಿಧಿಸುತ್ತವೆ. ಕೆಲವು ಬ್ಯಾಂಕುಗಳು ಪೂರ್ವ ಅನುಮೋದಿತ ಗ್ರಾಹಕರಿಗೆ ಈ ಸೌಲಭ್ಯವನ್ನು ಒದಗಿಸುತ್ತವೆ. ಅದೇ ಸಮಯದಲ್ಲಿ ಅನೇಕ ಗ್ರಾಹಕರು ಇದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು ಈ ಸೌಲಭ್ಯವನ್ನು ಬಳಸಿಕೊಂಡು 10,000 ವರೆಗೆ ಸಾಲವನ್ನು ಪಡೆಯಬಹುದು.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.