RBI Penalty: ಈ ಸಹಕಾರಿ ಬ್ಯಾಂಕಿಗೆ 13.30 ಲಕ್ಷ ರೂ ದಂಡ ಹಾಕಿದ RBI, ಹಣ ಕಳೆದುಕೊಳ್ಳುವ ಆತಂಕದಲ್ಲಿ ಖಾತೆದಾರರು.
ಈ ಸಹಕಾರಿ ಬ್ಯಾಂಕಿಗೆ 13.30 ಲಕ್ಷ ರೂ ದಂಡ ಹಾಕಿದ RBI.
Penalty On SVC Co- operative Bank: ದೇಶದಲ್ಲಿ ಕೇಂದ್ರ ಬ್ಯಾಂಕ್ (Reserve Bank) ಇತ್ತೀಚಿಗೆ ವಿವಿಧ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎನ್ನಬಹುದು. Reserve Bank Of India ಗ್ರಾಹಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಬ್ಯಾಂಕ್ ಗಳಿಗೆ ವಿವಿಧ ನಿಯಮವನ್ನು ಅಳವಡಿಸಿದೆ. ಇನ್ನು RBI ಈ ವರ್ಷದಲ್ಲಿ ಹೆಚ್ಚಿನ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ ಎನ್ನಬಹುದು.
ಇದಕ್ಕೆ ಕಾರಣ ಬ್ಯಾಂಕ್ ಗಳು RBI ನಿಯಮ ಪಾಲಿಸದೆ ಇರುವುದಾಗಿದೆ. ಸದ್ಯ RBI ಈ ಸಹಕಾರಿ ಬ್ಯಾಂಕ್ ಗೆ ಬಾರಿ ದೊಡ್ಡ ಮೊತ್ತದ ದಂಡವನ್ನು ವಿಧಿಸಲು ಮುಂದಾಗಿದೆ. ಇದೀಗ RBI ಯಾವ ಬ್ಯಾಂಕ್ ಗೆ ದಂಡ ವಿಧಿಸಿದೆ? ಹಾಗೆಯೆ ಕೇಂದ್ರ ಬ್ಯಾಂಕ್, ಬ್ಯಾಂಕ್ ಗೆ ದಂಡ ವಿಧಿಸಲು ಕಾರಣವೇನು? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಸಹಕಾರಿ ಬ್ಯಾಂಕ್ 13.30 ಲಕ್ಷ ರೂ. ದಂಡ
ಸದ್ಯ RBI ದೇಶದಲ್ಲಿ September ಹಾಗೂ October ನಲ್ಲಿ ಬರೋಬ್ಬರಿ 8 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಬಂಡವಾಳ ಹಾಗೂ ಗಳಿಕೆಯ ಕೊರತೆಯ ಹಿನ್ನಲೆ RBI ಬ್ಯಾಂಕ್ ಗಳ ವಿರುದ್ಧ ಈ ಕಠಿಣ ಕ್ರಮ ಕೈಗೊಂಡಿದೆ ಎನ್ನಬಹುದು. ಸಹಕಾರಿ ಬಂಕ್ ಗಳು RBI ನಿಯಮ ಉಲ್ಲಂಘನೆ ಮಾಡಿರುವುದು ಕೂಡ ಒಂದು ರೀತಿಯಲ್ಲಿ ಪರವಾನಗಿ ರದ್ದತಿಗೆ ಕಾರಣವಾಗಿದೆ. ಇದೀಗ RBI October 23 ರಂದು SVC ಸಹಕಾರಿ ಬ್ಯಾಂಕ್ ಗೆ ಬರೋಬ್ಬರಿ 13 .30 ಲಕ್ಷ ರೂ. ದಂಡವನ್ನು ವಿಧಿಸಿದೆ.
SVC ಸಹಕಾರಿ ಬ್ಯಾಂಕ್ ಗೆ RBI ದಂಡ ವಿಧಿಸಲು ಕಾರಣವೇನು..?
‘ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಗಳಲ್ಲಿ’ ಎಟಿಎಂ ಕಾರ್ಡ್‌ಗಳಿಗೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಬ್ಯಾಂಕ್ ವಿಧಿಸುತ್ತಿದೆ. ಈ ಬ್ಯಾಂಕ್ ಗ್ರಾಹಕರಿಗೆ ATM ಶುಲ್ಕ ವಿದಿಸುತ್ತಿರುವುದು RBI ಗಮನಕ್ಕೆ ಬಂದಿದೆ. ಈ ಕಾರಣಕ್ಕೆ SVC ಬ್ಯಾಂಕ್ ಗೆ ವಿತ್ತೀಯ ದಂಡವನ್ನು ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದೆ.