EMI Hike: ಬ್ಯಾಂಕ್ ಸಾಲ ಮಾಡಿದವರಿಗೆ ಮತ್ತೆ ಬೇಸರ ಸುದ್ದಿ, ಇನ್ನಷ್ಟು ದುಬಾರಿಯಾಯಿತು ಸಾಲದ EMI.
ಬ್ಯಾಂಕ್ ಸಾಲಗಳ ಮೇಲೆ ಇನ್ನೊಂದು ಹೊಸ ನಿಯಮ ಜಾರಿಗೆ ತಂದ RBI
RBI Hike Bank Loan EMI: ಬ್ಯಾಂಕ್ ಗಳು ವೈಯಕ್ತಿಕ ಸಾಲ, ಗೃಹಸಾಲ, ವಾಹನ ಶಾಲಾ, ಶಿಕ್ಷಣ ಸಾಲವನ್ನು ನೀಡುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ವಿವಿಧ ಸಾಲಗಳಿಗೆ ಅನೇಕ ವಿಭಿನ್ನ ಬಡ್ಡಿದರವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ವಿದಿಸಿರುತ್ತದೆ. ಇತ್ತೀಚೆಗಂತೂ RBI ಬ್ಯಾಂಕ್ ಸಾಲದಲ್ಲಿ ಸಾಕಷ್ಟು ಬದಲಾವಣೆ ತರುತ್ತಿದೆ. ಸದ್ಯ RBI ಬ್ಯಾಂಕ್ ನೀಡುವ Personal Loan ಸಂಬಂಧಿತ ಮಹತ್ವದ ನಿರ್ಧಾರ ಕೈಗೊಂಡಿದೆ.
RBI ಹೊಸ ನಿಯಮದ ಅನುಸಾರ ಇನ್ನುಮುಂದೆ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದು ಕಷ್ಟವಾಗಬಹುದು. ವೈಯಕ್ತಿಕ ಸಾಲ ಇನ್ನುಮುಂದೆ ಮತ್ತಷ್ಟು ದುಬಾರಿಯಾಗಲಿದೆ. RBI ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದಂತೆ ನಿಯಮವನ್ನು ಕಠಿಣಗೊಳಿಸಿದೆ. ನೀವು Personal Loan ಪಡೆಯುವ ಯೋಜನೆಯಲ್ಲಿದ್ದರೆ RBI ನ ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ.
ಬ್ಯಾಂಕ್ ಸಾಲ ಮಾಡಿದವರಿಗೆ ಮತ್ತೆ ಬೇಸರ ಸುದ್ದಿ
ಪರ್ಸನಲ್ ಲೋನ್ ಅನ್ನು RBI ಭದ್ರತೆ ಇಲ್ಲದೆ ಸಾಲ ಅಂದರೆ Unsecured Loan ಎಂದು ಪರಿಗಣಿಸಿದೆ. ಈ ಕಾರಣಕ್ಕೆ ಬ್ಯಾಂಕುಗಳಿಗೆ ಇರುವ Risk Factor ಪ್ರಮಾಣವನ್ನು ಶೇ. 25 ರಿಂದ ಶೇ. 125 ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಚಿನ್ನ ಮತ್ತು ಚಿನ್ನಾಭರಣದ ಮೇಲಿನ ರಿಸ್ಕ್ ಫ್ಯಾಕ್ಟಾರ್ ಅನ್ನು ಶೇ.100 ರ ಹಾಗೆ ಮುಂದುವರೆಯಲಿದೆ. RBI ಹೊಸ ನಿಯಮ ಗೃಹ ಸಾಲ, ಶಿಕ್ಷಣ ಸಾಲ ಮತ್ತು ವಾಹನ ಸಾಲಕ್ಕೆ ಅನ್ವಯವಾಗುವುದಿಲ್ಲ. ಪರ್ಸನಲ್ ಲೋನ್ ಹೆಚ್ಚಿನ ಸುರಕ್ಷತೆಯನ್ನು ನೀಡದಿರುವ ಕಾರಣ RBI ಗ್ರಾಹಕರಿಗೆ ಹೊಸ ನಿಯಮವನ್ನು ಪರಿಚಯಿಸಿದೆ ಎನ್ನಬಹುದು.
ಇನ್ನಷ್ಟು ದುಬಾರಿ ಆಗಲಿದೆ ಸಾಲದ EMI
RBI ಕಳೆದ ವಾರದಲ್ಲಿ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್ ಗಳು ಮತ್ತು NBFC ಗಳು ತಮ್ಮ ಅಸುರಕ್ಷಿತ ಸಾಲ ಪೋರ್ಟ್ ಫೋಲಿಯೊಗಳಿಗೆ ಹೆಚ್ಚಿನ ಬಂಡವಾಳವನ್ನು ಮೀಸಲಿಡಬೇಕು ಎಂದು RBI ಘೋಷಿಸಿದೆ. ಈ ಅಗತ್ಯವು ಹಿಂದಿನ ಆದೇಶಕ್ಕಿಂತ 25% ಹೆಚ್ಚಾಗಿದೆ.
ಉದಾಹರಣೆಗೆ, ಬ್ಯಾಂಕ್ ರೂ. 5 ಲಕ್ಷದ ವೈಯಕ್ತಿಕ ಸಾಲವನ್ನು ನೀಡಿದರೆ ಈ ಹಿಂದೆ ಅದೇ ಮೊತ್ತವನ್ನು ಬಂಡವಾಳವಾಗಿ ಮೀಸಲಿಡಬೇಕಿತ್ತು. ಆದರೆ ಪ್ರಸ್ತುತ RBI ಹೊಸ ನಿಯಮದ ಪ್ರಕಾರ, ಮೊದಲಿಗಿಂತ ಶೇ. 25 ರಷ್ಟು ಹೆಚ್ಚು ಅಂದರೆ ರೂ. 6.25 ಲಕ್ಷ ಮಂಜೂರು ಮಾಡಬೇಕಿದೆ. ಅಸುರಕ್ಷಿತ ಸಾಲಗಳಲ್ಲಿನ ಈ ಹೆಚ್ಚಳವು ಹೆಚ್ಚಿನ ಡೀಫಾಲ್ಟ್ ದರಗಳಿಗೆ ಮತ್ತು ಸಕಾಲಿಕ ಪಾವತಿಗಳಲ್ಲಿ ಕಡಿತಕ್ಕೆ ಕಾರಣವಾಗಿದೆ.
ಈ ಅಪಾಯಗಳನ್ನು ಕಡಿಮೆಗೊಳಿಸಲು RBI ನಿಯಮಗಳನ್ನು ಬಿಗಿಗೊಳಿಸಿದೆ. RBI ಹೊಸ ಮಾರ್ಗಸೂಚಿ ಪ್ರಕಾರ, ಬ್ಯಾಂಕ್ ಗಳು ಮತ್ತು ಎನ್ ಬಿಎಫ್ ಸಿಗಳು ಅಸುರಕ್ಷಿತ ಸಾಲಗಳಿಗೆ ಹೆಚ್ಚಿನ ಬಂಡವಾಳವನ್ನು ಕಾಯ್ದಿರಿಸಬೇಕಾಗುತ್ತದೆ. ಇನ್ನುಮುಂದೆ ಬ್ಯಾಂಕ್ ನಲ್ಲಿ ಅಸುರಕ್ಷಿತ ಸಲಗಳಾದ ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆಯಯುವವರು RBI ನಿಯಮಾನುಸಾರ ಸಾಲಪಡೆಯಬೇಕಿದೆ. ದೇಶದ ವಿವಿಧ ಬ್ಯಾಂಕ್ ಗಳು ತನ್ನ ಸಾಲದ ನಿಯಮದಲ್ಲಿ ಈ ಹೊಸ ನಿಯಮವನ್ನು ಅಳವಡಿಸಿಕೊಳ್ಳುತ್ತಿವೆ.