RBI New Repo Rate: ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಸ್ವಂತ ಮನೆ ಕಟ್ಟಬೇಕು ಅನ್ನುವ ಆಸೆ ಇರುತ್ತದೆ. ತಮ್ಮದೇ ಆದ ಸ್ವಂತ ಮನೆ ಇರಬೇಕು ಅನ್ನುವ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ಸಾಲ ಮಾಡಿಯಾದರೂ ಕೂಡ ಕಟ್ಟುತ್ತಾರೆ. ಸದ್ಯ ಮನೆ ಕಟ್ಟುವ ಎಲ್ಲರಿಗೂ ಕೂಡ ಬ್ಯಾಂಕುಗಳು ಗೃಹಸಾಲ ನೀಡುತ್ತಿದೆ. ಆದರೆ ಹೆಚ್ಚಿನ EMI ಕಾರಣ ಜನರು ಸಾಲ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಇದೀಗ ಗೃಹ ಸಾಲ ಮಾಡುವವರಿಗೆ RBI ಸಿಹಿ ಸುದ್ದಿಯನ್ನು ನೀಡಿದೆ. RBI ರೆಪೋ ದರದಲ್ಲಿ ಮತ್ತೆ ಈಗ ಇಳಿಕೆ ಮಾಡಿದ್ದು ಗೃಹಸಾಲಗಳ ಬಡ್ಡಿದರ ಕೂಡ ಕಡಿಮೆ ಆಗಿದೆ. ಹಾಗಾದರೆ RBI ರೆಪೋ ದರವನ್ನು ಎಷ್ಟು ಇಳಿಕೆ ಮಾಡಿದ ಮತ್ತು ಈಗಿನ ರೆಪೋ ದರ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರೆಪೋ ದರ ಎಂದರೇನು..? ರೆಪೋ ದರ ಕಡಿಮೆ ಮಾಡಿದ RBI
ರೆಪೋ ದರ ಎಂದರೆ RBI ಬ್ಯಾಂಕ್ ಗಳಿಗೆ ಸಾಲ ನೀಡುವ ದರ ಆಗಿದೆ. ನೀವು ಗೃಹ ಸಾಲ ಪಡೆದುಕೊಳ್ಳಲು ಯೋಚನೆ ಮಾಡುತ್ತಿದ್ದಾರೆ, ಇದು ನಿಮಗೆ ಸಂತಸದ ಸುದ್ದಿ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2025 ರ ಡಿಸೆಂಬರ್ 5 ರಂದು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದೆ. ರೆಪೋ ದರವನ್ನು 0.25% ಕಡಿತ ಮಾಡಿ 5.25% ಗೆ ಇಳಿಸಿದೆ. ಇದರಿಂದ ಗೃಹ ಸಾಲದ ಬಡ್ಡಿದರ ಕೂಡ ಕಡಿಮೆ ಆಗಿದೆ. ಹೊಸ ಸಾಲದಾತರು ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ರೆಪೋ ದರದ ಕಡಿತದಿಂದ EMI ಎಷ್ಟು ಕಡಿಮೆ ಆಗುತ್ತೆ?
ಸದ್ಯ HDFC, SBI, ICICI ಬ್ಯಾಂಕ್ ಗಳು ಗೃಹ ಸಾಲದ ಮೇಲೆ 7.3% ರಿಂದ 7.9% ರವರೆಗೆ ಬಡ್ಡಿದರವನ್ನು ವಿಧಿಸುತ್ತವೆ. ಇದೀಗ 25 bps ಕಡಿತದಿಂದಾಗಿ 0.25% ಕಡಿಮೆ ಆಗಿ 7% ಬಡ್ಡಿಗೆ ಗೃಹ ಸಾಲವನ್ನು ನೀಡಬಹುದಾಗಿದೆ. ಮತ್ತು ಹಳೆಯ ಸಾಲಗಳು MCLR ಅಥವಾ ರೆಪೋ ಲಿಂಕ್ಡ್ ಆಗಿದ್ದರೆ, ಬ್ಯಾಂಕ್ ಗಳು 1 ರಿಂದ 2 ತಿಂಗಳಲ್ಲಿ ಬದಲಾವಣೆ ಮಾಡುತ್ತವೆ. ಉದಾಹರಣೆಗೆ, 8.5% ರಿಂದ 7.25% ಗೆ ಬದಲಾವಣೆಯಾಗಿ ದೊಡ್ಡ ಮಟ್ಟಿನ ಉಳಿತಾಯವಾಗುತ್ತದೆ.
| ಬ್ಯಾಂಕ್ | ಹಿಂದಿನ ದರ (ನವೆಂಬರ್) | ಹೊಸ ದರ (ಡಿಸೆಂಬರ್ 6) | ಕಡಿತ |
|---|---|---|---|
| SBI | 8.40% – 9.10% | 7.95% – 8.65% | 45–50 bps |
| HDFC Bank | 8.50% – 9.15% | 7.90% – 8.50% | 60 bps |
| ICICI Bank | 8.50% – 9.10% | 7.85% – 8.45% | 65 bps |
| Axis Bank of Baroda | 8.40% – 9.20% | 7.95% – 8.60% | 45–60 bps |
| Kotak Mahindra | 8.55% – 9.20% | 8.10% – 8.70% | 45 bps |
EMI ಕಡಿತದಿಂದ ಎಷ್ಟು ಲಾಭ?
* 50 ಲಕ್ಷ ಸಾಲವನ್ನು 20 ವರ್ಷ ಅವಧಿಗೆ ಪಡೆದುಕೊಂಡಿದ್ದು, ಬಡ್ಡಿದರ 8.5% ನಿಂದ 7.25% ಗೆ ಇಳಿದರೆ, EMI 3,900 ರೂ. ಕಡಿಮೆಯಾಗುತ್ತದೆ, ಒಟ್ಟು 20 ವರ್ಷಗಳಲ್ಲಿ 9.29 ಲಕ್ಷ ಉಳಿತಾಯವಾಗುತ್ತದೆ.
* 35 ಲಕ್ಷ ಸಾಲವನ್ನು 20 ವರ್ಷ ಅವಧಿಗೆ ಪಡೆದುಕೊಂಡಿದ್ದು, ಬಡ್ಡಿದರ 8.5% ನಿಂದ 7.25% ಗೆ ಇಳಿದರೆ, EMI 1,850 ರೂ. ಕಡಿಮೆಯಾಗುತ್ತದೆ.
* 50 ಲಕ್ಷ ಸಾಲವನ್ನು 15 ವರ್ಷ ಅವಧಿಗೆ ಪಡೆದುಕೊಂಡಿದ್ದು, ಬಡ್ಡಿದರ 8.5% ನಿಂದ 7.25% ಗೆ ಇಳಿದರೆ EMI 719 ರೂ. ಕಡಿಮೆಯಾಗುತ್ತದೆ, ಒಟ್ಟು 20 ವರ್ಷಗಳಲ್ಲಿ 9.29 ಲಕ್ಷ ಉಳಿತಾಯವಾಗುತ್ತದೆ.
| ಸಾಲ ಮೊತ್ತ | ಹಳೆಯ ಬಡ್ಡಿ 8.75% ರಂದು EMI | ಹೊಸ ಬಡ್ಡಿ 7.90% ರಂದು EMI | ಮಾಸಿಕ ಉಳಿತಾಯ | 20 ವರ್ಷದಲ್ಲಿ ಒಟ್ಟು ಉಳಿತಾಯ |
|---|---|---|---|---|
| ₹30 ಲಕ್ಷ | ₹26,498 | ₹24,162 | ₹2,336 | ₹5.61 ಲಕ್ಷ |
| ₹50 ಲಕ್ಷ | ₹44,163 | ₹40,270 | ₹3,893 | ₹9.34 ಲಕ್ಷ |
| ₹75 ಲಕ್ಷ | ₹66,245 | ₹60,405 | ₹5,840 | ₹14.02 ಲಕ್ಷ |
| ₹1 ಕೋಟಿ | ₹88,326 | ₹80,540 | ₹7,786 | ₹18.69 ಲಕ್ಷ |
| ₹1.5 ಕೋಟಿ | ₹1,32,489 | ₹1,20,810 | ₹11,679 | ₹28.03 ಲಕ್ಷ |
Disclaimer: This information is provided for awareness purposes only. For personalised legal advice, consult a qualified professional and refer to official government notifications.

