Repo Rate: ಬ್ಯಾಂಕ್ ಖಾತೆ ಮತ್ತು ಬ್ಯಾಂಕಿನಲ್ಲಿ ಸಾಲ ಮಾಡಿದವರಿಗೆ ನಾಳೆಯಿಂದ ಹೊಸ ನಿಯಮ, RBI ನಿರ್ಧಾರ ಅಂತಿಮ.
ಬ್ಯಾಂಕಿನಲ್ಲಿ ಸಾಲ ಮಾಡಿದವರಿಗೆ RBI ನಿಂದ ಮತ್ತೆ ಬೇಸರದ ಸುದ್ದಿ ಬರುವ ಸಾಧ್ಯತೆ ಇದೆ.
RBI Repo Rate Update: ಇತ್ತೀಚಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸಿದೆ. 2023 -24 ಹಣಕಾಸು ವರ್ಷ (Financial Year) ಏಪ್ರಿಲ್ 1 2023 ರಿಂದ ಆರಂಭಗೊಂಡಿದೆ. ಈ ಹೊಸ ಹಣಕಾಸು ವರ್ಷದ ಆರಂಭದಿಂದಾಗಿ ಅನೇಕ ಹಣಕಾಸಿನ ನಿಯಮಗಳಲ್ಲಿ ಬದಲಾವಣೆಯಾಗಿದೆ.
ಇನ್ನು ಜನಸಾಮಾನ್ಯರು ಈ ಹೊಸ ಹಣಕಾಸು ವರ್ಷದ ಆರಂಭದಿಂದ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ. ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಈ ಹಣದುಬ್ಬರ ಪ್ರಭಾವ ಬೀರುತ್ತಿದೆ.
ಆರ್ ಬಿಐ ರೆಪೋ ದರ (RBI Repo Rate)
ಇನ್ನು ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಕೂಡ ತಮ್ಮ ಬಡ್ಡಿದರವನ್ನು ಹೆಚ್ಚಿಸುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆರ್ ಬಿಐ ರೆಪೋ ದರ ಹೆಚ್ಚಿಸಿದೆ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸುತ್ತವೆ. ಇದೀಗ ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ಕೈಗೊಂಡ ತೀರ್ಮಾನದ ಬಗ್ಗೆ ಮಾಹಿತಿ ತಿಳಿಯಬೇಕಿದೆ.
ಆರ್ ಬಿಐ ರೆಪೋ ದರ ಏರಿಕೆ ಸಾಧ್ಯತೆ
ಕಳೆದ ಹಣಕಾಸು ವರ್ಷದಲ್ಲಿ ಕೂಡ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ ಆರ್ ಬಿಐ ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು.
ಇದೀಗ RBI ರೆಪೋ ದರ ಮತ್ತೆ ಹೆಚ್ಚಳ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಸಾಲಗಳ ಹೊರೆ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ. ಇನ್ನು ಆರ್ ಬಿಐ ಎಂಪಿಸಿ ಸಭೆ ಆಗಸ್ಟ್ 8 ರಿಂದ 10 ರವರೆಗೆ ನಡೆಯಲಿದ್ದು, ರೆಪೋ ದರ ಹೆಚ್ಚಿಸಬೇಕೋ ಅಥವಾ ಯಥಾ ಸ್ಥಿತಿಯಲ್ಲಿ ಇರಿಸಬೇಕೋ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಇನ್ನು ವರದಿಗಳ ಪ್ರಕಾರ ರೆಪೋ ದರದ ಏರಿಕೆಯ ಸಾಧ್ಯತೆ ಕಡಿಮೆ ಇದೆ. ಇನ್ನು ಆಗಸ್ಟ್ 10 ರಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಲಿದ್ದಾರೆ. 2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಈ ರೆಪೋ ದರಗಳ ಹೆಚ್ಚಳ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಿದೆ. ಇನ್ನು ಮುಂದಿನ ಎರಡು ತಿಂಗಳವರೆಗೆ ರೆಪೋ ದರ ಹೆಚ್ಚಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ.