RBI Update: ಸಾಯಂಕಾಲ 7 ಘಂಟೆಯ ನಂತರ ಯಾರು ಕೂಡ ಕಾಲ್ ಮಾಡುವಂತಿಲ್ಲ, RBI ನಿಂದ ಜಾರಿಗೆ ಬಂತು ಹೊಸ ರೂಲ್ಸ್.

ಬ್ಯಾಂಕ್ ಸಾಲದ ವಸೂಲಾತಿ ಕುರಿತಂತೆ ಇನ್ನೊಂದು ಆದೇಶ ಹೊರಡಿಸಿದ RBI.

RBI New Rule For Loan Recovery: RBI ಸದ್ಯ ದೇಶದಲ್ಲಿ ಹೊಸ ಹೊಸ ನಿಯಮವನ್ನು ರೂಪಿಸುತ್ತಿದೆ. ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಕೇಂದ್ರ ಬ್ಯಾಂಕ್ ಒಂದೊಂದು ನಿಯಮವನ್ನು ಜಾರಿಗೆ ತರುತ್ತಿದೆ ಎನ್ನಬಹುದು. ಸದ್ಯ ಕೇಂದ್ರ ಬ್ಯಾಂಕ್ ಈಗಾಗಲೇ ದೇಶದಲ್ಲಿ ವಿವಿಧ ಸಾಲದ ನಿಯಮವನ್ನು ಜಾರಿಗೆ ತಂದಿದೆ. ಬ್ಯಾಂಕುಗಳಿಗೆ RBI ಮಹತ್ವದ ಆದೇಶವನ್ನು ಹೊರಡಿಸುತ್ತಲೇ ಇದೆ.

ಇತ್ತೀಚೆಗಷ್ಟೇ ಬ್ಯಾಂಕುಗಳಿಗೆ RBI ಸಾಲದ ಸಮಯದಲ್ಲಿ ಅಡಮಾನವಾಗಿರಿಸಿಕೊಳ್ಳುವ ದಾಖಲೆಗಳ ಬಗ್ಗೆ ಮಹತ್ವದ ಆದೇಶ ಹೊರಡಿಸಿತ್ತು. ಸಾಲಗಾರರು ಸಾಲ ಮರು ಪಾವತಿಸಿದ 30 ದಿನದ ಒಳಗೆ ಸಾಲಗಾರರ ಆಸ್ತಿ ಪತ್ರಗಳನ್ನು ಅವರಿಗೆ ನೀಡುವಂತೆ ಆದೇಶ ಹೊರಡಿಸಿತ್ತು. ಇದೀಗ ಈ ನಿಯಮದ ಬೆನ್ನಲ್ಲೇ ಸಾಲದ ವಸೂಲಾತಿ ಬಗ್ಗೆ ಕೂಡ RBI ಹೊಸ ನಿಯಮವನ್ನು ಜಾರಿಗೆ ತಂದಿದೆ. RBI ಹೊಸ ನಿಯಮವನ್ನು ದೇಶದ ವಿವಿಧ ಬ್ಯಾಂಕುಗಳು ತಪ್ಪದೆ ಪಾಲಿಸಬೇಕಿದೆ.

RBI New Rule
Image Credit: Informalnewz

ಸಾಯಂಕಾಲ 7 ಘಂಟೆಯ ನಂತರ ಯಾರು ಕೂಡ ಕಾಲ್ ಮಾಡುವಂತಿಲ್ಲ
ಸದ್ಯ ಬ್ಯಾಂಕುಗಳು ಯಾವ ಯಾವ ಸಮಯದಲ್ಲಿ ಮಾತ್ರ ಸಾಲವನ್ನು ವಸೂಲಿ ಮಾಡಬಹುದು ಎಂದು RBI ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಇನ್ನುಮುಂದೆ ಬ್ಯಾಂಕುಗಳು ಸಾಲವನ್ನು ವಸೂಲಿ ಮಾಡುವಾಗ RBI ನಿಯಮವನ್ನು ಪಾಲಿಸಬೇಕಿದೆ. ಸಾಮಾನ್ಯವಾಗಿ ಬ್ಯಾಂಕ್ ಗಳು ಸಾಲವನ್ನು ಮರುಪಾವತಿ ಮಾಡದೆ ಇರುವವರಿಗೆ ಮೊದಲು ಕರೆ ಮಾಡಿ ಸಾಲವನ್ನು ಮರುಪಾವತಿ ಮಾಡುವಂತೆ ಸೂಚನೆ ನೀಡುತ್ತದೆ. ಕರೆಯ ಬಳಿಕ ನೋಟಿಸ್ ಜಾರಿ ಮಾಡಲು ಮುಂದಾಗುತ್ತದೆ.

RBI New Rules For Loan Recovery
Image Credit: News 18

ಸದ್ಯ ಬಾಕಿ ಇರುವ ಸಾಲದ ವಸೂಲಾತಿಗೆ ಸಂಬಂಧಿಸಿದಂತೆ RBI ಕಠಿಣ ಕ್ರಮ ಕೈಗೊಂಡಿದೆ. RBI ಹೊಸ ನಿಯಮದ ಪ್ರಕಾರ, ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಸೂಲಾತಿ ಏಜೆನ್ಟ್ ಗಳು ಸಾಲಗಾರರನ್ನು ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆ ಮಾಡುವಂತಿಲ್ಲ ಎಂದು RBI ಖಡಕ್ ಆದೇಶ ಹೊರಡಿಸಿದೆ.

ಇನ್ನು ಸಾಲ ಮರುಪಾವತಿಗೆ ಕರೆ ಮಾಡಲು ಬ್ಯಾಂಕುಗಳಿಗೆ RBI ಸಮಯಾವಕಾಶವನ್ನು ನಿಗದಿಪಡಿಸಿದ್ದು, ಎಲ್ಲಾ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಈ ನಿಯಮ ಎಲ್ಲಾ ಬ್ಯಾಂಕುಗಳಿಗೆ ಅನ್ವಯ ಆಗುತ್ತದೆ ಎಂದು RBI ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group