Ads By Google

CIBIL Score Rules: Cibil ಸ್ಕೋರ್ ನಿಯಮದಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಸುಲಭವಾಗಿ ಸಿಗಲಿದೆ ಬ್ಯಾಂಕ್ ಸಾಲ

CIBIL Score Rules

Image Source: Mint

Ads By Google

RBI New Guidelines For CIBIL Score: ನೀವು ಸಾಲವನ್ನು ಪಡೆಯಲು ಹೋದಾಗ ಬ್ಯಾಂಕ್ ಗಳು ನಿಮ್ಮ CIBIL Score ಅನ್ನು ಪರಿಶೀಲನೆ ಮಾಡುತ್ತದೆ. ಸಾಲ ಪಡೆಯುವವರಿಗೆ ಈ CIBIL Score ಎಷ್ಟು ಮುಖ್ಯವಾಗಿರುತ್ತದೆ ಎನ್ನುದು ಎಲ್ಲರಿಗೂ ತಿಳಿದಿರುವ ವಿಚಾರ.

CIBIL Score ಉತ್ತಮವಾಗಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ನೀವು ಸಾಲವನ್ನು ಪಡೆಯಬಹುದು. ಇದೀಗ ನಿಮಗೆ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಲು CIBIL Score ನಿಯಮದಲ್ಲಿ ಕೆಲವು ಬದಲಾವಣೆಯನ್ನ ಮಾಡಲಾಗಿದೆ. ಅದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Image Credit: online38media

⁃ಡಿಫಾಲ್ಟ್ ರಹಸ್ಯಗಳಿಗೆ ವಿದಾಯ
ಕ್ರೆಡಿಟ್ ಕಂಪನಿಗಳೊಂದಿಗೆ ಡಿಫಾಲ್ಟರ್‌ಗಳ ಪಟ್ಟಿಯನ್ನು ಹಂಚಿಕೊಳ್ಳುವ ಮೊದಲು, ಬ್ಯಾಂಕ್ ಗಳು ಗ್ರಾಹಕರಿಗೆ ತಿಳಿಸುದು ಮುಖ್ಯವಾಗಿದೆ. ಇದು ಗ್ರಾಹಕರಿಗೆ ತಮ್ಮ CIBIL ಸ್ಕೋರ್ ಕುಸಿತದಿಂದ ಸರಿಪಡಿಸಲು ಮತ್ತು ರಕ್ಷಿಸಲು ಅವಕಾಶವನ್ನು ನೀಡುತ್ತದೆ.

⁃ಫಾಸ್ಟ್ ಟ್ರ್ಯಾಕ್ ನಲ್ಲಿ ದೂರು
ವಿನಂತಿಗಳನ್ನು ತಿರಸ್ಕರಿಸುವ ಅಥವಾ ಕ್ರೆಡಿಟ್ ಮಾಹಿತಿಯನ್ನು ತಪ್ಪಾಗಿ ನಿರ್ವಹಿಸುವ ಕಂಪನಿಗಳು ದೂರುಗಳನ್ನು ಪರಿಹರಿಸಲು 30 ದಿನಗಳನ್ನು ಹೊಂದಿರುತ್ತವೆ. 30 ದಿನದೊಳಗೆ ದೂರನ್ನು ಪರಿಹರಿಸದಿದ್ದರೆ, 100 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.

Image Credit: Original Source

⁃ಉಚಿತ ವಾರ್ಷಿಕ ಪೂರ್ಣ ಕ್ರೆಡಿಟ್ ವರದಿ
ರಿಸರ್ವ್ ಬ್ಯಾಂಕ್ ಪ್ರಕಾರ, ಕ್ರೆಡಿಟ್ ಕಂಪನಿಗಳು ತಮ್ಮ ಗ್ರಾಹಕರಿಗೆ ವರ್ಷಕ್ಕೊಮ್ಮೆ ಉಚಿತವಾಗಿ ಸಂಪೂರ್ಣ ಕ್ರೆಡಿಟ್ ಸ್ಕೋರ್ ಅನ್ನು ಒದಗಿಸಬೇಕು. ಇದಕ್ಕಾಗಿ, ಕ್ರೆಡಿಟ್ ಕಂಪನಿಯು ತನ್ನ ವೆಬ್ ಸೈಟ್ ನಲ್ಲಿ ಲಿಂಕ್ ಅನ್ನು ಪ್ರದರ್ಶಿಸಬೇಕಾಗುತ್ತದೆ. ಇದರಿಂದ ಗ್ರಾಹಕರು ತಮ್ಮ ಉಚಿತ ಪೂರ್ಣ ಕ್ರೆಡಿಟ್ ವರದಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

⁃ತಡವಾದ ಪರಿಹಾರಕ್ಕಾಗಿ ದಂಡ
ಕ್ರೆಡಿಟ್ ಮಾಹಿತಿ ಕಂಪನಿಯು ಗ್ರಾಹಕರ ದೂರನ್ನು 30 ದಿನಗಳಲ್ಲಿ ಪರಿಹರಿಸದಿದ್ದರೆ, ದಿನಕ್ಕೆ 100 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಅಂದರೆ ದೂರನ್ನು ಎಷ್ಟು ತಡವಾಗಿ ಪರಿಹರಿಸುತ್ತಾರೆ ಅಷ್ಟು ದಂಡವನ್ನ ಪಾವತಿಸಬೇಕಾಗುತ್ತದೆ. ಸಾಲ ನೀಡುವ ಸಂಸ್ಥೆಗೆ 21 ದಿನಗಳು ಮತ್ತು ಕ್ರೆಡಿಟ್ ಬ್ಯೂರೋ ಒಂಬತ್ತು ದಿನಗಳನ್ನು ಪಡೆಯುತ್ತದೆ. 21 ದಿನಗಳಲ್ಲಿ ಬ್ಯಾಂಕ್ ಕ್ರೆಡಿಟ್ ಬ್ಯೂರೋಗೆ ತಿಳಿಸದಿದ್ದರೆ, ಬ್ಯಾಂಕ್ ಪರಿಹಾರವನ್ನು ಪಾವತಿಸುತ್ತದೆ.

Image Credit: Vidyamana

⁃ನಿರಾಕರಣೆ ಕಾರಣ ತಿಳಿಸಬೇಕು
ಗ್ರಾಹಕರ ವಿನಂತಿಯನ್ನು ತಿರಸ್ಕರಿಸಿದರೆ, ಕಂಪನಿಯು ತಕ್ಷಣವೇ ಕಾರಣಗಳನ್ನು ತಿಳಿಸಬೇಕು. ಬ್ಯಾಂಕ್ ಗಳು ಹಾಗೂ ಸಾಲ ನೀಡುವ ಸಂಸ್ಥೆಯಿಂದ ನೇಮಕಗೊಂಡ ನೋಡಲ್ ಅಧಿಕಾರಿಗಳು ಕ್ರೆಡಿಟ್ ಸಂಬಂಧಿತ ವಿವಾದವನ್ನು ನಿಭಾಯಿಸುತ್ತಾರೆ ಮತ್ತು ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತಾರೆ.

⁃ಪೂರ್ವ ವರದಿ ಮಾಡುವ ಸಂವಹನ
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಗ್ರಾಹಕರು ಡೀಫಾಲ್ಟ್ ಮಾಡಲು ಹೋದರೆ ಡೀಫಾಲ್ಟ್ ಅನ್ನು ವರದಿ ಮಾಡುವ ಮೊದಲು ಗ್ರಾಹಕರಿಗೆ ತಿಳಿಸುವುದು ಮುಖ್ಯವಾಗಿರುತ್ತದೆ. ಸಾಲ ನೀಡುವ ಸಂಸ್ಥೆಗಳು SMS ಕಳುಹಿಸುವ ಮೂಲಕ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಬೇಕು. ಇದಲ್ಲದೇ ಬ್ಯಾಂಕ್‌ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field