Loan Close: ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ RBI ನಿಂದ ಹೊಸ ರೂಲ್ಸ್, ಅಡವಿಟ್ಟ ದಾಖಲೆ ವಾಪಾಸ್ ಪಡೆದುಕೊಳ್ಳಿ.

ಬ್ಯಾಂಕಿನಲ್ಲಿ ಸಾಲ ಮಾಡಿದ ಎಲ್ಲರಿಗೂ ಗುಡ್ ನ್ಯೂಸ್ ನೀಡಿದ RBI.

RBI Loan Repayment Latest Update: ಭಾರತೀಯ Reserve Bank ಈಗಾಗಲೇ ದೇಶದಲ್ಲಿ ಅನೇಕ ನಿಯಮಗಳನ್ನು ಬದಲಿಸುತ್ತಿದೆ ಎನ್ನಬಹುದು. ಕಳೆದ Septembar ಹಾಗೂ October ನಲ್ಲಿ RBI 8 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ.

ಈ ಪ್ರಕ್ರಿಯೆಯ ಬಳಿಕ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಲೇ ಇವೆ. ಇತ್ತೀಚೆಗಂತೂ RBI ಸಾಲದ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದೆ. ಸದ್ಯ ಸಾಲ ಮರುಪಾವತಿಗೆ ಸಂಬಂಧಿಸಿದಂತೆ RBI ಬ್ಯಾಂಕುಗಳಿಗೆ ಮಹತ್ವದ ಸೂಚನೆ ನೀಡಿದೆ. ನೀವು ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ.

RBI Latest Update
Image Credit: Globalgreenews

ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ RBI ನಿಂದ ಹೊಸ ರೂಲ್ಸ್
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸಬೇಕಾಗುತ್ತದೆ. ಗ್ರಾಹಕರು ಇರಿಸುವ ಆಸ್ತಿ ಪುರಾವೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಸಾಲ ಪಡೆದ ನಂತರ ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಇನ್ನು ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿಸಿದರೆ ಬ್ಯಾಂಕ್ ಅಡಮಾನವಾಗಿ ಇರಿಸಿಕೊಂಡ ವಸ್ತುಗಳನ್ನು ತಕ್ಷಣವೇ ಹಿಂತಿರುಗಿಸಬೇಕಿದೆ. December 1 ರಿಂದ RBI ನ ಈ ಹೊಸ ನಿಯಮ ಜಾರಿಗೆ ಬರಲಿದೆ.

ಅಡವಿಟ್ಟ ದಾಖಲೆ ವಾಪಾಸ್ ಪಡೆದುಕೊಳ್ಳಿ
ಇದೀಗ RBI ಸಾಲ ನೀಡುವ ಬ್ಯಾಂಕುಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು ಎಂದು ಆದೇಶ ಹೊರಡಿಸಿದೆ. ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

RBI Loan Repayment Latest Update
Image Credit: Original Source

RBI ಈ ನಿಯಮದಿಂದ ಸಾಲಗಾರರಿಗೆ ಅನುಕೂಲವಾಗಲಿದೆ
*ಬ್ಯಾಂಕುಗಳು ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ.

Join Nadunudi News WhatsApp Group

*ನಿಗದಿತ ಸಮಯದೊಳಗೆ ಈ ಕೆಲಸ ಆಗದಿದ್ದರೆ ಬ್ಯಾಂಕುಗಳು ದಂಡದ ರೂಪದಲ್ಲಿ ಗ್ರಾಹಕರಿಗೆ ಮೊತ್ತವನ್ನು ನೀಡಬೇಕಾಗುತ್ತದೆ.

*30 ದಿನಗಳ ಒಳಗೆ ಬ್ಯಾಂಕ್ ಸಾಲಗಾರರಿಗೆ Property Documents ಗಳನ್ನೂ ನೀಡದಿದ್ದರೆ ದಿನಕ್ಕೆ 5,000 ರೂ ದಂಡವನ್ನ ನೀಡಬೇಕಾಗುತ್ತದೆ.

*ದಾಖಲೆಗಳು ಹಾನಿಯಾದಲ್ಲಿ ಹೆಚ್ಚುವರಿಯಾಗಿ ಬ್ಯಾಂಕುಗಳಿಗೆ 30 ದಿನ ಸಮಯವನ್ನು ನೀಡಲಾಗುತ್ತದೆ.

Join Nadunudi News WhatsApp Group