Bank Loan Penalty: ಬ್ಯಾಂಕಿನಲ್ಲಿ ಸಾಲ ಕಟ್ಟುವ ಜನರಿಗೆ ಸಿಹಿಸುದ್ದಿ, ಬ್ಯಾಂಕುಗಳಿಗೆ ಆದೇಶ ಹೊರಡಿಸಿದ RBI.

ಸಾಲಗಳ ಮೇಲೆ ಬ್ಯಾಂಕುಗಳು ಹಾಕುವ ಚಕ್ರಬಡ್ಡಿಯ ಮೇಲೆ ಹೊಸ ನಿಯಮ ಜಾರಿಗೆ ತಂದ RBI.

RBI Rules On Bank Loan Penalty: ದೇಶದಲ್ಲಿನ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ಇನ್ನು ಸಾಲಗಾರರು ಸಾಲವನ್ನು ಪಡೆಯುವಾಗ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕು.

ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದ ನಂತರ ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಸಾಲ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪಾದಲ್ಲಿ ಬ್ಯಾಂಕ್ ಸಾಲಗಾರರಿಗೆ ದಂಡ ವಿಧಿಸುತ್ತದೆ.

RBI Rules On Bank Loan Penalty
Image Source: Times Of India

ಸಾಲಗಾರರಿಗೆ ಬ್ಯಾಂಕ್ ವಿಧಿಸುವ ದಂಡಲ್ಲಿ ಹೊಸ ನಿಯಮ
ಬ್ಯಾಕ್ ಗಳು ಸಾಲ ನೀಡುವ ಮೊದಲ ಸಾಲದ ನಿಯಮಗಳನ್ನು ತಿಳಿಸುತ್ತವೆ. ಬ್ಯಾಂಕ್ ನ ಸಾಲದ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇನ್ನು ಸಾಲಗಾರರು ತಮ್ಮ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ.

ಇದೀಗ ಬ್ಯಾಂಕ್ ಸಾಲಗಾರರಿಗೆ ವಿಧಿಸುವ ದಂಡದಲ್ಲಿ ಆರ್ ಬಿಐ (Reserve Bank Of India) ಕರುಡು ನಿಯಮವನ್ನು ಹೊರಡಿಸಿದೆ. ಆರ್ ಬಿಐ ವಿಧಿಸಿರುವ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯೋಣ.

RBI Rules On Bank Loan Penalty
Image Source: News18

ಆರ್ ಬಿಐ ಮಹತ್ವದ ಘೋಷಣೆ
ಸಾಲವನ್ನು ನಿಗದಿತ ಸಮಯದೊಳಗೆ ಪಾವತಿ ಮಾಡದಿದ್ದರೆ, ಬ್ಯಾಂಕ್ ಗಳು ಅಥವಾ ಕೆಲವು ಹಣಕಾಸು ಸಂಸ್ಥೆಗಳು ಸಾಮಾನ್ಯ ಬಡ್ಡಿದರದ ಜೊತೆಗೆ ಸಮೀಕರಿಸಿ ದಂಡವನ್ನು ವಿಧಿಸುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪತ್ತೆ ಮಾಡಿದೆ.

Join Nadunudi News WhatsApp Group

ಈ ಹಿನ್ನೆಲೆಯಲ್ಲಿ ಸಾಲಗಳಿಗೆ ದಂಡ ವಿಧಿಸುವುದಕ್ಕೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಆರ್ ಬಿಐ ರಚಿಸಿದೆ. ಏಪ್ರಿಲ್ 12 2023 ರಿಂದ ಹೊಸ ನಿಯಮ ಜಾರಿಗೊಳ್ಳಲಿದೆ. ‘ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಶುಲ್ಕ ಎಂದು ಪರಿಗಣಿಸಬೇಕೇ ಹೊರತು, ಒಟ್ಟು ಬಡ್ಡಿದರ ಎಂದು ಬಡ್ಡಿಯ ಜತೆಗೆ ಸೇರಿಸಬಾರದು’ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ಬ್ಯಾಂಕುಗಳು ಸಾಲಗಾರರಿಗೆ ದಂಡವನ್ನು ವಿಧಿಸುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಬಾರದು. ಅದು ದಂಡದ ಪರಿಕಲ್ಪನೆಯ ದುರ್ಬಳಕೆ ಆಗುತ್ತದೆ ಎಂದು ಆರ್ ಬಿಐ ತಿಳಿಸಿದೆ. ಸಾಲಗಳ ಕಂತುಗಳಿಗೆ ಸಂಬಂಧಿಸಿದಂತೆ ಶುಲ್ಕ ವಿಧಿಸಬೇಕೇ ಹೊರತು ಒಟ್ಟು ಸಾಲಕ್ಕೆ ಚಕ್ರಬಡ್ಡಿ ಹಾಕಬಾರದು ಎಂದು RBI ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನ ಹೊರಡಿಸಿದೆ.

RBI Rules On Bank Loan Penalty
Image Source: News18

Join Nadunudi News WhatsApp Group