RBI And UPI: UPI ಬಳಸುವವರಿಗೆ RBI ನಿಂದ ಇನ್ನೊಂದು ಹೊಸ ನಿಯಮ, ರಾತ್ರೋರಾತ್ರಿ ಮಹತ್ವದ ಘೋಷಣೆ.

UPI ಮಿತಿಯ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ RBI.

RBI Rules On UPI Lite: ಇತ್ತೀಚಿನ ದಿನಗಳಲ್ಲಿ ಜನರು ನಗದು ಹಣದ ವ್ಯವಹಾರ ಮಾಡುವುದು ಕಡಿಮೆ ಮಾಡಿದ್ದಾರೆ ಎಂದು ಹೇಳಬಹುದು. ದೇಶದಲ್ಲಿ ಡಿಜಿಟಲ್ ಪಾವತಿ ಬಹಳ ಎತ್ತರಕ್ಕೆ ಹೋಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಜನರು ಹೆಚ್ಚು ಹೆಚ್ಚು ಡಿಜಿಟಲ್ ಪಾವತಿ ಮಾಡುತ್ತಿದ್ದು ಇದು ದೇಶದ ಡಿಜಿಟಲೀಕರಣದ ಪ್ರಗತಿ ಎಂದು ಹೇಳಬಹುದು.

ಇದರ ನಡುವೆ ದೇಶದಲ್ಲಿ ಫೋನ್ ಪೆ, ಗೂಗಲ್ ಪೆ ಮತ್ತು UPI ಮೂಲಕ ಜನರು ಹೆಚ್ಚು ಹೆಚ್ಚು ಹಣದ ವ್ಯಹಾರ ಮಾಡುವ ಕಾರಣ RBI ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತಂದಿದೆ ಎಂದು ಹೇಳಬಹುದು. ಇದರ ನಡುವೆ ಈಗ UPI ಬಳಸುವ ಜನರಿಗೆ RBI ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತಂದಿದ್ದು ಇದು ಜನರ ಮೆಚ್ಚುಗೆಗೆ ಕಾರಣವಾಗಿದೆ.

RBI Rules On UPI Lite
Image Credit: Thehansindia

ದೇಶದಲ್ಲಿ ಕೋಟ್ಯಾಂತರ ಜನರು ಬಳಸುತ್ತಿದ್ದಾರೆ UPI
ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಂಗಡಿ ಮತ್ತು ಮಳಿಗೆಗಳಲ್ಲಿ UPI QR ಕೋಡ್ ಬಳಸುವ ಕಾರಣ ಎಲ್ಲಾ ಜನರ ಮೊಬೈಲ್ ಗಳಲ್ಲಿ UPI ಅಪ್ಲಿಕೇಶನ್ ಇರುವುದನ್ನ ನಾವು ಗಮನಿಸಬಹುದು. ಮೊಬೈಲ್ ಬಳಸುವ ಜನರು UPI ಬಳಸುವುದು ಈಗ ಸರ್ವೇ ಸಾಮಾನ್ಯ ಕೂಡ ಆಗಿರುತ್ತದೆ. ಇದರ ನಡುವೆ RBI UPI ವಂಚನೆಯನ್ನ ತಡೆಗಟ್ಟಲು ಅನೇಕ ನಿಯಮವನ್ನ ಜಾರಿಗೆ ತಂದಿದ್ದು ಜನರ ಅದರ ಬಗ್ಗೆ ಗಮನ ಕೊಡುವುದು ಕೂಡ ಅತ್ಯವಶ್ಯಕವಾಗಿದೆ.

UPI ಬಳಸುವವರಿಗೆ RBI ನಿಂದ ಹೊಸ ನಿಯಮ
UPI ಬಳಸುವ ಜನರಿಗೆ RBI ನಿಂದ ಹೊಸ ನಿಯಮ ಘೋಷಣೆ ಆಗಿದೆ ಎಂದು ಹೇಳಬಹುದು. ಹೌದು ಈಗಾಗಲೇ UPI ಲೈಟ್ ಸೇವೆ ಆರಂಭ ಆಗಿದ್ದು ಜನರು ಪಿನ್ ಹಾಕದೆ UPI ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಪಿನ್ ಹಾಕದೆ UPI ಲೈಟ್ ಮೂಲಕ ಇಂತಿಷ್ಟು ಮಿತಿಯ ಹಣವನ್ನ ವರ್ಗಾವಣೆ ಮಾಡಬಹುದಾಗಿದೆ. ಸದ್ಯ UPI ಲೈಟ್ ನಿಯಮದಲ್ಲಿ ಈಗ RBI ಕೆಲವು ಬದಲಾವಣೆಯನ್ನ ಮಾಡಿದ್ದು ಜನರು ಅದನ್ನ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

RBI has issued an important order regarding UPI limit.
Image Credit: Livemint

UPI ಲೈಟ್ ಮಿತಿಯಲ್ಲಿ ಹೆಚ್ಚಳ
ಹೌದು UPI ಲೈಟ್ ಮೂಲಕ ಆಫ್ ಲೈನ್ ಹಿಂದೆ ಜನರು 200 ರೂಪಾಯಿ ತನಕ ಪೇಮೆಂಟ್ ಮಾಡಬಹುದಿತ್ತು, ಆದರೆ ಈಗ ಜನರು 500 ರೂಪಾಯಿ ತನಕ UPI ಲೈಟ್ ಮೂಲಕ ಆಫ್ ಲೈನ್ ನಲ್ಲಿ ಪೇಮೆಂಟ್ ಮಾಡಬಹುದು. ಇಂಟರ್ನೆಟ್ ಸೇವೆಯಿಂದ ಬಹಳ ದೂರ ಜನರು ಅನಿವಾರ್ಯ ಪೇಮೆಂಟ್ ಮಾಡಬೇಕಾದ ಸಮಯದಲ್ಲಿ ಈ ಸೇವೆಯನ್ನ ಬಳಸಿಕೊಳ್ಳಬಹುದು ಎಂದು RBI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಹೇಳಬಹುದು.

Join Nadunudi News WhatsApp Group

ಹಿಂದೆ 200 ರೂಪಾಯಿಯನ್ನ ಮಾತ್ರ ಸೀಮಿತ ಮಾಡಿದ್ದ RBI ಈಗ ಅದರ ಮಿತಿಯನ್ನ ಹೆಚ್ಚಳ ಮಾಡಿದ್ದು 500 ರುಪಾಯಿಗೆ ಏರಿಕೆ ಮಾಡಿದೆ. ಜನರು UPI ಲೈಟ್ ಇನ್ಸ್ಟಾಲ್ ಮಾಡಿಕೊಳ್ಳುವುದರ ಮೂಲಕ ಈ ಸೇವೆಯನ್ನ ಪಡೆದುಕೊಳ್ಳಬಹುದಾಗಿದೆ. ಇಂಟರ್ನೆಟ್ ಸೇವೆ ಇರದ ಪ್ರದೇಶದಲ್ಲಿ ಜನರು ಈ ಸೇವೆಯ ಮೂಲಕ 500 ರೂಪಾಯಿಯ ತನಕ ಪೇಮೆಂಟ್ ಮಾಡಬಹುದು.

Join Nadunudi News WhatsApp Group