RBI Silver Loan New Rules 2026: ದೇಶದಲ್ಲಿ ಜನರು ಹೆಚ್ಚಾಗಿ ಹಣವನ್ನ ಕೂಡಿಟ್ಟು ಮದುವೆ, ಮನೆ ನಿರ್ಮಾಣ, ಅಥವಾ ಇನ್ನಿತರ ಕೆಲಸವನ್ನ ನಿರ್ಮಾಣ ಮಾಡುವುದಿಲ್ಲ, ಬದಲಾಗಿ ಬ್ಯಾಂಕ್ ಅಥವಾ ಇನ್ನಿತರ ಸಂಘ ಸಂಸ್ಥೆಯಿಂದ ಸಾಲವನ್ನು ಪಡೆದು ತಮ್ಮ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ತುರ್ತು ಪರಿಸ್ಥಿತಿಗೆ ಬಂಗಾರವನ್ನು ಅಡವಿಟ್ಟು ಸಾಲ ಪಡೆಯುದು ಸರ್ವೇ ಸಾಮಾನ್ಯ, ಆದರೆ ಈಗ ಬೆಳ್ಳಿ ಆಭರಣವನ್ನು ಇಟ್ಟು ಕೂಡ ಸಾಲವನ್ನ ಪಡೆದುಕೊಳ್ಳಬಹುದಾಗಿದೆ. RBI ಈಗ ಬಂಗಾರದ ಹಾಗೆ ಬೆಳ್ಳಿ ಆಭರಣಗಳನ್ನು ಅಡವಿಟ್ಟು ಸಾಲ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗಾದರೆ ಬೆಳ್ಳಿ ಮೇಲೆ ಸಾಲ ನೀಡುವ ಬ್ಯಾಂಕ್ ಸಾಲದ ಬಗ್ಗೆ RBI ಜಾರಿಗೆ ತಂದಿರುವ ಹೊಸ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
RBI ನ ಹೊಸ ಮಾರ್ಘಸೂಚಿ
ಇದೀಗ 2025 ರಲ್ಲಿ RBI ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ, ಏಪ್ರಿಲ್ 1, 2026 ರಿಂದ ಬ್ಯಾಂಕುಗಳು ಹಾಗೆ NBFC ಗಳು ಬೆಳ್ಳಿ ಆಭರಣವನ್ನ ಅಡವಿಟ್ಟುಕೊಂಡು ಸಾಲವನ್ನು ನೀಡಬೇಕು ಎಂದು ಆದೇಶವನ್ನು ಹೊರಡಿಸಿದೆ. ಇದು ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬಹಳ ಉಪಯೋಗವಾಗಲಿದೆ. ಬಂಗಾರದ ಆಭರಣಗಳನ್ನು ಹೇಗೆ ಅಡವಿಟ್ಟು ಸಾಲ ಪಡೆದುಕೊಳ್ಳಲಾಗುತ್ತೋ ಅದೇ ರೀತಿಯಲ್ಲಿ ಬೇಲಿ ಅಡವಿಟ್ಟು ಸಾಲ ಪಡೆಯಬಹುದು. ಆದರೆ ಕೆಲವು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ.
ಬೆಳ್ಳಿ ಆಭರಣ ಅಡವಿಡುವುದಕ್ಕೆ RBIನಿಯಮಗಳು
* ಬೆಳ್ಳಿ ಆಭರಣಗಳು, ಒಡವೆಗಳು ಅಥವಾ ಬೆಳ್ಳಿ ನಾಣ್ಯವನ್ನು ( 92.5% ಶುದ್ಧತೆ) ಗಿರವಿ ಇಡಬಹುದಾಗಿದೆ.
* ಒಬ್ಬ ವ್ಯಕ್ತಿ ಗರಿಷ್ಠ 10 ಕೆಜಿ ಬೆಳ್ಳಿ ಆಭರಣ ಹಾಗೆ 500 ಗ್ರಾಂ ಬೆಳ್ಳಿ ನಾಣ್ಯವನ್ನ ಅಡವಿಡಬಹುದಾಗಿದೆ.
* ಬೆಳ್ಳಿ ಬಾರ್ ಅಥವಾ ಬಿಸ್ಕತ್ತುಗಳ ಮೇಲೆ ಸಾಲ ನೀಡುದಿಲ್ಲ.
* ಸಿಲ್ವರ್ ETF ಮೇಲು ಕೂಡ ಸಾಲವನ್ನು ನೀಡುದಿಲ್ಲ.
ಬೆಳ್ಳಿ ಆಭರಣಗಳ ಮೇಲೆ ಪಡೆಯಬಹುದಾದ ಸಾಲದ ಮೌಲ್ಯ
* 2.5 ಲಕ್ಷ ಸಾಲಕ್ಕೆ – ಗರಿಷ್ಠ 85 % ಮೌಲ್ಯ
* 2.5 ಲಕ್ಷದಿಂದ 5 ಲಕ್ಷ – 80 %
* 5 ಲಕ್ಷಕ್ಕಿಂತ ಹೆಚ್ಚು – 75 %
ಉದಾಹರಣೆ ಮೂಲಕ ಹೇಳುದಾದರೆ, ನೀವು 1 ಲಕ್ಷ ಮೌಲ್ಯದ ಬೆಳ್ಳಿ ಆಭರಣವನ್ನು ಅಡವಿಟ್ಟರೆ ನೀವು 85 ಸಾವಿರ ರೂ. ವರೆಗೆ ಸಾಲವನ್ನ ಪಡೆದುಕೊಳ್ಳಬಹುದಾಗಿದೆ. ಬೆಳ್ಳಿ ಬೆಲೆಯನ್ನ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ.
ಯಾರು ಇದರ ಲಾಭವನ್ನು ಪಡೆದುಕೊಳ್ಳಬಹುದು?
ಹಳ್ಳಿ ಪ್ರದೇಶದಲ್ಲಿ ಬೆಳ್ಳಿ ಆಭರಣಗಳು ಹೆಚ್ಚಾಗಿ ಇರುತ್ತದೆ. ಹಳ್ಳಿ ಪ್ರದೇಶದ ಜನರು ಬೆಳ್ಳಿಯನ್ನ ಅಡವಿಟ್ಟು ಸಾಲ ಪಡೆದು ವ್ಯಾಪಾರಕ್ಕೆ, ಕೃಷಿ ಕೆಲಸಕ್ಕೆ ಹಾಗೆ ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ. ಬಡವರು ಹಾಗೆ ಮಧ್ಯಮ ವರ್ಗದ ಜನರಿಗೆ ಇದು ಬಹಳ ಉಪಯುಕ್ತವಾಗಲಿದೆ. ಸಾಲ ತೀರಿಸದಿದ್ದರೆ ಹರಾಜು ಪ್ರಕ್ರಿಯೆ ನೆಡೆಸಿ ನಿಮ್ಮ ಬೆಳ್ಳಿಯನ್ನು ಹರಾಜು ಹಾಕುತ್ತಾರೆ.
ಸಾಲವನ್ನು ಮರುಪಾವತಿ ಮಾಡಲು 12 ತಿಂಗಳ ಕಾಲಾವಕಾಶ ಇದ್ದು ಸಾಲ ಮರುಪಾವತಿ ಮಾಡದೆ ಇದ್ದರೆ ಬ್ಯಾಂಕುಗಳಿಂದ ನೋಟೀಸ್ ಪಡೆದುಕೊಳ್ಳಬೇಕಾಗುತ್ತದೆ. ನೋಟೀಸ್ ಪಡೆದ ನಂತರ ಕೂಡ ಸಲ ಮರುಪಾವತಿ ಮಾಡದೆ ಇದ್ದರೆ ಅಡವಿಟ್ಟ ಚಿನ್ನವನ್ನು ಹರಾಜು ಮಾಡಲಾಗುತ್ತದೆ. ಬ್ಯಾಂಕಿನಲ್ಲಿ ಬೆಳ್ಳಿ ಮತ್ತು ಬಂಗಾರ ಅಡವಿಡುವ ಮುನ್ನ RBI ನಿಯಮಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

