RBI SGB Scheme: ಚಿನ್ನ ಪ್ರಿಯರಿಗಾಗಿ RBI ನಿಂದ ಹೊಸ ಯೋಜನೆ ಆರಂಭ, ಇಂದೇ ಅರ್ಜಿ ಸಲ್ಲಿಸಿ ಯೋಜನೆಗೆ ಸೇರಿಕೊಳ್ಳಿ.

ಚಿನ್ನದ ಹೂಡಿಕೆಗಾಗಿ ಹೊಸ ಸೌಲಭ್ಯ ನೀಡಿದ RBI , ಇಂದೇ ಚಿನ್ನದ ಮೇಲೆ ಹೂಡಿಕೆ ಆರಂಭಿಸಿ.

RBI Sovereign Gold Bond Scheme: ಸಾಮಾನ್ಯವಾಗಿ ಚಿನ್ನವನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಚಿನ್ನದ ಒಲವು ಹೆಚ್ಚಾಗಿರುತ್ತದೆ. ಇನ್ನು ಚಿನ್ನದ ಖರೀದಿಗೆ ಜನರು ಚಿನ್ನದ ಬೆಲೆಯ ಇಳಿಕೆಯ ಬಗ್ಗೆ ಹೆಚ್ಚು ನಿರೀಕ್ಷಿಸುತ್ತಾರೆ. ಇತ್ತೀಚೆಗಂತೂ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಆಗುತ್ತಿದೆ. ಚಿನ್ನ ಖರೀದಿ ಜನರಿಗೆ ಕಷ್ಟವಾಗುತ್ತಿದೆ.

ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವ ಕಾರಣ ದಿನೇ ದಿನೇ ಚಿನ್ನದ ಬೆಲೆ ಹೆಚ್ಚು ಏರಿಕೆ ಕಾಣುತ್ತಿದೆ. ಇನ್ನು ಚಿನ್ನದ ಮೇಲಿನ ಹೂಡಿಕೆಯು ಉತ್ತಮ ಹೂಡಿಕೆಯ ವಿಧಾನವಾಗಿದೆ. ಇದೀಗ Reserve Bank Of India ಚಿನ್ನದ ಮೇಲೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಜನಸಮಾನ್ಯರಿಗಾಗಿ ಚಿನ್ನದ ಮೇಲಿನ ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸಿಕೊಡಲು RBI ಮುಂದಾಗಿದೆ.

RBI can invest in gold under SGB scheme.
Image Credit: ndtv

ಚಿನ್ನದ ಹೂಡಿಕೆಗಾಗಿ ಹೊಸ ಸೌಲಭ್ಯ ನೀಡಿದ RBI
ಇದೀಗ Reserve Bank Of India ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರಿಗೆ ಉತ್ತಮ ಅವಕಾಶವನ್ನು ನೀಡಿದೆ. ಭಾರತೀಯ Reserve Bank ಇದೀಗ Sovereign Gold Bond ಹೂಡಿಕೆಯನ್ನು ಜನರಿಗಾಗಿ ನೀಡುತ್ತಿದೆ. ಇನ್ನು 2023-24 ರ Sovereign Gold Bond Scheme ನ ಎರಡನೇ ಸರಣಿಯಲ್ಲಿ ನೀವು 15 ಸೆಪ್ಟೆಂಬರ್ 2023 ರ ವರೆಗೆ ಹೂಡಿಕೆ ಮಾಡಬಹುದು.

RBI Sovereign Gold Bond Scheme
RBI SGB ಯೋಜನೆಯಡಿ ಆಫ್‌ ಲೈನ್ ಚಿನ್ನದ ಬಾಂಡ್‌ ಗಳ ಬೆಲೆಯನ್ನು ಪ್ರತಿ ಗ್ರಾಂ ಗೆ 5,923 ರೂ.ಗೆ ನಿಗದಿಪಡಿಸಿದೆ. ಇದನ್ನು ಆನ್‌ ಲೈನ್‌ನಲ್ಲಿ ಖರೀದಿಸಿದಾಗ ನೀವು ಪ್ರತಿ 10 ಗ್ರಾಂಗೆ 50 ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ SGB ಯೋಜನೆಯ ಮೂಲಕ ಖರೀದಿಸಲು ನೀವು 5,873 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

RBI Sovereign Gold Bond Scheme
Image Credit: thehindu

ಈ ಬ್ಯಾಂಕುಗಳಲ್ಲಿ SGB ಯೋಜನೆ ಲಭ್ಯ
ದೇಶದ ವಿವಿಧ ಬ್ಯಾಂಕ್‌ ಗಳು ತಮ್ಮ ಗ್ರಾಹಕರಿಗೆ ಆನ್‌ ಲೈನ್ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತಿವೆ. State Bank, Punjab National Bank, ICICI Bank, Canara Bank ಸೇರಿದಂತೆ ಇನ್ನಿತರ ಬ್ಯಾಂಕ್ ಗಳು SGB ಯೋಜನೆಯನ್ನು ನೀಡುತ್ತಿದೆ. ನೀವು ಈ ಬ್ಯಾಂಕುಗಳ ಗ್ರಾಹಕರಾಗಿದ್ದರೆ ಸುಲಭವಾಗಿ ಆನ್‌ ಲೈನ್ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group