Ads By Google

RBI Warning: ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ RBI ನಿಂದ ಎಚ್ಚರಿಕೆ, ಯಾರು ಕೂಡ ಈ ಕೆಲಸ ಮಾಡುವಂತಿಲ್ಲ

rbi warning for bank account holders

Image Credit: Original Source

Ads By Google

RBI Warning About KYC Update: ಸದ್ಯ ದೇಶದಲ್ಲಿ ಸಾಕಷ್ಟು ವಿಧದಲ್ಲಿ ವಂಚನೆ ಮಾಡಲಾಗುತ್ತಿದೆ. ಜನರು ಎಷ್ಟೇ ಎಚ್ಚರಿಕೆ ವಹಿಸಿದರು ಕೂಡ ವಂಚಕರು ಯಾವುದರರು ರೂಪದಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ.

ಇನ್ನು ವಂಚನೆಯ ತಡೆಗಾಗಿ ಅದೆಷ್ಟೇ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಸೈಬರ್ ಕ್ರೈಮ್ ಗೆ ಬ್ರೇಕ್ ಹಾಕಲು ಆಗುತ್ತಿದೆ. ವಂಚಕರು ಜನಸಾಮಾನ್ಯರ ಖಾತೆಗೆ ಕನ್ನ ಹಾಕಲು ವಿವಿಧ ಮಾರಾಗಗಳನ್ನು ಉಪಯೋಗಿಸುತ್ತಿದ್ದಾರೆ. ಸದ್ಯ Reserve Bank India ಅಂತಹ ಒಂದು ರೀತಿಯ ವಂಚನೆಯ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.

Image Credit: Economictimes

ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದ RBI
ಸದ್ಯ RBI ಜನಸಾಮನ್ಯರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. KYC ನವೀಕರಣದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯ ಬಗ್ಗೆ RBI ಬ್ಯಾಂಕ್ ಖಾತೆದಾರರಿಗೆ ಮುನ್ನೆಚ್ಚರಿಕೆ ನೀಡಿದೆ. ಹೌದು, ಬ್ಯಾಂಕ್ ಖಾತೆದಾರರು KYC Update ಮಾಡಲು ಹೋಗಿ ವಂಚನೆಗೆ ಒಳಗಾಗಬಾರದು ಎನ್ನುವ ದೃಷ್ಟಿಯಿಂದ RBI ಜನಸಾಮಾನ್ಯರಿಗೆ ಸೂಚನೆ ನೀಡುತ್ತಿದೆ. ಈಗಾಗಲೇ KYC Update ಹೆಸರಿನಲ್ಲಿ ಸಾಕಷ್ಟು ಜನರು ವಂಚನೆಗೆ ಗುರಿಯಾಗಿರುವುದು RBI ಗಮನಕ್ಕೆ ಬಂದಿದೆ.

ಬ್ಯಾಂಕ್ ಖಾತೆಗೆ KYC Update ಮಾಡುವ ಮುನ್ನ ಎಚ್ಚರ
ಗ್ರಾಹಕರಿಂದ ಕೆವೈಸಿ ವಂಚನೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ. ನಷ್ಟವನ್ನು ತಪ್ಪಿಸಲು ಇಂತಹ ವಂಚನೆಗಳಿಂದ ರಕ್ಷಿಸಿಕೊಳ್ಳಲು ನಾಗರಿಕರಿಗೆ RBI ಸಲಹೆ ನೀಡಿದೆ. KYC ಅನ್ನು ನವೀಕರಿಸುವ ಹೆಸರಿನಲ್ಲಿ ಜನರನ್ನು ಹೇಗೆ ವಂಚಿಸಲಾಗುತ್ತಿದೆ ಎಂಬುದನ್ನು ವಿವರಿಸುವ ಪತ್ರಿಕಾ ಪ್ರಕಟಣೆಯನ್ನು RBI ಬಿಡುಗಡೆ ಮಾಡಿದೆ. ಗ್ರಾಹಕರು ಮೊದಲು ಫೋನ್ ಕರೆ, SMS ಅಥವಾ ಇಮೇಲ್ ಮೂಲಕ ಮೋಸ ಮಾಡಲು ಸಂದೇಶವನ್ನು ಸ್ವೀಕರಿಸುತ್ತಾರೆ. ಈ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಿ ಅವರ ಮೇಲೆ ಪ್ರಭಾವ ಬೀರುವ ಯತ್ನ ನಡೆದಿದೆ.

Image Credit: Newsnext

ಇದರ ಜೊತೆಗೆ ಖಾತೆಯ ಲಾಗಿನ್ ವಿವರಗಳನ್ನು ಕೇಳಲಾಗುತ್ತದೆ ಅಥವಾ ಸಂದೇಶದ ಮೂಲಕ ಲಿಂಕ್ ಕಳುಹಿಸುವ ಮೂಲಕ ಮೊಬೈಲ್ ಫೋನ್‌ ನಲ್ಲಿ ಅನಧಿಕೃತ ಅಥವಾ ಪರಿಶೀಲಿಸದ ಅಪ್ಲಿಕೇಶನ್ ಅನ್ನು ಸ್ಥಾಪಿಸಲು ಕೇಳಲಾಗುತ್ತದೆ. ಇಂತಹ ನಕಲಿ ಸಂದೇಶಗಳ ಬಗ್ಗೆ ಯಾರು ಗಮನ ಹರಿಸಬಾರದು RBI ಗ್ರಾಹಕರಿಗೆ ಸೂಚನೆ ನೀಡಿದೆ. ಇಂತಹ ಸಂದೇಹಗಳು ನಿಮಗೆ ತಲುಪಿದರೆ ನೀವು www.cybercrime.gov.in ಅಧಿಕೃತ ವೆಬ್ ಸೈಟ್ ನಲ್ಲಿ ಅಥವಾ ಸೈಬರ್ ಕ್ರೈಮ್ ರಿಪೋರ್ಟಿನ್ಗ್ ಪೋರ್ಟಲ್ 1930 ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ದಾಖಲಿಸಬಹುದು

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.