RC and DL: ಹೊಸ ವಾಹನ ಮತ್ತು DL ಮಾಡುವವರಿಗೆ ಇಂದಿನಿಂದ ಹೊಸ ಸೇವೆ, ಈಗ ಕಚೇರಿಗೆ ಹೋಗಬೇಕಾಗಿಲ್ಲ.

ಇನ್ನುಮುಂದೆ ಕಚೇರಿಗೆ ಭೇಟಿ ನೀಡದೆ RC ಹಾಗೂ DL ಪಡೆದುಕೊಳ್ಳಿ.

RC And DL Home Delivery: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari)ಅವರು ಸಂಚಾರ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ. ದೇಶದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಹೊಸ ಹೊಸ ಸಂಚಾರ ನಿಯಮಗಳನ್ನು ಕೇಂದ್ರ ಸರ್ಕಾರ (Central Government) ಜಾರಿಗೆ ತರುತ್ತಿದ್ದೆ. ಆದರೂ ಕೂಡ ಟ್ರಾಫಿಕ್ (Traffic)ಸಮಸ್ಯೆಯನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಇನ್ನು ಭಾರತದಲ್ಲಿ ಡ್ರೈವಿಂಗ್ ಲೈಸನ್ಸ್ ಪಡೆಯಲು 18 ವರ್ಷವಾಗಿರಬೇಕು. ಇದೀಗ ನೀವು ಆನ್ಲೈನ್ ಅಲ್ಲಿಯೂ ಕೂಡ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ಮೂಲಕ ತಿಳಿದುಕೊಳ್ಳಬಹುದು.

RC And DL Home Delivery
Image Credit: Zeebiz

“ತುಮ್ಹಾರ್ ಸರ್ಕಾರ್ ತುಮ್ಹಾರ್ ದ್ವಾರ್” ಯೋಜನೆ
ಸರ್ಕಾರದ ಪ್ರತಿಷ್ಠಿತ “ತುಮ್ಹಾರ್ ಸರ್ಕಾರ್ ತುಮ್ಹಾರ್ ದ್ವಾರ್” ಯೋಜನೆ ಅಡಿಯಲ್ಲಿ ಸಾರಿಗೆ ಇಲಾಖೆಯು 22 ಸ್ಮಾರ್ಟ್ ಕಾರ್ಡ್ ಆಧಾರಿತ ಸೇವೆಗಳನ್ನು ಒದಗಿಸುತ್ತಿದೆ. ಇದರಲ್ಲಿ 10 ಡ್ರೈವಿಂಗ್ ಲೈಸನ್ಸ್ ಹಾಗೂ 12 ವಾಹನ ಸಂಬಂಧಿತ ಸೇವೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ಅರ್ಜಿದಾರನು ಹೊಸ ಚಾಲನಾ ಪರವನಗಿಯನ್ನು ಪಡೆಯಲು ಡ್ರೈವಿಂಗ್ ಪರೀಕ್ಷೆ ಮಾಡಲು ಮಾತ್ರ ಹಾಜರಾಗಬೇಕಾಗುತ್ತದೆ. ನಂತರ ಸರಿಯಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಿದರೆ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಸ್ಮಾರ್ಟ್ ಕಾರ್ಡ್ ತಲುಪುತ್ತದೆ. ನೀವು RTO ಕಚೇರಿಗೆ ಭೇಟಿ ನೀಡುವ ಅನಿವಾರ್ಯ ಇರುವುದಿಲ್ಲ.

RC and DL latest news update
Image Credit: Zeebiz

ಇನ್ನುಮುಂದೆ ಮನೆ ಬಾಗಿಲಿಗೆ ಬರಲಿದೆ RC ಹಾಗೂ DL

Join Nadunudi News WhatsApp Group

ಸಾರಿಗೆ ಇಲಾಖೆ ಕಚೇರಿಯಲ್ಲಿ ನಿನ್ನೆ(18 /08 /2023 ) ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಮ್ಮುಖದಲ್ಲಿ ಸಾರಿಗೆ ಹಾಗೂ ಅಂಚೆ ಇಲಾಖೆ ಅಧಿಕಾರಿಗಳು RC ಹಾಗೂ DL ಸ್ಮಾರ್ಟ್ ಕಾರ್ಡ್ ಅನ್ನು ಮನೆ ಬಾಗಿಲಿಗೆ ಬರುವಂತೆ ಮಾಡುವ ಕುರಿತು ಒಪ್ಪಂದ ಮಾಡಿಕೊಂಡಿದ್ದರು.

ಸ್ಮಾರ್ಟ್ ಕಾರ್ಡ್ ಗಳನ್ನೂ ಸೂಚನಾ ಪತ್ರದೊಂದಿಗೆ ಲಗತ್ತಿಸಿ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರನ ಮನೆಗೆ ತಲುಪಿಸಲಾಗುತ್ತದೆ. ಇದರಿಂದ ಸಾರ್ವಜನಿಕರು ಕಚೇರಿಗೆ ಭೇಟಿ ನೀಡದೆ ಸಂಪರ್ಕ ರಹಿತ ಮಾದರಿಯಲ್ಲಿ ದಾಖಲಾತಿಗಳನ್ನು ಪಡೆಯಬಹುದಾಗಿದೆ.

Join Nadunudi News WhatsApp Group