Fake Gold: ಚಿನ್ನ ಖರೀದಿಸುವವ ಮುನ್ನ ಎಚ್ಚರ, ಚಿನ್ನದಲ್ಲಿ ಈ 5 ಅಂಶ ಇಲ್ಲದಿದ್ದರೆ ಆ ಚಿನ್ನ ನಕಲಿ.

ಈ ಐದು ವಿಧಾನದ ಮೂಲಕ ಅಸಲಿ ಮತ್ತು ನಕಲಿ ಚಿನ್ನವನ್ನ ಪತ್ತೆಹಚ್ಚಬಹುದು.

Real And Fake Gold Identification: ಚಿನ್ನವನ್ನು ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಚಿನ್ನದ ಮೇಲೆ ಹೆಚ್ಚು ಒಲವು ಇರುತ್ತದೆ. ಇನ್ನು ಚಿನ್ನ ಖರೀದಿಯ ವೇಳೆ ಜನರು ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಕೆಲವೊಮ್ಮೆ ಚಿನ್ನದ ಖರೀದಿಯ ಸಮಯದಲ್ಲಿ ಮಾರಾಟಗಾರರು ಖರೀದಿದಾರರಿಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ.

ನಕಲಿ ಮತ್ತು ಶುದ್ಧ ಚಿನ್ನಗಳ ನಡುವಿನ ವ್ಯತ್ಯಾಸ ಚಿನ್ನ ಖರೀದಿದಾರರಿಗೆ ಹಾಗೂ ಮಾರಾಟಗಾರರಿಗೆ ತಿಳಿಯಲಿ ಎನ್ನುವ ಕಾರಣ ಕೇಂದ್ರ ಸರ್ಕಾರ (Central Government) ಸಾಕಷ್ಟು ನಿಯಮವನ್ನು ಜಾರಿಗೊಳಿಸಿದೆ.

ಚಿನ್ನ ಖರೀದಿಸುವ (Gold Purchase) ಹಾಗು ಮಾರಾಟ ಮಾಡುವ ಮುನ್ನ ಹಾಲ್ ಮಾರ್ಕ್ (Hallmark) ಸಂಖ್ಯೆಯನ್ನು ಹೊಂದಿರುವ ಚಿನ್ನವನ್ನು ಮಾತ್ರ ಖರೀದಿಸಬೇಕು. ಹಾಲ್ ಮಾರ್ಕ್ ಇಲ್ಲದ ಚಿನ್ನವನ್ನು ಖರೀದಿ ಮತ್ತು ಮಾರಾಟ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಇದೀಗ ನಕಲಿ ಚಿನ್ನದ ಪತ್ತೆಹಚ್ಚುವಿಕೆ ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

Hallmark verification is mandatory
Image Credit: Pib

*ಹಾಲ್‌ಮಾರ್ಕ್ ಪರಿಶೀಲನೆ ಕಡ್ಡಾಯ Verification Of Hallmark
ಚಿನ್ನವನ್ನು ಖರೀದಿಸುವಾಗ ಅದರ ಮೇಲಿನ ಹಾಲ್‌ಮಾರ್ಕ್ ಅನ್ನು ಪರಿಶೀಲಿಸಬೇಕು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಚಿನ್ನದ ಮೇಲೆ ಹಾಲ್‌ಮಾರ್ಕ್ ಪ್ರಮಾಣೀಕರಣವನ್ನು ನೀಡುತ್ತದೆ. ಇದನ್ನು ಚಿನ್ನದ ಶುದ್ಧತೆಯ ಪುರಾವೆ ಎಂದು ಪರಿಗಣಿಸಲಾಗುತ್ತದೆ. ನಕಲಿ ಚಿನ್ನದ ಮೇಲೆ ಬಿಐಎಸ್ ನೀಡಿದ ಹಾಲ್‌ಮಾರ್ಕ್ ಪ್ರಮಾಣೀಕರಣವನ್ನು ನೀಡಲಾಗುವುದಿಲ್ಲ.

*ನೈಟ್ರಿಕ್ ಆಮ್ಲದ ಪರಿಶೀಲನೆ
ಚಿನ್ನದ ಅಸಲೀಯತ್ತನ್ನು ಪರಿಶೀಲಿಸಲು ನೀವು ನೈಟ್ರಿಕ್ ಆಮ್ಲವನ್ನು ಬಳಸಬಹುದು. ಚಿನ್ನವನ್ನು ಲಘುವಾಗಿ ಸ್ಕ್ರಾಚ್ ಮಾಡಿ. ನಂತರ ಅದರ ಮೇಲೆ ನೈಟ್ರಿಕ್ ಆಮ್ಲವನ್ನು ಹಾಕಬೇಕು. ಈ ವೇಳೆ ನೈಟ್ರಿಕ್ ಆಮ್ಲವು ನಿಜವಾದ ಚಿನ್ನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಕಲಿ ಚಿನ್ನದ ಮೇಲೆ ನೈಟ್ರಿಕ್ ಆಮ್ಲವನ್ನು ಹಾಕಿದಾಗ ಅದರ ಬಣ್ಣ ಹೋಗುತ್ತದೆ.

Join Nadunudi News WhatsApp Group

Real And Fake Gold Identification
Image Credit: Navbharattimes

*ಬಿಳಿ ವಿನೆಗರ್ ಬಳಸಬಹುದು
ಬಿಳಿ ವಿನೆಗರ್ ಸಹಾಯದಿಂದ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಬಹುದು. ಚಿನ್ನದ ಲೋಹದ ಮೇಲೆ ಕೆಲವು ಹನಿ ವಿನೆಗರ್ ಹಾಕಿದರೆ ನಿಜವಾದ ಚಿನ್ನ ಬಣ್ಣವನ್ನು ಬಿಡುವುದಿಲ್ಲ.

*ನೀರಿನ ಸಹಾಯವನ್ನು ಪಡೆಯಬಹುದು
ಇನ್ನು ನೀವು ನೀರನ್ನು ಬಳಸಿ ಕೂಡ ಚಿನ್ನದ ಸತ್ಯತೆಯನ್ನು ತಿಳಿಯಬಹುದು. ಚಿನ್ನವು ಭಾರವಾಗಿರುತ್ತದೆ. ಹೀಗಾಗಿ ನಿಜವಾದ ಚಿನ್ನವನ್ನು ನೀರಿನಲ್ಲಿ ಹಾಕಿದಾಗ ಅದು ಮುಳುಗುತ್ತದೆ. ನಕಲಿ ಚಿನ್ನ ನೀರಿನಲ್ಲಿ ತೇಲುತ್ತವೆ.

Magnet test in gold
Image Credit: Other sources

*ಮ್ಯಾಗ್ನೆಟ್ ಪರೀಕ್ಷೆ
ಮ್ಯಾಗ್ನೆಟ್ ಅನ್ನು ಬಳಸಿ ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ನಿಜವಾದ ಚಿನ್ನದಲ್ಲಿ ಕಾಂತಿಯ ಅಂಶ ಇರುವುದಿಲ್ಲ. ಚಿನ್ನದ ಬಳಿ ಮ್ಯಾಗ್ನೆಟ್ ಅನ್ನು ಇಡುವುದರಿಂದ ಅದರ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ನಿಮ್ಮ ಚಿನ್ನವು ನಕಲಿಯಾಗಿದ್ದರೆ ಅದು ಆಯಸ್ಕಾಂತದ ಬಳಿ ಬಂದ ತಕ್ಷಣ ಚಿನ್ನವು ಮ್ಯಾಗ್ನೆಟ್ ಕಡೆಗೆ ಎಳೆಯಲು ಪ್ರಾರಂಭಿಸುತ್ತದೆ.

Join Nadunudi News WhatsApp Group