Tv Production: ಇನ್ನುಮುಂದೆ ಸಿಗಲ್ಲ ಈ ಕಂಪನಿಯ ಸ್ಮಾರ್ಟ್ ಟಿವಿ, ಉತ್ಪಾದನೆ ನಿಲ್ಲಿಸಿದಾ ಖ್ಯಾತ ಟಿವಿ ಕಂಪನಿ.
ಇನ್ನುಮುಂದೆ ಈ ಕಂಪನಿಯ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
Realme And OnePlus Smart Tv Production Stop: ದೇಶದಲ್ಲಿ ಈಗ ಸ್ಮಾರ್ಟ್ ಟಿವಿ ಗಳ ಬೇಡಿಕೆ ಹೆಚ್ಚಾಗೇ ಇದೆ. . ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್ ಟಿವಿ ಕಂಪನಿಗಳಿದ್ದು, ಪ್ರತಿಯೊಂದು ಕಂಪನಿಯು ಜನಪ್ರಿಯತೆಯನ್ನು ಹೊಂದಿದೆ. ಆದರೆ ಗ್ರಾಹಕರಿಗೆ ಎರಡು ಸ್ಮಾರ್ಟ್ ಟಿವಿ ಕಂಪನಿ ಗಳು ಬೇಸರದ ಸುದ್ದಿಯನ್ನು ನೀಡಿದೆ. ಭಾರತದಲ್ಲಿ ಟೆಕ್ ದೈತ್ಯರಾದ ಒನ್ಪ್ಲಸ್ ಹಾಗೂ ರಿಯಲ್ಮಿ (OnePlus and Realme) ಕಂಪನಿಗಳು ಸ್ಮಾರ್ಟ್ಟಿವಿಗಳನ್ನು ತಯಾರಿಸುವುದನ್ನು ಸ್ಥಗಿತಗೊಳಿಸಲಿದೆ.
ಈ ಎರಡು ಕಂಪನಿ ಗಳ ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದು, . ಅದರಲ್ಲೂ ಕೆಲವು ಹೊಸ ಹೊಸ ಸ್ಮಾರ್ಟ್ವಿಟಿಗಳು ಸಹ ಲಾಂಚ್ ಆಗುತ್ತಿದ್ದು, ಈ ಎಲ್ಲಾ ಬೆಳವಣಿಗೆ ನಡುವೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಶಿಯೋಮಿ, ಟಿಸಿಎಲ್ ಸೇರಿದಂತೆ ಅನೇಕ ದೇಶೀಯ ಸ್ಮಾರ್ಟ್ಟಿವಿಗಳು ಅಭಿವೃದ್ಧಿ ಆಗುತ್ತಿರುವ ಬೆನ್ನಲ್ಲೇ ಒನ್ಪ್ಲಸ್ ಹಾಗೂ ರಿಯಲ್ಮಿ ಕಂಪನಿಗಳು ಈ ನಿರ್ಧಾರ ಮಾಡಿವೆ, ಇತರೆ ಬ್ರ್ಯಾಂಡ್ಗಳಿಂದ ಆದ ಹೊಡೆತ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.
ಒನ್ಪ್ಲಸ್, ರಿಯಲ್ಮಿ ಬಹು ಜನಪ್ರಿಯತೆ ಹೊಂದಿದ ಕಂಪನಿಗಳು
ಭಾರತೀಯ ದೂರದರ್ಶನ ಮಾರುಕಟ್ಟೆಯಲ್ಲಿ, ಎಲ್ಜಿ, ಸ್ಯಾಮ್ಸಂಗ್, ಸೋನಿ, ಹಾಗೂ ಪ್ಯಾನಾಸೋನಿಕ್ ನಂತಹ ಬ್ರ್ಯಾಂಡ್ಗಳು ಚೀನಾದಿಂದ ಶಿಯೋಮಿ ಮತ್ತು ಟಿಸಿಎಲ್ ನಂತಹ ಹೊಸ ಪ್ರವೇಶಗಳೊಂದಿಗೆ ಒಂದುಗೂಡಿ ಮುನ್ನಡೆಯುತ್ತಿವೆ. ಹೆಚ್ಚುವರಿಯಾಗಿ, Vu ಮತ್ತು ಥಾಮ್ಸನ್ನಂತಹ ದೇಶೀಯ ಬ್ರ್ಯಾಂಡ್ಗಳು ಸಹ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿಕೊಳ್ಳುತ್ತಿವೆ.
ಇನ್ನು ಈ ಎರಡೂ ಕಂಪನಿಗಳು ಈ ಹಿಂದೆ ಟೆಲಿವಿಷನ್ ವಲಯದಲ್ಲಿ ಮಾರಾಟದ ಚಾನೆಲ್ಗಳನ್ನು ನಿರ್ಮಿಸಲು ಮತ್ತು ಬ್ರ್ಯಾಂಡ್ ಗುರುತಿಸುವಿಕೆಯಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಿದ್ದವು. ಇಂಟರ್ನೆಟ್mನ ಪ್ರಸರಣ ಮತ್ತು ಕೈಗೆಟುಕುವ ಡೇಟಾ ದರಗಳಿಂದ ಈ ವರ್ಗವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಅನುಭವಿಸಿದೆ. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ಸ್ಟಾರ್ನಂತಹ ಸ್ಟ್ರೀಮಿಂಗ್ ಸೇವೆಗಳ ಹೆಚ್ಚುತ್ತಿರುವ ಜನಪ್ರಿಯತೆಯು ಸ್ಮಾರ್ಟ್ಟಿವಿಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಗೆ ಮಾಡಿದೆ.
ಒನ್ಪ್ಲಸ್, ರಿಯಲ್ಮಿ ಕಂಪನಿಯ ಸ್ಮಾರ್ಟ್ಟಿವಿ ಇನ್ನು ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ
ಚೀನಾದ ವ್ಯವಹಾರಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ವರದಿಗಳ ನಡುವೆ ಎರಡು ಟೆಕ್ ದೈತ್ಯರು ದೂರದರ್ಶನ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಶಿಯೋಮಿ, ಟಿಸಿಎಲ್ ಹಾಗೂ ದೇಶೀಯ ಕೊಡುಗೆಗಳಂತಹ ಇತರ ಬ್ರ್ಯಾಂಡ್ಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಉದ್ಯಮದ ಹೊರತಾಗಿಯೂ ಒನ್ಪ್ಲಸ್ ಮತ್ತು ರಿಯಲ್ಮಿ ಭಾರತದಲ್ಲಿ ಟಿವಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ವಿಷಯ ಏನೆಂದರೆ ಈ ಕಂಪೆನಿಗಳ ಸ್ಮಾರ್ಟ್ಫೋನ್ಗಳ ಅದ್ಭುತ ಮಾರಾಟದ ನಡುವೆಯೂ ಈ ಬೆಳವಣಿಗೆ ಸಂಭವಿಸಿರುವುದು.ಇನ್ನು ಈ ನಿರ್ಧಾರದ ಬಗ್ಗೆ ಈ ಕಂಪೆನಿಗಳು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ವರದಿಗಳಿಂದ ಇದು ಪಕ್ಕಾ ಎನ್ನಲಾಗಿದೆ.