Realme: ಜೂಲೈ 19 ಲಾಂಚ್ ಆಗಲಿದೆ ಅತೀ ಕಡಿಮೆ ಬೆಲೆಯ ಮೊಬೈಲ್, 108 MP ಕ್ಯಾಮೆರಾ ಮತ್ತು 5000mAh ಬ್ಯಾಟರಿ.
ಜುಲೈ 19 ಕ್ಕೆ ಬಿಡುಗಡೆಯಾಗಲಿದೆ ರಿಯಲ್ ಮೀ C53 ಸ್ಮಾರ್ಟ್ ಫೋನ್.
Realme C53 Smartphone Launch: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಿ ಛಾಪು ಮೂಡಿಸುತ್ತಿದೆ. ಪ್ರತಿಷ್ಠಿತ ಸ್ಮಾರ್ಟ್ ಫೋನ್ ಕಂಪನಿಯಾದ ರಿಯಲ್ ಮೀ (Realme) ಹೊಸ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದರ ಜೊತೆಗೆ ಜನಪ್ರಿಯತೆ ಪಡೆದಿದೆ. ಇದೀಗ ರಿಯಲ್ ಮೀ ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ಜುಲೈ 19 ಕ್ಕೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ರಿಯಲ್ ಮೀ C53 ಸ್ಮಾರ್ಟ್ ಫೋನ್
ರಿಯಲ್ ಮೀ C53 ಸ್ಮಾರ್ಟ್ ಫೋನ್ ಇದೆ ಜುಲೈ 19 ಕ್ಕೆ ಬಿಡುಗಡೆಯಾಗಲಿದ್ದು ಈ ಸ್ಮಾರ್ಟ್ ಫೋನ್ 9 i ಫೋನಿನ ರೀತಿಯಲ್ಲಿಯೇ ಇದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್ ಫೋನ್ 18 W ಚಾರ್ಜಿಂಗ್ ನೊಂದಿಗೆ 5000 mAh ಬ್ಯಾಟರಿಯನ್ನು ಒಳಗೊಂಡಿದೆ.
USB -C ಚಾರ್ಜಿಂಗ್ ಪೋರ್ಟ್ ಜೊತೆಗೆ ಆಡಿಯೋ ಫೋನ್ ಜಾಕ್ ಅನ್ನು ಒಳಗೊಂಡಿದೆ. ಬಲಭಾಗದಲ್ಲಿ ಪವರ್ ಬಟನ್ ಜೊತೆಗೆ ವಾಲ್ಯೂಮ್ ಬಟನ್ ಗಳನ್ನೂ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ ಸ್ಮಾರ್ಟ್ ಫೋನ್ 108 MP ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಇನ್ನು ಈ ಸ್ಮಾರ್ಟ್ ಫೋನ್ ನ ಬೆಲೆ ಬಹಿರಂಗವಾಗಿಲ್ಲ.
ರಿಯಲ್ ಮೀ C53 ಸ್ಮಾರ್ಟ್ ಫೋನ್ ನ ಅಂದಾಜು ಬೆಲೆ
ರಿಯಲ್ ಮೀ C – ಸರಣಿಯ ಹಿಂದಿನ ಫೋನ್ ಲಾಂಚ್ ಗಳ ಆಧಾರದ ಮೇಲೆ ರಿಯಲ್ ಮೀ C53 ಬೆಲೆ ಸುಮಾರು 12,000 ರೂಪಾಯಿ ಆಗಿದೆ ಎಂದು ನಾವು ನಿರೀಕ್ಷಿಸಬಹುದು. ಈ ಸರಣಿಯಲ್ಲಿನ ಅತ್ಯಂತ ದುಬಾರಿ ಫೋನ್ ಎಂದರೆ ರಿಯಲ್ ಮಿ C55 ಆಗಿದ್ದು, ಇದರ ಬೆಲೆ 10,999 ರೂಪಾಯಿ ಆಗಿದೆ.
ರಿಯಲ್ ಮಿ C55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ + ಎಲ್‌ಡಿಸಿ ಡಿಸ್ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್ ಈ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 13 ಆಧಾರಿತ ರಿಯಲ್ ಮಿ UI 4.0 ನಲ್ಲಿ ರನ್ ಆಗಲಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಈ ಸ್ಮಾರ್ಟ್ ಫೋನ್ 64 MP ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.