Battery Mobile: ಕಡಿಮೆ ಬೆಲೆಗೆ 9 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ಮೊಬೈಲ್ ಲಾಂಚ್, ಶಾಪ್ ಮುಂದೆ ಜನರ ಕ್ಯೂ.
ಅಧಿಕ ಸ್ಟೋರೇಜ್ ಇರುವ ಈ ರಿಯಲ್ ಮೀ ಫೋನ್ ಗ್ರಾಹಕರಿಗೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ.
Realme GT5 Price And Review: ಡಿಜಿಟಲ್ ಯುಗದಲ್ಲಿ ಇತ್ತೀಚಿಗೆ ಸ್ಮಾರ್ಟ್ ಫೋನ್ ಬಳಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ನೂತನ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ವಿವೊ, ರೆಡ್ ಮೀ, ಸ್ಯಾಮ್ ಸಂಗ್ ಸೇರಿದಂತೆ ಇನ್ನಿತರ ಬ್ರಾಂಡ್ ಗಳು ನೂತನ ಫೀಚರ್ ಇರುವ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತಿವೆ.
ಇದೀಗ ರಿಯಲ್ ಮೀ (Realme) ಕಂಪನಿ ಮಾರುಕಟ್ಟೆಯಲ್ಲಿ ಜನರಿಗಾಗಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಗ್ರಾಹಕರಿಗೆ ಸಾಕಷ್ಟು ಫೀಚರ್ ಗಳು ಲಭ್ಯವಾಗಲಿದೆ. ಕಂಪನಿಯು ನೂತನ ಸ್ಮಾರ್ಟ್ ಫೋನ್ ಅನ್ನು ಬಜೆಟ್ ಬೆಲೆಗೆ ಪರಿಚಯಿಸಲಿದೆ. ಅಧಿಕ ಸ್ಟೋರೇಜ್ ಇರುವ ಈ ರಿಯಲ್ ಮೀ ಫೋನ್ ಗ್ರಾಹಕರಿಗೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ.
ರಿಯಲ್ ಮೀ GT5 ಸ್ಮಾರ್ಟ್ ಫೋನ್
ಕಂಪನಿಯು ಇದೀಗ ಮಾರುಕಟ್ಟೆಯಲ್ಲಿ ನೂತವಾಗಿ ರಿಯಲ್ ಮೀ GT5 ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ವೇಗದ ಚಾರ್ಜಿಂಗ್ ಆಯ್ಕೆ ಇದ್ದು ಬಹಳ ವೇಗವಾಗಿ ಚಾರ್ಜ್ ಆಗಲಿದೆ. ಚಾರ್ಜಿಂಗ್ ಮಾಡಲು ಹೆಚ್ಚು ಸಮಯ ಕಾಯುವ ಅಗತ್ಯ ಇರುವುದಿಲ್ಲ. ಕಂಪನಿಯು ಈ ನೂತನ ಫೋನ್ ನಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸಿದೆ.
ರಿಯಲ್ ಮೀ GT5 ಸ್ಮಾರ್ಟ್ ಫೋನ್ ಫೀಚರ್ಸ್
ರಿಯಲ್ ಮೀ GT5 ಸ್ಮಾರ್ಟ್ ಫೋನ್ ನಲ್ಲಿ 6 .74 ಇಂಚಿನ OLED ಡಿಸ್ ಪ್ಲೇ ಅನ್ನು ಅಳವಡಿಸಲಾಗಿದೆ. ದೊಡ್ಡ ಸ್ಕ್ರೀನ್ ಈ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಿರುವ ಕಾರಣ ವಿಡಿಯೋ ಹಾಗೂ ಗೇಮಿಂಗ್ ಗೆ ಹೆಚ್ಚು ಅನುಕೂಲವಾಗಲಿದೆ. ಇನ್ನು ಈ ಸ್ಮಾರ್ಟ್ ಫೋನ್ ಆಕ್ಟ್ ಕೋರ್ ಸ್ನ್ಯಾಪ್ ಡ್ರಾಗನ್ 8 ಜಾನ್ 4nm ಚಿಪ್ ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ.
ಈ ಸ್ಮಾರ್ಟ್ ಫೋನ್ ನ ಕ್ಯಾಮರಾ ಬಗ್ಗೆ ಹೇಳುವುದಾದರೆ, ಫೋಟೋಗ್ರಾಪಿಗಾಗಿ ಇದರಲ್ಲಿ ತ್ರಿಬಲ್ ಕ್ಯಾಮರಾವನ್ನು ನೀಡಲಾಗಿದೆ. 50MP + 8MP + 2MP ಸೆನ್ಸಾರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಇದರಲ್ಲಿ 16MP ಮೆಗಾ ಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ರಿಯಲ್ ಮೀ GT5 ಸ್ಮಾರ್ಟ್ ಫೋನ್ ಬೆಲೆ
ರಿಯಲ್ ಮೀ GT5 ಸ್ಮಾರ್ಟ್ ಫೋನ್ ಗ್ರಾಹಕರಿಗೆ ಎರಡು ರೂಪಾಂತರದಲ್ಲಿ ಲಭ್ಯವಿದೆ. 12GB , 16GB , 24GB RAM ಹಾಗೂ 256GB , 512GB, 1TB ಸಂಗ್ರಹಣಾ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು 150W ವೇಗದ ಚಾರ್ಜಿಂಗ್ ನೊಂದಿಗೆ 5240mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಕೇವಲ 9 ನಿಮಿಷಗಳಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಫೋನ್ ಮಾರುಕಟ್ಟೆಯಲ್ಲಿ 37,400 ರೂ. ಗಳಲ್ಲಿ ಲಭ್ಯವಾಗಲಿದೆ.