Realme Narzo N53: ಬಜೆಟ್ ಬೆಲೆಯ ಫೋನ್ ಅನ್ನು ಪರಿಚಯಿಸಿದ ರಿಯಲ್ ಮಿ, ಅತೀ ಅಗ್ಗದ ಮೊಬೈಲ್.

ಅತೀ ಕಡಿಮೆ ಬೆಲೆಯಲ್ಲಿ Realme Narzo N53 ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ realme

Realme Narzo N53 Smartphone Price : ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆ ಆಗುತ್ತಿವೆ. ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಇದೀಗ ರಿಯಲ್ ಮೀ (Realme) ಕಂಪನಿ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ.

ರಿಯಲ್ ಮೀ ಕಂಪನಿ ಭಾರತದಲ್ಲಿ ನೂತನ ರಿಯಲ್ ಮೀ ನಾರ್ಜೋ N53 (Realme Narzo N53) ಎಂಬ ಹೊಸ ಫೋನ್ ಬಿಡುಗಡೆ ಮಾಡಿದೆ . ಸಾಕಷ್ಟು ಸಂಚಲನ ಸೃಷ್ಟಿಸಿರುವ ಈ ಸ್ಮಾರ್ಟ್ ಫೋನ್ ಅಗ್ಗದ ಬೆಲೆ ಸಿಗಲಿದೆ.

Realme Narzo N53 Smartphone Price
Image Source: India Today

ರಿಯಲ್ ಮೀ ನಾರ್ಜೋ N 53 ಸ್ಮಾರ್ಟ್ ಫೋನ್ ನ ಬೆಲೆ ಮತ್ತು ಬಣ್ಣಗಳು
ಭಾರತದಲ್ಲಿ ರಿಯಲ್ ಮೀ ನಾರ್ಜೋ N 53 ಸ್ಮಾರ್ಟ್ ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 4 gb RAM + 64 gb ಸ್ಟೋರೇಜ್ ಮಾದರಿಯ ಆಯ್ಕೆಗೆ 8,999 ರೂಪಾಯಿ ಇದೆ. ಅಂತೆಯೇ 6 GB RAM + 128 gb ಸ್ಟೋರೇಜ್ ರೂಪಾಂತರದ ಆಯ್ಕೆಯು 10,999 ರೂಪಾಯಿ ನಿಗದಿ ಮಾಡಲಾಗಿದೆ.

ಈ ಸ್ಮಾರ್ಟ್‌ಫೋನ್‌ ಫೆದರ್ ಬ್ಲಾಕ್ ಮತ್ತು ಫೆದರ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಮೇ 22 ರಿಂದ ಖರೀದಿಗೆ ಸಿಗಲಿದೆ. ಮೊದಲ ಸೇಲ್ ದಿನ ವಿಶೇಷ ಆಫರ್‌ ಘೋಷಣೆ ಮಾಡಲಾಗಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 1,000 ರೂ. ರಿಯಾಯಿತಿ ಸಿಗಲಿದೆ.

Realme Narzo N53 Smartphone Price
Image Source: India Today

ರಿಯಲ್ ಮೀ ನಾರ್ಜೋ N 53 ಸ್ಮಾರ್ಟ್ ಫೋನ್ ನ ವಿಶೇಷತೆ
ರಿಯಲ್ ಮೀ ನಾರ್ಜೋ N 53 ಸ್ಮಾರ್ಟ್ ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯದ 6 .74 ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಈ ಡಿಸ್ ಪ್ಲೆ 90 hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಿದ್ದು, 180 hz ತಹ್ ಸ್ಯಾಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ.

Join Nadunudi News WhatsApp Group

ಈ ಸ್ಮಾರ್ಟ್ ಫೋನ್ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಫೈಕ್ಸೆಲ್ AI ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2MP ಸೆನ್ಸಾರ್‌ ಪಡೆದಿದೆ. ಇದಲ್ಲದೆ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Realme Narzo N53 Smartphone Price
Image Source: My Smart Price

Join Nadunudi News WhatsApp Group