Reasons For No Share In Ancestral Property: ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳು ಉಂಟಾಗುತ್ತದೆ. ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಎಲ್ಲರಿಗೂ ಕೂಡ ಸಮನಾದ ಪಾಲು ಇರುತ್ತದೆ. ಆದರೆ ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಯಲ್ಲಿ ಕೂಡ ಯಾವುದೇ ಪಾಲು ಸಿಗಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಡಿಯಲ್ಲಿ ಈಗ ಮಕ್ಕಳಿಗೆಲ್ಲ ಸಮಾನ ಹಕ್ಕು ಇದ್ದರೂ, ಕೆಲವು ಸಂದರ್ಭಗಳಲ್ಲಿ ಹಕ್ಕು ಸಿಗದೇ ಇರಬಹುದು. ಹಾಗಾದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಪಾಲು ಸಿಗಲ್ಲ ಮತ್ತು ಅದಕ್ಕೆ ಕಾರಣಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿತ್ರಾರ್ಜಿತ ಆಸ್ತಿ ಅಂದರೆ ಏನು?
ಪಿತ್ರಾರ್ಜಿತ ಆಸ್ತಿ ಎಂದರೆ ಮೂರು-ನಾಲ್ಕು ತಲೆಮಾರುಗಳಿಂದ ಬಂದು, ವಿಭಾಗವಾಗದೇ ಇರುವ ಆಸ್ತಿ. ಹಿಂದೂ ಕಾಯಿದೆಯಲ್ಲಿ ಇದು ಕುಟುಂಬದ ಸಂಯುಕ್ತ ಆಸ್ತಿಯಾಗಿರುತ್ತದೆ. 2005 ಕ್ಕೂ ಮೊದಲು ಗಂಡು ಮಕ್ಕಳಿಗೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತಿತ್ತು, ಆದರೆ 2005 ರ ತಿದ್ದುಪಡಿಯ ನಂತರ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಪಾಲು ಪಡೆದುಕೊಳ್ಳುತ್ತಾರೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗದೇ ಇರಲು ಪ್ರಮುಖ ಕಾರಣಗಳು
* ಆಸ್ತಿ ಸ್ವಯಾರ್ಜಿತವಾಗಿದ್ದರೆ
ತಂದೆ ಅಥವಾ ತಾತ ಸ್ವಂತ ದುಡಿಮೆಯಿಂದ ಮಾಡಿದ ಆಸ್ತಿ ಆಗಿದ್ದರೆ ಮಕ್ಕಳಿಗೆ ಆ ಆಸ್ಟಿಯೋಯಲ್ಲಿ ಜನ್ಮಸಿದ್ಧ ಹಾಕು ಸಿಗುವುದಿಲ್ಲ. ಅಷ್ಟೇ ಮಾತ್ರವಲ್ಲದೆ ತಂದೆ ಅಥವಾ ತಾಯಿ ವಿಲ್ ಬರೆದು ಆ ಆಸ್ತಿಯನ್ನು ಬರೆಯವರಿಗೆ ಕೊಟ್ಟ ಸಮಯದಲ್ಲಿ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗದೇ ಇರಬಹುದು.
* ನಿಜವಾಗಿಯೂ ಆಸ್ತಿ ಪಿತ್ರಾರ್ಜಿತವಲ್ಲದೆ ಇರುವುದು
ಉದಾಹರಣೆಗೆ ತಾಯಿಯಿಂದ, ಚಿಕ್ಕಪ್ಪನಿಂದ ಅಥವಾ ಗಿಫ್ಟ್ ಮೂಲಕ ಬಂದ ಆಸ್ತಿ ಪಿತ್ರಾರ್ಜಿತವಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ, ತಾತ-ಮುತ್ತಾತನಿಂದ ಬಂದಂತಹ ಆಸ್ತಿ ಮಾತ್ರ ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ. ಗಿಫ್ಟ್ ಮೂಲಕ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವುದೇ ಜನ್ಮಸಿದ್ಧ ಹಕ್ಕು ಇರುವುದಿಲ್ಲ.
* ಆಸ್ತಿ ಈಗಾಗಲೇ ವಿಭಾಗ ಆಗಿರುವುದು
ಪಿತ್ರಾರ್ಜಿತ ಆಸ್ತಿ ವಿಭಾಗವಾದ ನಂತರ ಆ ಆಸ್ತಿ ಸ್ವಯಾರ್ಜಿತ ಆಸ್ತಿಯಾಗುತ್ತದೆ. ಒಮ್ಮೆ ಆಸ್ತಿ ವಿಭಾಗವಾದ ನಂತರ ಮತ್ತೆ ಮಕ್ಕಳು ಆ ಆಸ್ತಿಯಲ್ಲಿ ಯಾವುದೇ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ.
* ಕಾಲಮಿತಿ ಮೀರಿರುವುದು
ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳು ಹಕ್ಕು ಪಡೆದುಕೊಳ್ಳಲು 12 ವರ್ಷ ಕಾಲಾವಕಾಶ ಇರುತ್ತದೆ ಮತ್ತು ಈ ಅವಧಿ ಮೀರಿದ ನಂತರ ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಲು ಕಷ್ಟಪಡಬೇಕಾಗುತ್ತದೆ ಅಥವಾ ಕೆಲವು ಸಮಯದಲ್ಲಿ ಯಾವುದೇ ಪಾಲು ಸಿಗಲ್ಲ.
* ಧರ್ಮಮತ್ತು ವಯಕ್ತಿಕ ಕಾಯ್ದೆಗಳು
ಹಿಂದೂ ಕಾನೂನಿಗೆ ಹೋಲಿಕೆ ಮಾಡಿದರೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಕಾಯಿದೆಯಲ್ಲಿ ಪಿತ್ರಾರ್ಜಿತ ಆಸ್ತಿಯ ಕಾನೂನು ಬೇರೆ. ಧರ್ಮದ ಕಾಯ್ದೆ ಕೂಡ ಆಸ್ತಿಯಲ್ಲಿ ಪಾಲು ಸಿಗದೇ ಇರಲು ಕಾರಣ ಆಗಬಹುದು.
ಗೊಂದಲ ತಪ್ಪಿಸಲು ಏನು ಮಾಡಬೇಕು?
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಯಾವುದಾದರೂ ತಕರಾರು ಇದ್ದಲ್ಲಿ ಆಸ್ತಿ ದಾಖಲೆಯ ಜೊತೆಗೆ ವಕೀಲರನ್ನು ಬೇಟಿಮಾಡಿ ಅಥವಾ ಆನ್ಲೈನ್ ನಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯ ಬಗ್ಗೆ ತಿಳಿದುಕೊಂಡು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

