Post Office: 10 ಸಾವಿರ ಕಟ್ಟಿದರೆ 7 ಲಕ್ಷ ರಿಟರ್ನ್ಸ್, ಪೋಸ್ಟ್ ಆಫೀಸ್ ಸ್ಕೀಮಿಗೆ ಹೆಸರು ಸೇರಿಸಲು ಮುಂದಾದ ಜನ
ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ದುಪ್ಪಟ್ಟು ಲಾಭ.
Post Office Recurring Deposit Scheme: ದೇಶದ ಬಡ ನಾಗರೀಕರಿಗಾಗಿ ಪೋಸ್ಟ್ ಆಫೀಸ್ (Post Office) ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಸಣ್ಣ ಹೂಡಿಕೆಯ ಸಾಕಷ್ಟು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿವೆ. ಜನಸಾಮಾನ್ಯರು ಅಂಚೆ ಇಲಾಖೆಯ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಅಂಚೆ ಕಚೇರಿಯಲ್ಲಿ ಜನರಿಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ.
ಅಂಚೆ ಇಲಾಖೆಯು ಹೊಸ ಹೊಸ ಠೇವಣಿ ಯೋಜನೆಯನ್ನು ಜಾರಿಗೊಳಿಸುತ್ತದೆ. ಇನ್ನು ಮಧ್ಯಮ ವರ್ಗದ ಜನರಿಗೆ ಪೋಸ್ಟ್ ಆಫೀಸ್ ನಲ್ಲಿನ ಹೂಡಿಕೆಯು ಉತ್ತಮವಾಗಿರುತ್ತದೆ. ಪೋಸ್ಟ್ ಆಫೀಸ್ ನ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿರುತ್ತದೆ.
ಮರುಕಳಿಸುವ ಠೇವಣಿ ಯೋಜನೆ
ಪೋಸ್ಟ್ ಆಫೀಸ್ ನಲ್ಲಿ ಮರುಕಳುಹಿಸುವ ಠೇವಣಿ (Recurring Deposit) ಯೋಜನೆ ಲಭ್ಯವಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ದೊಡ್ಡ ಮಟ್ಟಿನ ಲಾಭವನ್ನು ಪಡೆಯಬಹುದಾಗಿದೆ. ಬ್ಯಾಂಕ್ ನಲ್ಲಿನ FD ಮತ್ತು RD ಗೆ ಹೋಲಿಸಿದರೆ ಈ ಯೋಜನೆ ಬಹಳ ಲಾಭದಾಯಕವಾಗಿದೆ. ಪೋಸ್ಟ್ ಆಫೀಸ್ ನಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟವರು ಆರ್ ಡಿ ಖಾತೆಯನ್ನು ತೆರೆಯಬಹುದು.
ಸರ್ಕಾರವು ಇತ್ತೀಚಿಗೆ ಮರುಕಳಿಸುವ ಠೇವಣಿ ಯೋಜನೆಯ ಬಡ್ಡಿದರವನ್ನು ಶೇ. 6.2 ರಿಂದ 6.5 ಕ್ಕೆ ಹೆಚ್ಚಿಸಿದೆ. ಸರ್ಕಾರವು ತನ್ನ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಹೆಚ್ಚಿಸುತ್ತದೆ. ಪ್ರತಿ ತಿಂಗಳು ಆರ್ ಡಿಯಲ್ಲಿ ಹಣವನ್ನು ಠೇವಣಿ ಇಡುವುದರಿಂದ ದೊಡ್ಡ ಮೊತ್ತದ ಆದಾಯವನ್ನು ಪಡೆಯಬಹುದಾಗಿದೆ. ಇದೀಗ ಪೋಸ್ಟ್ ಆಫೀಸ್ ನ ಮರುಕಳಿಸುವ ಠೇವಣಿ ಯೋಜನೆಯ ಐದು ವರ್ಷದ ಹೂಡಿಕೆ ಎಷ್ಟು ಲಾಭವನ್ನು ನೀಡುತ್ತದೆ ಎಂದು ತಿಳಿಯೋಣ.
ಈ ಯೋಜನೆಯಲ್ಲಿ 10 ಸಾವಿರ ಹೂಡಿಕೆ ಮಾಡಿದರೆ ಸಿಗಲಿದೆ 7 ಲಕ್ಷ
ಪೋಸ್ಟ್ ಆಫೀಸ್ ನ ಮರುಕಳಿಸುವ ಠೇವಣಿ ಯೋಜನೆ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಹೂಡಿಕೆದಾರರು ಈ ಯೋಜನೆಯಲ್ಲಿ ಪ್ರತಿ ತಿಂಗಳು 10,000 ಹಣವನ್ನು ಹೂಡಿಕೆ ಮಾಡಿದರೆ ಐದು ವರ್ಷಗಳ ನಂತರ 7,10,000 ಹಣವನ್ನು ನೀವು ಲಾಭವಾಗಿ ಪಡೆಯಬಹುದು.
ನೀವು 10 ಸಾವಿರ ಮಾಸಿಕವಾಗಿ ಹೂಡಿಕೆ ಮಾಡಿದರೆ ಮೆಚ್ಯುರಿಟಿ ಅವಧಿಯ ನಂತರ ನಿಮಗೆ 6,00,000 ಹಣ ಹೂಡಿಕೆಯ ಮೊತ್ತ ಸಿಗುತ್ತದೆ. ಹೂಡಿಕೆಯ ಮೊತ್ತದ ಜೊತೆಗೆ ಬಡ್ಡಿಯಾಗಿ 1,10,000 ಹಣ ನಿಮ್ಮದಾಗುತ್ತದೆ. ಈ ಯೋಜನೆಯಲ್ಲಿ ನೀವು ಒಟ್ಟಾರೆ 7,10,000 ಹಣವನ್ನು ಪಡೆಯಬಹುದು.