Medicine Alert: ಔಷಧ ಪ್ಯಾಕೆಟ್ ಗಳ ಮೇಲೆ ಕೆಂಪು ರೇಖೆ ಏಕೆ ಇರುತ್ತದೆ..? ಇಂತಹ ಔಷದವನ್ನು ಖರೀದಿಸುವ ಮುನ್ನ ಎಚ್ಚರ.

ಔಷದವನ್ನು ಖರೀದಿಸುವ ಮುನ್ನ ಈ ಮಾಹಿತಿಯನ್ನು ತಿಳಿಯುದು ಉತ್ತಮ.

Red Line On Medicine Packets: ಸಾಮಾನ್ಯವಾಗಿ ಎಲ್ಲರು ಸಹ ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಕೊಡುತ್ತಾರೆ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಉಂಟಾದರೂ ಅದನ್ನು ನಿರ್ಲಕ್ಷಿಸದಿರುವುದು ಉತ್ತಮ. ಮೊದಲು ಸ್ವಲ್ಪ ಹದೆಗೆಟ್ಟಿರುವ ಆರೋಗ್ಯ ನಂತರ ಹೆಚ್ಚಿನ ಸಮಸ್ಯೆಗೆ ಗುರಿಮಾಡುತ್ತದೆ.

ಸಾಮಾನ್ಯವಾಗಿ ಎಲ್ಲರು ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದಾಗ ವೈದ್ಯರ ಬಳಿ ಹೋಗುವುದು ಸಹಜ. ಇನ್ನು ವೈದ್ಯರು ನೀಡುವ ಔಷಧಿಗಳ (Medicine) ಬಗ್ಗೆ ಜನರು ಮಾಹಿತಿ ತಿಳಿದುಕೊಳ್ಳುವುದು ಅಗತ್ಯ.

Red Line On Medicine Packets
Image Credit: Quora

ಪ್ರತಿ ಔಷಧಗಳ ಬಗ್ಗೆ ಮಾಹಿತಿ ತಿಳಿದಿರಲಿ
ವೈದ್ಯರು ಅನಾರೋಗ್ಯದ ಕುರಿತು ಪರೀಕ್ಷಿಸಿ ಸೂಕ್ತ ಔಷಧಿಯನ್ನು ನೀಡುತ್ತಾರೆ. ಆದರೆ ಕೆಲವೊಮ್ಮೆ ಈ ಸಾಮಾನ್ಯ ಜ್ವರ, ಶೀತ, ಕೆಮ್ಮು, ತಲೆನೋವು ಹೀಗೆ ಇನ್ನಿತರ ಸಾಮಾನ್ಯ ಕಾಯಿಲೆಗಳು ಮುಷ್ಯರಲ್ಲಿ ಕಂಡುಬಂದರೆ ಅದನ್ನು ಹೆಚ್ಚಿನ ಜನರು ನಿರ್ಲಕ್ಷಿಸುತ್ತಾರೆ.  ಈ ಸಮಯದಲ್ಲಿ ಹೆಚ್ಚಿನ ಜನರು ತಮಗೆ ತಾವೇ ವೈದ್ಯರಾಗಲು ಮುಂದಾಗುತ್ತಾರೆ.

ಸದ್ಯ ಇಂತಹ ಜನರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನಿಮ್ಮ ಆರೋಗ್ಯ ಹದೆಗೆಟ್ಟಾಗ ನಿಮಗೆ ನೀವೇ ವೈದ್ಯರಾಗುವ ಮುನ್ನ ಈ ಮಾಹಿತಿ ತಿಳಿಯಿರಿ. ಏಕೆಂದರೆ ಔಷಧಿಗಳಲ್ಲಿ ನಿಮಗೆ ತಿಳಿದಿರಲಿ ಸಾಕಷ್ಟು ವಿಷಯಗಳಿವೆ. ಔಷಧವನ್ನು ತೆಗೆದುಕೊಳ್ಳುವ ಸಮಯದಲ್ಲಿ ನೀವು ಸಣ್ಣ ತಪ್ಪನ್ನು ಮಾಡಿದರು ಕೂಡ ಅದು ನಿಮ್ಮ ಜೀವಕ್ಕೆ ಸಮಸ್ಯೆಯನ್ನು ತರುವ ಸಾಧ್ಯತೆ ಹೆಚ್ಚಿರುತ್ತದೆ.

Red Line On Medicine Packets
Image Credit: Telegraphindia

ಔಷಧ ಪ್ಯಾಕೆಟ್ ಗಳ ಮೇಲೆ ಕೆಂಪು ರೇಖೆ ಏಕೆ ಇರುತ್ತದೆ..?
ಸಾಮಾನ್ಯವಾಗಿ ಹೆಚ್ಚಿನ ಜನರು ಕೆಲ ರೋಗಗಳಿಗೆ ತಾವೇ ಮೆಡಿಕಲ್ ಗೆ ಹೋಗಿ ಔಷಧವನ್ನು ತಂದುಕೊಳ್ಳುತ್ತಾರೆ. ಆದರೆ ವೈದ್ಯರ ಸಲಹೆ ಇಲ್ಲದೆ ಯಾರು ಕೂಡ ಔಷಧವನ್ನು ತಗೆದುಕೊಳ್ಳಬಾರದು. ಅಷ್ಟಕ್ಕೂ ಈ ಔಷಧಗಳ ಪ್ಯಾಕೆಟ್ ಮೇಲೆ ರೆಡ್ ಮಾರ್ಕ್ ಯಾಕಿರುತ್ತದೆ ಗೊತ್ತಾ…? ಔಷಧ ಪ್ಯಾಕೆಟ್ ಗಳ ಮೇಲೆ ಕೆಂಪು ರೇಖೆ ಇದ್ದರೆ ಅಂತಹ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ಎಂದಿಗೂ ತೆಗೆದುಕೊಳ್ಳಬಾರದು. ಅಂತಹ ಔಷಧಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವು ಅಗತ್ಯ ಎಂದರ್ಥ.

Join Nadunudi News WhatsApp Group

ಈ ರೀತಿ ಇದ್ದರು ಔಷಧಗಳನ್ನು ತೆಗೆದುಕೊಳ್ಳಬಾರದು
*NRX – ಔಷಧದ ಪ್ಯಾಕೆಟ್ ಮೇಲೆ NRX ಎಂದಿದ್ದರೆ, ಔಷಧ ಪರವಾನಗಿ ಹೊಂದಿರುವ ವೈದ್ಯರು ಮಾತ್ರ ಇಂತಹ ಔಷಧವನ್ನು ತೆಗೆದುಕೊಳ್ಳಲು ಸಲಹೆ ನೀಡಬಹುದು.

*RX – ಔಷಧದ ಪ್ಯಾಕೆಟ್ ಮೇಲೆ RX ಎಂದಿದ್ದರೆ, ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು.

*XRX – ವೈದ್ಯರು ಮಾತ್ರ ಇಂತಹ ಔಷದವನ್ನು ರೋಗಿಗಳು ನೀಡಲು ಸಾಧ್ಯ, ಮೆಡಿಕಲ್ ಗಳಲ್ಲಿ ಇಂತಹ ಔಷಧಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದರ್ಥ.

Join Nadunudi News WhatsApp Group