Redmi A2: ಕೇವಲ 5999 ರೂ. ಗೆ ಸಿಗಲಿದೆ ರೆಡ್ಮಿ ಸ್ಮಾರ್ಟ್ ಫೋನ್, ಮಾರುಕಟ್ಟೆಗೆ ಎರಡು ರೆಡ್ಮಿ ಮೊಬೈಲ್ ಬಿಡುಗಡೆ.
ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪೆನಿಯಾದ ರೆಡ್ಮಿ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ರೆಡ್ಮಿ ಕಂಪನಿಯ ಸ್ಮಾರ್ಟ್ ಫೋನ್ ಗಳ ವಿಶೇಷತೆ ತಿಳಿಯೋಣ.
Redmi A2 And A2+ Smart Phone: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ (Smart Phone) ಗಳು ಬಿಡುಗಡೆಗೊಳ್ಳುತ್ತಿವೆ. ಸ್ಮಾರ್ಟ್ ಫೋನ್ ಗಳ ಬೇಡಿಕೆಗೆ ಅನುಗುಣವಾಗಿ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ವಿವಿಧ ಮದಾರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತಲಿವೆ.
ಇನ್ನು ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪೆನಿಯಾದ ರೆಡ್ಮಿ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ರೆಡ್ಮಿ ಕಂಪನಿಯ ಸ್ಮಾರ್ಟ್ ಫೋನ್ ಗಳ ವಿಶೇಷತೆ ತಿಳಿಯೋಣ.
ರೆಡ್ಮಿ ಎ2 + ಸ್ಮಾರ್ಟ್ ಫೋನ್
ಇದೀಗ ರೆಡ್ಮಿ ತನ್ನಾ ಎ ಸರಣಿಯಲ್ಲಿ ರೆಡ್ಮಿ ಎ2 (Redmi A2) ಮತ್ತು ರೆಡ್ಮಿ ಎ2+ (Redmi A2) ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್ ಫೋನ್ ಗಳ ಫೀಚರ್ ಬಗ್ಗೆ ಮಾಹಿತಿ ತಿಳಿಯೋಣ. ಇನ್ನು ರೆಡ್ಮಿ ಎ2 + ಸ್ಮಾರ್ಟ್ ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ 4GB +64GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ರೆಡ್ಮಿ ಎ2 + ಸ್ಮಾರ್ಟ್ ಫೋನ್ ನ ಬೆಲೆ 8499 ರೂ. ಆಗಿದೆ.
ರೆಡ್ಮಿ ಎ2 ಸ್ಮಾರ್ಟ್ ಫೋನ್
ರೆಡ್ಮಿ ಎ2 ಸ್ಮಾರ್ಟ್ ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ 2GB +32GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ರೆಡ್ಮಿ ಎ2 ಸ್ಮಾರ್ಟ್ ಫೋನ್ ನ ಬೆಲೆ 5999 ರೂ. ಆಗಿದೆ. 2GB +64GB ಸ್ಟೋರೇಜ್ ಆಯ್ಕೆಯ ರೆಡ್ಮಿ ಎ2 ಸ್ಮಾರ್ಟ್ ಫೋನ್ ನ ಬೆಲೆ 6499 ರೂ. ಆಗಿದೆ.
4GB +64GB ಸ್ಟೋರೇಜ್ ಆಯ್ಕೆಯ ರೆಡ್ಮಿ ಎ2 ಸ್ಮಾರ್ಟ್ ಫೋನ್ ನ ಬೆಲೆ 7499 ರೂ. ಆಗಿದೆ. ರೆಡ್ಮಿ ಎ2 ಮತ್ತು ಎ 2 + ಸ್ಮಾರ್ಟ್ ಫೋನ್ ಗಳ ಡಿಸ್ ಪ್ಲೇ ಒಂದೇ ರೀತಿ ಇದ್ದು ಆಕರ್ಷಕ ಕ್ಯಾಮರಾ ಫೀಚರ್ ಅನ್ನು ಹೊಂದಿದೆ.