Redmi New: DSLR ಕ್ಯಾಮೆರಾ ಖರೀದಿಸುವ ಅಗತ್ಯವಿಲ್ಲ, 200 MP ಕ್ಯಾಮೆರಾ, 12GB RAM ಇರುವ Redmi ಮೊಬೈಲ್ ಲಾಂಚ್.

ಉತ್ತಮ ಕ್ಯಾಮರಾ ಫೀಚರ್ ಹೊಂದಿದ ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಲಾಂಚ್‌ ಆಗಲಿದೆ.

Redmi Note 13 Pro Plus Smart Phone: ಇತ್ತೀಚಿಗೆ ಮೊಬೈಲ್ ಮಾನವನ ಅಗತ್ಯ ವಸ್ತುವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಮೊಬೈಲ್ ಬಳಸುತ್ತಾರೆ. ಮೊಬೈಲ್ ಬಳಸದೆ ಕೆಲವರ ದಿನ ಪ್ರಾರಂಭವಾಗುವುದೇ ಇಲ್ಲ.

ಇತ್ತೀಚೆಗಂತೂ ಸಣ್ಣ ಮಕ್ಕಳು ಕೂಡ ಮೊಬೈಲ್ ಬಳಸುತ್ತಾರೆ. ಮೊಬೈಲ್ ಬೇಡಿಕೆ ಹೆಚ್ಚುತ್ತಿದಂತೆ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಮೊಬೈಲ್ ಗಳು ಪರಿಚಯವಾಗುತ್ತಲೇ ಇರುತ್ತದೆ. ಇದೀಗ ಹೊಸ Redmi Smart Phone ಬಿಡುಗಡೆಯಾಗಲು ತಯಾರಿ ನೆಡೆಸುತ್ತಿದೆ.

Redmi Note 13 Pro Plus Smart Phone
Image Credit: 91mobiles

Redmi Note 13 Pro Plus Smart Phone
ರೆಡ್ಮಿಯ ಬಹು ನಿರೀಕ್ಷಿತ Redmi Note 13 Pro Plus ಸ್ಮಾರ್ಟ್ ಫೋನ್ ಲಾಂಚ್‌ಗೆ ದಿನಗಣನೆ ಆರಂಭ ಆಗಿದೆ. ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಫೋನ್‌ಗಳ ಸಾಲಿಗೆ ಈ ಫೋನ್‌ ಸೇರಲಿದೆ. Redmi Note 13 Pro Plus ವಿವಿಧ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯಲಿದೆ.

Redmi Note 13 Pro Plus Camera Quality And Display
Redmi Note 13 Pro Plus Phone ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ ಸೋನಿ IMX355 ಸೆನ್ಸರ್‌ ಇರುವ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್‌ ಹಾಗೂ ಓಮ್ನಿವಿಷನ್ OV02B10 ಸೆನ್ಸರ್‌ ಇರುವ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಮತ್ತು Redmi Note 13 Pro Plus Smart Phone 6 .67 ಇಂಚಿನ OLED ಡಿಸ್ಪ್ಲೇ ಪಡೆದುಕೊಂಡಿದೆ. ಹಾಗೆ 2712 x 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ.

Redmi Note 13 Pro Plus Battery Capacity
Image Credit: Gizchina

Redmi Note 13 Pro Plus Battery Capacity And Processor
Redmi Note 13 Pro Plus 5000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ. ಇದಕ್ಕಾಗಿ USB ಟೈಪ್ C ಚಾರ್ಜಿಂಗ್ ಲಭ್ಯವಿದೆ. Redmi Note 13 Pro Plus ಪ್ರೊಸೆಸರ್ ಬಗ್ಗೆ ನೋಡುದಾದರೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ 4nm ಚಿಪ್‌ಸೆಟ್‌ನೊಂದಿಗೆ ಬರಲಿದೆ.

Join Nadunudi News WhatsApp Group

Redmi Note 13 Pro Plus ಸ್ಮಾರ್ಟ್‌ ಫೋನ್ 12GB RAM + 256GB ಮತ್ತು 16GB RAM + 512GB ನ ಎರಡು ವೇರಿಯಂಟ್‌ ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಇದರ ಜೊತೆಗೆ ಸುಧಾರಿತ ಬ್ಲೂಟೂತ್‌ ಆವೃತ್ತಿ, ವೈ ಫೈ ಹಾಗೂ ಇನ್ನಿತರೆ ಕನೆಕ್ಟಿವಿಟಿ ಸೌಲಭ್ಯ ಈ ಫೋನ್‌ನಲ್ಲಿ ಇರಲಿದೆ.

Redmi Note 13 Pro Plus Smart Phone Price
Image Credit: Pricebaba

Redmi Note 13 Pro Plus Smart Phone Price
Redmi Note 13 Pro Plus 12 GB RAM + 256 GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 23,100 ರೂಪಾಯಿ ಆಗಿದೆ. ಹಾಗೆ 16 GB RAM + 512 GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 26,150 ರೂಪಾಯಿ ಆಗಿದೆ. ಈಗಾಗಲೇ ಈ ಫೋನ್‌ ಚೀನಾದಲ್ಲಿ ಲಭ್ಯವಿದೆ. ಹಾಗೆ ಇದು ಭಾರತದಲ್ಲಿ ಡಿಸೆಂಬರ್ ವೇಳೆಗೆ ಲಾಂಚ್‌ ಆಗಲಿದೆ.

Join Nadunudi News WhatsApp Group