Allowance: ರಾಜ್ಯದ ಎಲ್ಲಾ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಬೇಸರದ ಸುದ್ದಿ, ಹಣ ಕಡಿತ ಮಾಡಿದ ಸರ್ಕಾರ.

ರಾಜ್ಯದ ಕಾರ್ಮಿಕ ಮಕ್ಕಳಿಗೆ ನೀಡಲಾಗುತ್ತಿದ್ದ ಸಹಾಯಧನವನ್ನ ಕಡಿತ ಮಾಡಿದ ಸರ್ಕಾರ.

Reduction In Allowance Amount For Worker’s Children: ಸದ್ಯ ರಾಜ್ಯ ಸರ್ಕಾರ (Karnataka State Government) ಸಾಲು ಯೋಜನೆಯನ್ನು ಜಾರಿಗೊಳಿಸುತ್ತಿದೆ ಎನ್ನಬಹುದು. ಕಾಂಗ್ರೆಸ್ ಸರ್ಕಾರ ಇತ್ತೀಚಿಗೆ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯವನ್ನು ನೀಡಿತು. ಹೊಸ ಸೌಲಭ್ಯವನ್ನು ಜಾರಿಗೊಳಿಸುತ್ತಿರುವ ಖುಷಿಯಲ್ಲಿ ಶಾಲಾ ಮಕ್ಕಳಿಗೆ ಇದೀಗ ಸರ್ಕಾರ ಬೇಸರದ ಸುದ್ದಿ ನೀಡಿದೆ. ಈ ಹಿಂದೆ BJP ಸರ್ಕಾರ ಕಾರ್ಮಿಕ ಮಕ್ಕಳಿಗೆ ನೀಡುತ್ತಿದ್ದ ಸಹಾಯಧನದ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಬದಲಾವಣೆ ತರಲು ಮುಂದಾಗಿದೆ.

Congress Government Latest Update
Image Credit: Live Mint

ರಾಜ್ಯದ ಕಾರ್ಮಿಕ ಮಕ್ಕಳಿಗೆ ಬಿಗ್ ಶಾಕ್
ರಾಜ್ಯದ ಕಾರ್ಮಿಕ ಇಲಾಖೆಯ ಮಕ್ಕಳಿಗೆ ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ ವಿವಿಧ ಸಹಾಯಧನ ಸೌಲಭ್ಯವನ್ನು ನೀಡಿತ್ತಿತ್ತು. ಸದ್ಯ ಕಾಂಗ್ರೆಸ್ ಸರ್ಕಾರ ಸಹಾಯಧನ ಸೌಲಭ್ಯದ ಹಣವನ್ನು ಕಡಿತ ಮಾಡುವ ಮೂಲಕ ಕಾರ್ಮಿಕ ಮಕ್ಕಳಿಗೆ ಬೇಸರದ ಸುದ್ದಿ ನೀಡಿದೆ

ರಾಜ್ಯ ಸರ್ಕಾರದಿಂದ ಕಾರ್ಮಿಕರ ಶೈಕ್ಷಣಿಕ ಸಹಾಯಧನ ಸೌಲಭ್ಯಕ್ಕಾಗಿ ಕಲಿಕಾ ಭಾಗ್ಯ ಅಡಿಯಲ್ಲಿ ವಿವಿಧ ವಾರ್ಷಿಕ ಸಹಾಯಧನ ಸೌಲಭ್ಯವನ್ನು ನೀಡಲಾಗುತ್ತಿತ್ತು. ಸಧ್ಯ ಕಾಂಗ್ರೆಸ್ ಸರ್ಕಾರ ಈ ಸಹಾಯಧನ ಮೊತ್ತವನ್ನು ಕಡಿತಗೊಳಿಸಿದೆ. ರಾಜ್ಯ ಸರ್ಕಾರ ಈ ಬಗ್ಗೆ October 30 ರಂದು ಅಧಿಕೃತ ಘೋಷಣೆ ಹೊರಡಿಸಿದೆ. ಕಾರ್ಮಿಕ ಮಕ್ಕಳಿಗೆ ನೀಡಲಾಗುತ್ತಿರುವ ಸಹಾಯಧನವನ್ನು ಎಷ್ಟು ಕಡಿತಗೊಳಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Reduction In Allowance Amount For Worker's Children
Image Credit: Leadschool

ಕಾರ್ಮಿಕ ಮಕ್ಕಳ ಸಹಾಯಧನ ಮೊತ್ತದ ಕಡಿತದ ವಿವರ
*1 ರಿಂದ 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ 5,000 ರೂ. ಗಳನ್ನು ವಾರ್ಷಿಕವಾಗಿ ನೀಡಲಾಗಿದ್ದು, ಸದ್ಯ ಈ ಹಣವನ್ನು 1,100 ರೂ. ಗೆ ಕಡಿತಗೊಳಿಸಲಾಗಿದೆ.

*5 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ 8,000 ರೂ. ಗಳನ್ನು ವಾರ್ಷಿಕವಾಗಿ ನೀಡಲಾಗಿದ್ದು, ಸದ್ಯ ಈ ಹಣವನ್ನು 1,250 ರೂ. ಗೆ ಕಡಿತಗೊಳಿಸಲಾಗಿದೆ.

Join Nadunudi News WhatsApp Group

*9 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ 12,000 ರೂ. ಗಳನ್ನು ವಾರ್ಷಿಕವಾಗಿ ನೀಡಲಾಗಿದ್ದು, ಸದ್ಯ ಈ ಹಣವನ್ನು 3,000 ರೂ. ಗೆ ಕಡಿತಗೊಳಿಸಲಾಗಿದೆ.

*PUC ವಿದ್ಯಾರ್ಥಿಗಳಿಗೆ ಸಹಾಯಧನವಾಗಿ 15,000 ರೂ. ಗಳನ್ನು ವಾರ್ಷಿಕವಾಗಿ ನೀಡಲಾಗಿದ್ದು, ಸದ್ಯ ಈ ಹಣವನ್ನು 4,600 ರೂ. ಗೆ ಕಡಿತಗೊಳಿಸಲಾಗಿದೆ.

Reduction In Allowance Amount For Worker's Children
Image Credit: The Hindu

*ಪದವಿ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ 25,000 ರೂ. ಗಳನ್ನು ವಾರ್ಷಿಕವಾಗಿ ನೀಡಲಾಗಿದ್ದು, ಸದ್ಯ ಈ ಹಣವನ್ನು 6,000 ರೂ. ಗೆ ಕಡಿತಗೊಳಿಸಲಾಗಿದೆ.

*ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ 50,000 ರೂ. ಗಳನ್ನು ವಾರ್ಷಿಕವಾಗಿ ನೀಡಲಾಗಿದ್ದು, ಸದ್ಯ ಈ ಹಣವನ್ನು 10000 ರೂ. ಗೆ ಕಡಿತಗೊಳಿಸಲಾಗಿದೆ.

*PG , ITI , ಡಿಪ್ಲೊಮೊ, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ನೀಡಲಾದ ಸಹಾಯಧನವನ್ನು ಕಡಿತಗೊಳಿಸಲಾಗಿದೆ.

Join Nadunudi News WhatsApp Group