Gas Cylinder: ತಿಂಗಳ ಆರಂಭದಲ್ಲಿಯೇ ಜನರಿಗೆ ಗುಡ್ ನ್ಯೂಸ್, ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ.
ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಿಂದ ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಲಭಿಸಿದೆ.
Gas Cylinder Price Down: ದೇಶದಾದ್ಯಂತ ಜನರು ಇದೀಗ ಹಣದುಬ್ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ (Financial Year) ಆರಂಭಗೊಂಡಿದ್ದು ಸಾಕಷ್ಟು ನಿಯಮಗಳು ಬದಲಾಗಿವೆ. ಇನ್ನು ದೇಶದಾದ್ಯಂತ ಗ್ಯಾಸ್ ಸಿಲಿಂಡರ್ (Gas Cylinder) ಗಳ ಬೆಲೆಯಂತು ಹೆಚ್ಚುತ್ತಲೇ ಇದೆ.
ಇದೀಗ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಬೆಲೆಯ ಏರಿಕೆಯ ಪರಿಸ್ಥಿತಿಯಿಂದ ಮುಕ್ತಿ ಪಡೆಯಬಹುದಾಗಿದೆ.
ತಿಂಗಳ ಆರಂಭದಲ್ಲಿಯೇ ಜನರಿಗೆ ಗುಡ್ ನ್ಯೂಸ್
ಹೆಚ್ಚುತ್ತಿರುವ ಗ್ಯಾಸ್ ಬೆಲೆಗೆ ಬ್ರೇಕ್ ನೀಡಲು ಇದೀಗ ಸರ್ಕಾರ ಮುಂದಾಗಿದೆ. ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ಸರ್ಕಾರೀ ತೈಲ ಕಂಪನಿಗಳು ದೇಶದಾದ್ಯಂತ ಹೊಸ ಗ್ಯಾಸ್ ಬೆಲೆ ವ್ಯವಸ್ಥೆಯನ್ನು ಪರಿಚಯಿಸಲು ಹೊರಟಿದೆ. ಇದರಿಂದಾಗಿ ಜನಸಾಮಾನ್ಯರು ಗ್ಯಾಸ್ ಬೆಲೆಯ ಏರಿಕೆಯಿಂದ ಪರಿಹಾರವನ್ನು ಪಡೆಯಬಹುದು. ಗ್ಯಾಸ್ ಬೆಲೆಯ ಇಳಿಕೆಯು ಜನಸಾಮಾನ್ಯರಿಗೆ ಖುಷಿ ನೀಡಲಿದೆ.
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ
ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ ಆಗುತ್ತದೆ. ಇನ್ನು ಪ್ರತಿ ತಿಂಗಳ ಆರಂಭದಲ್ಲಿ ಜನರು ಗ್ಯಾಸ್ ಬೆಲೆಯ ಇಳಿಕೆಯ ನೀರಿಕ್ಷೆಯಲ್ಲಿರುತ್ತಾರೆ. ಹೊಸ ಹಣಕಾಸು ವರ್ಷದ ಪ್ರಾರಂಭದಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬಂದಿಲ್ಲ. ಇದೀಗ ಆಗಸ್ಟ್ ನ ಆರಂಭದಲ್ಲಿ ಗ್ಯಾಸ್ ಬೆಲೆಯ ಇಳಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಆಗಸ್ಟ್ 1 ರಿಂದ ಹೊಸ ದರ ಜಾರಿ
ಸರಕಾರಿ ತೈಲ ಕಂಪಾನಿಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆ. ತೈಲ ಮಾರುಕಟ್ಟೆಯಲ್ಲಿ ಕಂಪನಿಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಆಗಸ್ಟ್ 1 ರಿಂದ ಇಳಿಕೆ ಮಾಡಲಿದೆ. ಆಗಸ್ಟ್ 1 ರಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ.ಇಳಿಸಲಾಗಿದೆ. ಇ ಮೊದಲು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆ 1780 ರೂ. ಆಗಿದ್ದು ಪ್ರಸ್ತುತ 1680 ರೂ. ಆಗಿದೆ. ಈ ಮೂಲಕ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ. ಇಳಿಸಲಾಗಿದೆ. ಇನ್ನು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳಲ್ಲಿ ಯಾವುದೇ ಇಳಿಕೆ ಆಗಿಲ್ಲ.