Heart Attack: ಲೊ ಬಿಪಿ ಮತ್ತು ಹೃದಯಾಘಾತಕ್ಕೆ ಎಷ್ಟು ಸಂಬಂಧ…? ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಹೃದಯ ತಜ್ಞರು.

ಲೋ ಬಿಪಿ ಹಾಗೂ ಹೃದಯಾಘಾತಕ್ಕೆ ಯಾವ ರೀತಿ ಸಂಬಂಧವಿದೆ ಎನ್ನುವ ಬಗ್ಗೆ ತಜ್ಞರ ಅಭಿಪ್ರಾಯ.

Doctors About Spandana Heart Attack: ಸದ್ಯ ಸ್ಪಂದನ ಅವರ ದಿಢೀರ್ ಸಾವು ಇಡೀ ಕರುನಾಡನ್ನೇ ಬೆಚ್ಚಿ ಬೀಳಿಸಿದೆ. ಅತಿ ಚಿಕ್ಕ ವಯಸ್ಸಿನಲ್ಲಿ ಸ್ಪಂದನ ಹೃದಯಾಘಾತದಿಂದ ಮೃತಪಟ್ಟಿರುವುದು ನಿಜಕ್ಕೂ ವಿಷಾದನೀಯ. ಇತ್ತೀಚಿಗೆ ಹೃದಯಾಘಾತದಿಂದ ಉಂಟಾಗುವ ಸಾವಿನ ಪ್ರಕರಣ ಹೆಚ್ಚುತ್ತಿದೆ. ಸಣ್ಣ ಮಕ್ಕಳು ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಸಾಕಷ್ಟು ಪ್ರಕರಣಗಳಿವೆ.

ಇನ್ನು ಹೃದಯಾಘಾತದ ಕಾರಣ ಚಂದನವನ ಸಾಕಷ್ಟು ಕಲಾವಿದರು ನಿಧನರಾಗಿದ್ದಾರೆ. ಅಷ್ಟಕ್ಕೂ ಈ ಹೃದಯಾಘಾತ ಯಾವ ಕಾರಣಕ್ಕೆ, ಯಾವ ಸಮಯದಲ್ಲಿ, ಯಾವ ವಯಸ್ಸಿನವರಿಗೆ ಸಂಭವಿಸುತ್ತದೆ ಎನ್ನುವ ಬಗ್ಗೆ ಊಹೆ ಕೂಡ ಅಸಾಧ್ಯ.

What is the relationship between low BP and heart attack
Image Credit: Vijaykarnataka

ರಕ್ತದೊತ್ತಡದಲ್ಲಾಗುವ ತೀವ್ರ ಕುಸಿತವೇ ಹೃದಯಾಘಾತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಲೂ ಬಿಪಿ ಇರುವವರು ಈ ಹೃದಯಾಘಾತದ ಬಗ್ಗೆ ಬಹಳ ಎಚ್ಚರ ವಹಿಸಬೇಕು. ಸಣ್ಣ ರೀತಿಯಲ್ಲಿ ಎದೆ ನೋವು ಕಾಣಿಸಿಕೊಂಡರು ಕೂಡ ನಿರ್ಲಕ್ಷಿಸಬಾರದು. ಹೃದಯಾಘಾತ ಯಾವ ಕಾರಣಕ್ಕೆ ಉಟಾಗುತ್ತದೆ, ಯಾವ ರೀತಿಯ ಅಪಾಯವನ್ನು ನೀಡುತ್ತದೆ ಎನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಲೊ ಬಿಪಿ ಮತ್ತು ಹೃದಯಾಘಾತಕ್ಕೆ ಎಷ್ಟು ಸಂಬಂಧವಿದೆ ಎನ್ನುವ ಬಗ್ಗೆ ತಿಳಿಯೋಣ.

ಲೊ ಬಿಪಿ ಮತ್ತು ಹೃದಯಾಘಾತಕ್ಕೆ ಎಷ್ಟು ಸಂಬಂಧ
ಅಧಿಕ ಮತ್ತು ಕಡಿಮೆ ರಕ್ತದೊತ್ತಡ ಇವೆರಡು ಅಪಾಯಕಾರಿಯಾಗಿದೆ. ಧೀರ್ಘಕಾಲದಿಂದ ಲೂ ಬಿಪಿ ಸಮಸ್ಯೆ ಇದ್ದರೆ ಹೃದಯರಕ್ತನಾಳಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ ಎಂದು ಹೃದಯ ತಜ್ಞರು ಹೇಳುತ್ತಾರೆ.

ರಕ್ತದೊತ್ತಡವು ಸಾಮಾನ್ಯಕ್ಕಿಂತ ಕಡಿಮೆಯಿದ್ದಾಗ ಹೃದಯ ಮತ್ತು ದೇಹದ ಇತರ ಪ್ರಮುಖ ಅಂಗಗಳಿಗೆ ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ. ಇದು ದೀರ್ಘಕಾಲದ ವರೆಗೆ ಮುಂದುವರಿದರೆ ಹೃದಯದ ಸ್ನಾಯುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

Join Nadunudi News WhatsApp Group

What is the relationship between low BP and heart attack
Image Credit: Cminj

ಕಡಿಮೆ ರಕ್ತದೊತ್ತಡಕ್ಕೆ ಕಾರಣವೇನು
ತೀವ್ರ ಸೋಂಕುಗಳು, ಅಂತಃಸ್ರಾವಕ ಸಮಸ್ಯೆಗಳು, ತೀವ್ರ ರಕ್ತದ ನಷ್ಟ, ಅತಿಸಾರ ಕಡಿಮೆ ಇರುವುದು, ದೇಹದಾದ್ಯಂತ ಹರಡುವ ನ್ಯುಮೋನಿಯಾದಂತಹ ಶ್ವಾಸಕೋಶದ ಸೋಂಕು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ, ಮಧುಮೇಹದಂತಹ ಸಮಸ್ಯೆ ಹೆಚ್ಚಿದ್ದರೆ ಹೃದಯಾಘಾತದ ಸಮಸ್ಯೆ ಹೆಚ್ಚುತ್ತದೆ. ಲೋ ಬಿಪಿ ಸಮಸ್ಯೆ ಇರುವವರು ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಅವಶಕ್ಯ ಎಂದು ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ.

Join Nadunudi News WhatsApp Group