Yash And Sreeleela: ಶ್ರೀಲೀಲಾ ಅವರು ಯಶ್ ಅನ್ನು ಭಾವ ಎಂದು ಯಾಕೆ ಕರೆಯುತ್ತಾರೆ…? ಇಬ್ಬರ ನಡುವಿನ ಭಾಂದವ್ಯ ಏನು…?
ಯಶ್ ಹಾಗೂ ಶೀಲೀಲಾ ಅವರ ಬಾಂಧವ್ಯಕ್ಕೆ ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
Yash And Sreeleela Relationship: ಪ್ಯಾನ್ ಇಂಡಿಯಾ ಸ್ಟಾರ್ ನಟರಾದ ಯಶ್ (Yash) ಅವರು ತಮ್ಮ ಮುಂದಿನ ಚಿತ್ರದ ಅನೌನ್ಸ್ಮೆಂಟ್ ವಿಚಾರವಾಗಿ ಸುದ್ದಿಯಾಗುತ್ತಾರೆ. ಕೆಜಿಎಫ್ 2 ಬಳಿಕ ಯಶ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಹೀಗಾಗಿ ಯಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಯಶ್ ಅವರನ್ನು ಮುಂದಿನ ಚಿತ್ರದ ವಿಚಾರವಾಗಿ ಪ್ರಶ್ನೆ ಮಾಡುತ್ತಾ ಇರುತ್ತಾರೆ.
ಇನ್ನು ಯಶ್ ಬಾಲಿವುಡ್ ಗೆ ಎಂಟ್ರಿ ಕೊಡುವ ಬಗ್ಗೆ ಸುದ್ದಿಯಾಗಿತ್ತು. ಬಾಲಿವುಡ್ ನಲ್ಲಿ ಸಿನಿಮಾ ಮಾಡುವ ಬಗ್ಗೆ ಕೂಡ ಸ್ಪಷ್ಟನೆ ಲಭಿಸಿದೆ. ಇದೀಗ ಯಶ್ ಅವರು ಟಾಪ್ ನಟಿ ಶ್ರೀಲೀಲಾ ವಿಚಾರವಾಗಿ ಸುದ್ದಿಯಾಗಿದ್ದಾರೆ. ಯಶ್ ಹಾಗೂ ಶ್ರೀಲೀಲಾ (Sreeleela ) ಸಂಬಂಧಿಕರಾ ಎನ್ನುವ ಬಗ್ಗೆ ಇದೀಗ ಕುತೂಹಲ ಮೂಡಿಸಿದೆ.
ಯಶ್ ಹಾಗೂ ಶ್ರೀಲೀಲಾ
ನಟಿ ಶ್ರೀಲೀಲಾ ಅವರು ಕನ್ನಡ ಚಿತ್ರರಂಗದ ಮೂಲಕ ನಟನೆಗೆ ಎಂಟ್ರಿ ನೀಡಿದ್ದು ಇದೀಗ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿದ್ದಾರೆ. ಕನ್ನಡದ ಜೊತೆಗೆ ಟಾಲಿವುಡ್ ನಲ್ಲಿ ಕೂಡ ಶ್ರೀಲೀಲಾ ಮಿಂಚುತ್ತಿದ್ದಾರೆ. ಕನ್ನಡದ ಕಿಸ್ ಚಿತ್ರ ನಟಿಯನ್ನು ಎಲ್ಲರಿಗೂ ಪರಿಚಯಿಸಿತ್ತು. ಇದೀಗ ಚಿತ್ರರಂಗದ ಟಾಪ್ ಹೀರೋಗಳ ಜೊತೆ ನಟಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು ನಟಿ ಶ್ರೀಲೀಲಾ ಹಾಗೂ ಯಶ್ ಯಾವುದೇ ಚಿತ್ರರದಲ್ಲೂ ನಟಿಸಿಲ್ಲ. ಆದರೂ ಕೂಡ ಈ ಇಬ್ಬರು ಬಹಳ ಆಪ್ತರಾಗಿದ್ದಾರೆ. ಇವರ ಆಪ್ತತೆ ಯಾವ ಕಾರಣಕ್ಕೆ ಹುಟ್ಟಿಕೊಂಡಿದೆ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.
ಯಶ್ ಅವರನ್ನು ಭಾವ ಎಂದು ಕರೆಯುತ್ತಾರೆ ಶ್ರೀಲೀಲಾ
ಶ್ರೀಲೀಲಾ ಅವರು ಕೌಟುಂಬಿಕ ಕಾರ್ಯಕ್ರಮವೊಂದಲ್ಲಿ ಯಶ್ ಅವರನ್ನು ಜೀಜೂ ಎಂದು ಕರೆದಿದ್ದರು. ಜೀಜೂ ಎಂದರೆ ಭಾವ ಎಂದರ್ಥ. ಶ್ರೀಲೀಲಾ ಯಶ್ ಅವರನ್ನು ಭಾವ ಎಂದು ಕರೆದಿರುವುದು ವೈರಲ್ ಆಗಿದೆ. ಇವರ ಸಂಬಂಧಕ್ಕೆ ಕಾರಣ ಏನಿರಬಹುದು ಎಂದು ಎಲ್ಲರು ಕುತೂಹಲರಾಗಿದ್ದರೆ.
ಯಶ್ ಹಾಗೂ ಶ್ರೀಲೀಲಾ ನಡುವಿನ ಭಾಂದವ್ಯ
ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಾರೆ. ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಶ್ರೀಲೀಲಾ ತಾಯಿಯ ಬಳಿ ಹೋಗುತ್ತಾರೆ. ಈ ಕಾರಣಕ್ಕೆ ಯಶ್ ಹಾಗೂ ಶ್ರೀಲೀಲಾ ಕುಟುಂಬ ಆಪ್ತವಾಗಿದೆ. ಶ್ರೀಲೀಲಾ ಮೊದಲಿನಿಂದಲೂ ರಾಧಿಕಾ ಪಂಡಿತ್ ಅವರನ್ನು ಅಕ್ಕ ಎನ್ನುತ್ತಿದ್ದರು. ಈ ಕಾರಣಕ್ಕೆ ಶ್ರೀಲೀಲಾ ಯಶ್ ಅವರನ್ನು ಭಾವ ಎನ್ನುತ್ತಾರೆ. ಶ್ರೀಲೀಲಾ ಅವರ ತಾಯಿಯಿಂದಾಗಿ ಯಶ್ ಹಾಗೂ ಶ್ರೀಲೀಲಾ ನಡುವೆ ಭಾಂದವ್ಯ ಹುಟ್ಟಿಕೊಂಡಿದೆ.