New Annual Plan: 720 GB ಡೇಟಾ ಮತ್ತು ಅನಿಯಮಿತ ಕರೆ, Jio ಗ್ರಾಹಕರಿಗೆ 365 ದಿನಗಳ ಭರ್ಜರಿ ಪ್ಲಾನ್ ಘೋಷಣೆ.
ತನ್ನ ಬಳಕೆದಾರರಿಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸಿದ Jio.
Reliance Jio 3227 Annual Recharge Plan: ಭಾರತದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡುತ್ತಿರುತ್ತದೆ. ಪ್ರಸ್ತುತ ಜಿಯೋದ ಗ್ರಾಹಕರು ಮಾಸಿಕ, ತ್ರೈಮಾಸಿಕ, ವಾರ್ಷಿಕ ರಿಚಾರ್ಜ್ ಪ್ಲಾನ್ ಗಳ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ಇದೀಗ ಜಿಯೋ ತನ್ನ ಗ್ರಾಹಕರಿಗೆ ಮಾಸಿಕ ರೀಚಾರ್ಜ್ನಿಂದ ಬೇಸರಗೊಂಡಿರುವವರಿಗೆ ಬೆಸ್ಟ್ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯು 12 ತಿಂಗಳ ಅಂದರೆ ಪೂರ್ತಿ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದೀಗ ನಾವು ಈ ರಿಚಾರ್ಜ್ ಪ್ಲಾನ್ ನ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.
Reliance Jio 3227 Annual Recharge Plan
ಈ ಯೋಜನೆ 12 ತಿಂಗಳು ಅಂದರೆ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. 3227 ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ ಪ್ರತಿನಿತ್ಯ 2GB ಡೇಟಾವನ್ನು ಬಳಕೆಮಾಡಬಹುದಾಗಿದೆ. 12 ತಿಂಗಳ ವರೆಗೆ 730 GB ಡೇಟಾವನ್ನು ಪಡೆಯಬಹುದು. ದೈನಂದಿನ ಡೇಟಾ ಮಿತಿ ಮುಗಿದ ನಂತರ ಡೇಟಾ ವೇಗವು 64Kbps ಗೆ ಇಳಿಯುತ್ತದೆ.
ಇದರಲ್ಲಿ ಅನಿಯಮಿತ ಕರೆ ಸೌಲಭ್ಯ, ಪ್ರತಿನಿತ್ಯ 100 SMS , ಇಷ್ಟೇ ಅಲ್ಲದೆ ಈ ಯೋಜನೆಯಲ್ಲಿ ನಿಮಗೆ 1 ವರ್ಷದವರೆಗಿನ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವ ವನ್ನು ಪಡೆಯಬಹುದು. ಈ ಯೋಜನೆಯ ಇತರ ಪ್ರಯೋಜನಗಳ ಕುರಿತು ನೋಡುದಾದರೆ JioTV , Jio Cinema, Jio Security ಮತ್ತು Jio Cloud ಸೇರಿದಂತೆ Jio ಅಪ್ಲಿಕೇಶನ್ಗಳ ಚಂದಾದಾರಿಕೆಯನ್ನು ಬಳಸಬಹುದಾಗಿದೆ.
ಮಾಸಿಕ ವೆಚ್ಚ…
3227 Annual Recharge Plan ಪ್ರತಿ ತಿಂಗಳಿಗೆ ಕೇವಲ 268 ವೆಚ್ಚವಾಗುತ್ತದೆ. ನಿಮ್ಮ ಮಾಸಿಕ ಯೋಜನೆಗೆ ಹೋಲಿಸಿದರೆ ಈ ಯೋಜನೆಯು ಅತ್ಯಂತ ಆರ್ಥಿಕ ಯೋಜನೆಯಾಗಿದೆ. ಗ್ರಾಹಕರು ಅನಿಯಮಿತ ಕರೆ, SMS ಹಾಗೂ 730 GB ಡೇಟಾವನ್ನು ತಿಂಗಳಿಗೆ 268 ರೂಪಾಯಿ ನೀಡಿ ಪಡೆಯಬಹುದಾಗಿದೆ. ರಿಚಾರ್ಜ್ ಮಾಡುವಾಗ ದುಬಾರಿ ಎಣಿಸಬಹುದು ಆದರೆ ಮಾಸಿಕ ವೆಚ್ಚವನ್ನು ನೋಡಿದರೆ ಇದು ತುಂಬಾ ಕಡಿಮೆ ಬೆಲೆಯ ಯೋಜನೆಯಾಗಿದೆ.