Reliance Jio: ಹೊಸ ವರ್ಷಕ್ಕೆ Jio ಕಡೆಯಿಂದ ಹ್ಯಾಪಿ ನ್ಯೂ ಇಯರ್ ಆಫರ್, Jio ಗ್ರಾಹಕರಿಗೆ ಅಂಬಾನಿ ಗಿಫ್ಟ್

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ 2024.

Reliance Jio Happy New Year Offer 2024: ಟೆಲಿಕಾಂ ಕಂಪನಿಗಳು ತಮ್ಮ ಪ್ರಸ್ತುತ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಲು ಅನೇಕ ರೀತಿಯ ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಇದೀಗ ಹೊಸ ವರ್ಷಕ್ಕೆ ಅಂತ ಟೆಲಿಕಾಂ ಕಂಪನಿಗಳು (Telicom Company) ಪೈಪೋಟಿಯಂತೆ ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತವೆ. ಸದ್ಯ ಜಿಯೋ ತನ್ನ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್ ಘೋಷಣೆ ಮಾಡಿದ್ದು ಇದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.

Reliance Jio Happy New year Offer 2024
Image Credit: Smartprix

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ 2024
ಹೊಸ ವರ್ಷಕ್ಕೆ ಇನ್ನೇನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಭಾಕಿ ಇದೆ. ಇದೀಗ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಹೊಸ ಆಫರ್ ಅನ್ನು ನೀಡಲು ಮುಂದಾಗಿದೆ. ಇದೀಗ ನಾವು ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದ ಹ್ಯಾಪಿ ನ್ಯೂ ಇಯರ್ ಆಫರ್ ಯಾವುದೆಂದು ತಿಳಿದುಕೊಳ್ಳೋಣ.

Reliance jio 2999 Rs Recharge Plan
365 ದಿನಗಳ ಮಾನ್ಯತೆಯ ಈ ರಿಚಾರ್ಜ್ ಪ್ಲಾನ್ ನಲ್ಲಿ ಇದೀಗ ನೀವು ಹೆಚ್ಚುವರಿಯಾಗಿ 24 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು. ಹಾಗೆ ಈ ರೆಚ್ಛ್ರಾಗೆ ಪ್ಲಾನ್ ನಲ್ಲಿ ನೀವು ದಿನಕ್ಕೆ 2.5 GB ಡೇಟಾ, ಅನಿಯಮಿತ ಕರೆ, ಪ್ರತಿದಿನ 100 SMS, ಜಿಯೋ ಸಿನಿಮಾ, ಜಿಯೋ ಟಿವಿ, ಹಾಗೂ ಜಿಯೋ ಕ್ಲೌಡ್ ಅನ್ನು ಪ್ರವೇಶಿಸಬಹುದಾಗಿದೆ.

Reliance jio 2999 Rs Recharge Plan
Image Credit: Times Now

ಇದಲ್ಲದೆ, ಚಂದಾದಾರರು ಈ ಯೋಜನೆಯ ಭಾಗವಾಗಿ ಅನಿಯಮಿತ 5G ಡೇಟಾವನ್ನು ಸಹ ಪಡೆದುಕೊಳ್ಳಬಹುದು. ಕಂಪನಿಯ ವೆಬ್‌ ಸೈಟ್ ಅಥವಾ ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಯೋಜನೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಈ ಕೊಡುಗೆ ಡಿಸೆಂಬರ್ 20 ರ ನಂತರ ರೀಚಾರ್ಜ್ ಮಾಡಿರುವ ಎಲ್ಲಾ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ.

ಜಿಯೋ ಟಿವಿ ಪ್ರೀಮಿಯಂ ಯೋಜನೆ ಪರಿಚಯಿಸಿದ ಜಿಯೋ
ಇದೀಗ ರಿಲಯನ್ಸ್ ಜಿಯೋ ಜಿಯೋ ಟಿವಿ ಪ್ರೀಮಿಯಂ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ 398 ರೂಪಾಯಿ ರಿಚಾರ್ಜ್ ಮಾಡಿದರೆ 28 ದಿನಗಳ ಮಾನ್ಯತೆ, 2GB ದೈನಂದಿನ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 SMS ಮತ್ತು 12 OTT ಅಪ್ಲಿಕೇಶನ್ ಅನ್ನು ಪ್ರವೇಶಿಸಬಹುದಾಗಿದೆ. 4498 ರೂಪಾಯಿ ರಿಚಾರ್ಜ್ ಮಾಡಿದರೆ 14 OTT ಅಪ್ಲಿಕೇಶನ್ ಅನ್ನು ವರ್ಷಪೂರ್ತಿ ಪ್ರವೇಶಿಸಬಹುದಾಗಿದೆ. ಈ ಯೋಜನೆಯನ್ನು ಸಕ್ರಿಯ ಗೊಳಿಸಿಕೊಳ್ಳಲು ಜಿಯೋ ವೆಬ್‌ ಸೈಟ್ ಅಥವಾ ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿನೀಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group