Reliance Jio: 56 GB ಡೇಟಾ ಮತ್ತು ಅನಿಯಮಿತ ಕರೆ, ಜಿಯೋ ಗ್ರಾಹಕರಿಗೆ ದೀಪಾವಳಿ ಹಬ್ಬದ ಭರ್ಜರಿ ರಿಚಾರ್ಜ್ ಪ್ಲ್ಯಾನ್.
ಜಿಯೋ ಗ್ರಾಹಕರಿಗೆ ನೂತನ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ Reliance Jio.
Reliance Jio New Prepaid Recharge Plan: ಇದೀಗ ದೇಶದಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್, ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಜನರಿಗೆ ಉತ್ತಮ ನೆಟ್ವರ್ಕ್ ಅನ್ನು ನೀಡುತ್ತಿದೆ. ಭಾರತೀಯ ಟೆಲಿಕಾಂ ಜಗತ್ತಿನ ಪ್ರಸಿದ್ಧ ಕಂಪನಿ ರಿಲಯನ್ಸ್ ಜಿಯೋ (Reliance Jio) ಅತಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ ಎನ್ನಬಹುದು.
Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ.
Reliance Jio 299 Prepaid Recharge Plan
ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಗ್ರಾಹಕರು ಅನಿಯಮಿತ ಕರೆಯ ಜೊತೆಗೆ ಪ್ರತಿದಿನ 2 GB ಡೇಟಾ ವನ್ನು ಪಡೆಯಬಹುದಾಗಿದೆ. ಅಂದರೆ ನೀವು 28 ದಿನಗಳ ವರೆಗೆ 56GB ಡೇಟಾವನ್ನು ಬಳಕೆ ಮಾಡಬಹುದಾಗಿದೆ. ಇದರ ಜೊತೆಗೆ ಪ್ರತಿದಿನ 100 SMS ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದು ಅತ್ಯಂತ ಜನಪ್ರಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ.
Reliance Jio 328 Prepaid Recharge Plan
ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಕರೆಯ ಜೊತೆಗೆ ಪ್ರತಿದಿನ 1.5 GB ಡೇಟಾ ವನ್ನು ಪಡೆಯಬಹುದಾಗಿದೆ. ಈ ರಿಚಾರ್ಜ್ ಪ್ಲ್ಯಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಜೊತೆಗೆ 3 ತಿಂಗಳ Disney+ Hotstar ಲಭ್ಯವಿದೆ. ಈ ಯೋಜನೆ ಕ್ರಿಕೆಟ್ ಪ್ರೇಮಿಗಳಿಗೆ ಉತ್ತಮವಾಗಿದೆ.