Jio And iPhone: ಐಫೋನ್ ಖರೀದಿಸುವವರಿಗೆ ಯಾರು ಕೊಡದ ಆಫರ್ ನೀಡಿದ Jio, ಅಂಬಾನಿ ಮಹತ್ವದ ಘೋಷಣೆ.

iPhone ಖರೀದಿಗೆ Jio Reliance ಭರ್ಜರಿ ಆಫರ್.

Reliance Jio iPhone 15 Offer: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ Apple ಕಂಪನಿಯ ನೂತನ ಮಾದರಿಯ iPhone 15 ಅನ್ನು ಬಿಡುಗಡೆ ಮಾಡಿದೆ. iPhone 15 ಖರೀದಿಗೆ ಜನರು ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. iPhone ಮಾರುಕಟ್ಟೆಯಲ್ಲಿ ಹೆಚ್ಚಿನ ಕ್ರೇಜ್ ಹುಟ್ಟಿಸಿದೆ. ಇನ್ನು iphone 15 ಬಿಡುಗಡೆ Apple ನ ಇನಿತರ ಮಾದರಿಗಳಿಗೆ ಡಿಸ್ಕೌಂಟ್ ನೀಡುತ್ತಿದೆ.

ಮಾರುಕಟ್ಟೆಯಲ್ಲಿ iPhone 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಆಯ್ಕೆಗಳು ಲಭ್ಯವಿದೆ. ಇನ್ನು iPhone 15 ಖರೀದಿಗೆ ವಿವಿಧ ಆನ್ಲೈನ್ ಫ್ಲಾಟ್ ಫಾರ್ಮ್ ಗಳು ರಿಯಾಯಿತಿ ಘೋಷಿಸಿರುವ ಬೆನ್ನಲ್ಲೇ ಇದೀಗ Reliance Jio iPhone 15 ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ.

iphone 15 offer for jio users
Image Credit: telecomtalk

iPhone 15 ನ ಎಲ್ಲ ಮಾದರಿಗಳ ಬೆಲೆ ಮಾರುಕಟ್ಟೆಯಲ್ಲಿ ಎಷ್ಟಿದೆ..?
iPhone 15 And iPhone 15 Plus ಮಾರುಕಟ್ಟೆಯಲ್ಲಿ 5 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. Pink, yellow, green, blue and black ಬಣ್ಣಗಳ ಆಯ್ಕೆ ಲಭ್ಯವಿದೆ. ಇನ್ನು iPhone 15 ರ 128GB ರೂಪಾಂತರದ ಬೆಲೆ 79,900 ಆಗಿದ್ದು, iPhone 15 Plus ನ 128GB ರೂಪಾಂತರದ ಬೆಲೆ 89,900 ಆಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ iPhone 15 Pro ಮತ್ತು iPhone 15 Pro Max ಮಾದರಿಗಳು Black titanium, white titanium, blue titanium and natural titanium ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು iPhone 15 Pro ರ 128GB ರೂಪಾಂತರದ ಬೆಲೆ 1,34,900 ಆಗಿದ್ದು, iPhone 15 Pro Max ನ 128GB ರೂಪಾಂತರದ ಬೆಲೆ 1,59,900 ಆಗಿದೆ.

The offer is announced for Jio customers who buy iPhone
Image Credit: forbes

iPhone ಖರೀದಿಗೆ Jio Reliance ಭರ್ಜರಿ ಆಫರ್

Join Nadunudi News WhatsApp Group

Jio ಇದೀಗ iPhone ಖರೀದಿಸುವವರಿಗೆ 6 ತಿಂಗಳವರೆಗೆ ಅನಿಯಮಿತ ಕರೆ, ಪ್ರತಿದಿನ 3GB ಡೇಟಾ ಮತ್ತು ಇನ್ನಿತರ ಪ್ರಯೋಜನಗಳನ್ನು ಘೋಷಿಸಿದೆ. ಆಫರ್ ಅನ್ನು ಬಳಸಿಕೊಳ್ಳಲು ನೀವು Jio ನೀಡುವ ಕಂಡೀಷನ್ ನ ಬಗ್ಗೆ ತಿಳಿದುಕೊಳ್ಳಬೇಕಿದೆ.

Reliance Jio iPhone 15 ಖರೀದಿಗೆ ಉತ್ತಮ ಕೊಡುಗೆಯನ್ನು ಘೋಷಿಸಿದೆ. Reliance Digital, Jiomart or Reliance Retail Store ಗಳಲ್ಲಿ iPhone 15 ಖರೀದಿಸಿದರೆ 6 ತಿಂಗಳವರೆಗೆ Reliance Jio 399 ರೂ. ಗಳ ಉಚಿತ ಯೋಜನೆಯನ್ನು ನೀಡಲಿದೆ. ನೀವು Jio ಬಳಕೆದಾರರಾಗಿದ್ದರೆ iPhone 15 ರ ಖರೀದಿಗೆ ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳಿ. ಇಂದಿನಿಂದ Reliance Jio ಗ್ರಾಹಕರಿಗಾಗಿ ಈ ಕೊಡುಗೆಯನ್ನು ನೀಡುತ್ತಿದೆ.

Join Nadunudi News WhatsApp Group