Jio Petrol Pump: ಈಗ ನೀವು ಕೂಡ ತೆರೆಯಬಹುದು Jio ಪೆಟ್ರೋಲ್ ಪಂಪ್, ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಅಂಬಾನಿ.

Jio ಪೆಟ್ರೋಲ್ ಪಂಪ್ ಬಿಸಿನೆಸ್ ಮಾಡಲು ಎಷ್ಟು ಹೂಡಿಕೆ ಅಗತ್ಯ.

Jio Reliance Petrol Pump Business: ಸ್ವಂತ ವ್ಯವಹಾರದ ಕನಸು ಯಾರಿಗೆ ತಾನೇ ಇರುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ತಮ್ಮದೇ ಆದ ಸ್ವಂತ ವ್ಯವಹಾರ ಮಾಡಬೇಕು ಎನ್ನುವ ಯೋಜನೆಯನ್ನು ಹಾಕಿರುತ್ತಾರೆ. ಆದರೆ ಸ್ವಂತ ವ್ಯವಹಾರಕ್ಕೆ ಬಂಡವಾಳದ ಕೊರತೆ ಉಂಟಾಗುವುದು ಸಹಜ. ಇನ್ನು ದೇಶದಲ್ಲಿ ವಾಹನಗಳ ಮಾರಾಟ ಎತೇಚ್ಛವಾಗಿ ನಡೆಯುತ್ತಲಿದೆ.

ಸದ್ಯ ವಾಹನ ಮಾರಾಟದ ಜೊತೆಗೆ ವಾಹನಗಳಿಗೆ ಅಗತ್ಯ ಇರುವ Petrol, Diesel ಮಾರಾಟ ಮಾಡುವುದು ಹೆಚ್ಚಿನ ಲಾಭವನ್ನು ನೀಡುವ ವ್ಯವಹಾರವಾಗಿದೆ. ಹೊಸ ವ್ಯವಹಾರವನ್ನು ಮಾಡುವ ಯೋಜನೆ ಇದ್ದವರಿಗೆ ಪೆಟ್ರೋಲ್ ಬ್ಯಾಂಕ್ ವ್ಯವಹಾರ ಉತ್ತಮ ಆಯ್ಕೆಯಾಗಿದೆ. ಸ್ವಂತ ಪೆಟ್ರೋಲ್ ಪಂಪ್ ತೆರೆಯಲು ಎಷ್ಟು ಬಂಡವಾಳದ ಅಗತ್ಯವಿದೆ…? ಎನ್ನುವುದು ಎಲ್ಲರ ಪ್ರಶ್ನೆಯಾಗಿರಬಹುದು. ಇದೀಗ ನೀವು ಪೆಟ್ರೋಲ್ ಪಂಪ್ ಉದ್ಯೋಗವನ್ನು ಪ್ರಾರಂಭಿಸಲು ಬೇಕಾಗುವ ಮಾಹಿತಿ ತಿಳಿಯೋಣ.

Jio Reliance Petrol Pump Business
Image Source: Rediff.com

ಸ್ವಂತ ಉದ್ಯೋಗ ಹುಡುಕುತ್ತಿರುವವರ ಗಮನಕ್ಕೆ
ಪೆಟ್ರೋಲ್ ಪಂಪ್‌ ಗಳ ಡೀಲರ್‌ ಶಿಪ್ ಒದಗಿಸುವ ಹಲವಾರು ಕಂಪನಿಗಳು ದೇಶದಲ್ಲಿವೆ. ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸೇರಿದಂತೆ ಇತ್ಯಾದಿ ಕಂಪನಿಗಳು ಪೆಟ್ರೋಲ್ ಪಂಪ್‌ಗಳ ಡೀಲರ್‌ ಶಿಪ್ ಅನ್ನು ನೀಡುತ್ತವೆ. ಸದ್ಯ ರಿಲಯನ್ಸ್ ಕಂಪನಿಯ Jio BP Petrol Pump Dealership ಅನ್ನು ಸಹ ನೀಡುತ್ತದೆ.

ನೀವು ಪೆಟ್ರೋಲ್ ಪಂಪ್ ತೆರೆಯುವ ಯೋಜನೆಯಲ್ಲಿ ಈ ಮಾಹಿತಿ ನಿಮಗೆ ಸಹಾಯವಾಗುತ್ತದೆ. ಜಿಯೋ ಕಂಪನಿಯು ತನ್ನ ನೆಟ್ವರ್ಕ್ ಅನ್ನು ಇನ್ನಷ್ಟು ವಿಸ್ತರಿಸಲು ಹೊಸ ಹೊಸ ಹೆಜ್ಜೆಯನ್ನು ಇಡುತ್ತಿದೆ. ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪೆಟ್ರೋಲ್ ಪಂಪ್ ಡೀಲರ್‌ ಶಿಪ್‌ ಗಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮುಂತಾದ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕು.

Jio Reliance Petrol Pump Business
Image Source: Mint

ಸ್ವಂತ ಪೆಟ್ರೋಲ್ ಪಂಪ್ ತೆರೆಯಲು ಎಷ್ಟು ಹಣ ಬೇಕು..?
ನೀವು Jio BP ಪೆಟ್ರೋಲ್ ಪಂಪ್ ತೆರೆಯಲು ಬಯಸಿದರೆ, ಅರ್ಜಿದಾರರು ಕನಿಷ್ಠ 800 ಚದರ ಅಡಿ ಜಮೀನು, 3 ಪಂಪ್ ಮ್ಯಾನೇಜರ್‌ ಗಳು ಮತ್ತು ಶೌಚಾಲಯವನ್ನು ಹೊಂದಿರಬೇಕು. ಇನ್ನು ಅರ್ಜಿ ಸಲ್ಲಿಸಲು 70 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ. ಪೆಟ್ರೋಲ್ ಪಂಪ್ ಪಾರ್ನಲ್ ಮಾಡಲು ಯಾವುದೇ ಏಜೆಂಟ್ ಅನ್ನು ನೇಮಿಸಿಲ್ಲ ಎಂದು JIO-BP ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Join Nadunudi News WhatsApp Group

ಪ್ರತಿ ತಿಂಗಳು ಸಿಗುವ ಲಾಭ ಎಷ್ಟು..?
ಪೆಟ್ರೋಲ್ ಪಂಪ್‌ನ ಡೀಲರ್‌ಶಿಪ್ ಅನ್ನು ತೆಗೆದುಕೊಂಡ ನಂತರ, ನಿಮ್ಮ ಗಳಿಕೆಯು ಪೆಟ್ರೋಲ್ ಮಾರಾಟದ ಮೇಲೆ ಇರುತ್ತದೆ. ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ ನಿಮಗೆ 2 ರಿಂದ 5 ರೂಪಾಯಿಗಳ ಕಮಿಷನ್ ಸಿಗುತ್ತದೆ. ಈ ಮೂಲಕ ನೀವು ತಿಂಗಳುಗಳಲ್ಲಿ ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯಬಹುದು. ಪೆಟ್ರೋಲ್ ಡೀಸೆಲ್ ಹೆಚ್ಚು ಮಾರಾಟವಾದರೆ ನಿಮ್ಮ ಗಳಿಕೆ ಹೆಚ್ಚಾಗುತ್ತದೆ. ಜಿಯೋ ರಿಲಯೆನ್ಸ್ ನ ಅಧಿಕೃತ ವೆಬ್ ಸೈಟ್ https://partners.jiobp.in/ ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group