Renault: ಕಾರುಗಳ ಮೇಲೆ 77 ಸಾವಿರ ರೂ ಡಿಸ್ಕೌಂಟ್, ಆಫರ್ ಬೆನ್ನಲ್ಲೇ ದೇಶದಲ್ಲಿ ಹೆಚ್ಚಾಗಿದೆ ಈ ಕಾರಿಗೆ ಬೇಡಿಕೆ.
ರೆನಾಲ್ಟ್ ಕಂಪನಿ ವಿವಿಧ ಕಾರ್ ಗಳ ಮೇಲೆ ರಿಯಾಯಿತಿ ಘೋಷಣೆ ಮಾಡಿದ್ದು, ಈ ಸೌಲಭ್ಯಗಳು ಜುಲೈ 31 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.
Renault Cars Offers: ದೇಶಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಕಾರುಗಳು ಬಿಡುಗಡೆಯಾಗಿ ಛಾಪು ಮೂಡಿಸುತ್ತಿವೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿಂದ ಹಿಡಿದು ಅಗ್ಗದ ಬೆಲೆಯವರೆಗೂ ಕಾರುಗಳು ಲಭ್ಯವಿದೆ. ಇದೀಗ ಭಾರತದಲ್ಲಿ ಅಗ್ಗದ ಬೆಲೆಯ ರೆನಾಲ್ಟ್ ಕಾರು ಹೆಚ್ಚು ಮಾರಾಟವಾಗಿ ಜನಪ್ರಿಯತೆ ಪಡೆದಿದೆ.
ಈ ಕಂಪನಿಯು ಇವಿಧ ಮಾದರಿಗಳ ಮೇಲೆ 77,000 ರೂಪಾಯಿಯವರೆಗೆ ರಿಯಾಯಿತಿ ಪ್ರಯೋಜನವನ್ನು ಘೋಷಿಸಿದೆ. ಈ ಕಾರಿನ ಖರೀದಿಯಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಷನ್ ರೇಟ್ ರಿಯಾಯಿತಿ ಹಾಗು ಲಾಯಲ್ಟಿ ಬೋನಸ್ ಸೇರಿವೆ. ಈ ಸೌಲಭ್ಯಗಳು ಜುಲೈ 31 ರವರೆಗೆ ಜಾರಿಯಾಗಲಿವೆ.
ರೆನಾಲ್ಟ್ ಕ್ವಿಡ್ ಕಾರು
ರೆನಾಲ್ಟ್ ಕ್ವಿಡ್ ಕಾರು ಒಟ್ಟು 57,000 ರೂಪಾಯಿಯ ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಅದರಲ್ಲಿ 15000 ವರೆಗೆ ನಗದು ರಿಯಾಯಿತಿ, 20,000 ರೂಪಾಯಿಯವರೆಗೆ ಎಕ್ಸ್ಚೇಂಜ್ ಬೋನಸ್. 12000 ರೂಪಾಯಿಯವರೆಗೆ ಕಾರ್ಪೊರೇಷನ್ ಡಿಸ್ಕೌಂಟ್ ಹಾಗು ರೂಪಾಯಿ 10000 ಲಾಯಲ್ಟಿ ಬೋನಸ್ ಸೇರಿವೆ. ಭಾರತದಲ್ಲಿ ರೆನಾಲ್ಟ್ ರೂಪಾಯಿ 4 .70 ರಿಂದ 6 .33 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ರೆನಾಲ್ಟ್ ಕ್ವಿಡ್ ಕಾರು ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 68 hp ಗರಿಷ್ಠ 91 Nm ಪೀಕ್ ಟಾರ್ಕ್ ಉತ್ಪಾದಿಸುತ್ತೆ. 5 ಸ್ಪೀಡ್ ಮ್ಯಾನುವಲ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 21 .46 ರಿಂದ 22.3 Kmpl ಮೈಲೇಜ್ ನೀಡುತ್ತದೆ.
ರೆನಾಲ್ಟ್ ಟ್ರೈಬರ್ ಕಾರು
ರೆನಾಲ್ಟ್ ಟ್ರೈಬರ್ ಕಾರು ಸಹ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. 15,000 ನಗದು ರಿಯಾಯಿತಿ, 12,000 ರೂಪಾಯಿಯವರೆಗೆ ಕಾರ್ಪೊರೇಷನ್ ಡಿಸ್ಕೌಂಟ್, 25,000 ರೂಪಾಯಿಯ ಎಕ್ಸ್ಚೇಂಜ್ ಬೋನಸ್ ಒಳಗೊಂದು ಬರೋಬ್ಬರಿ ರೂಪಾಯಿ 52000 ರಿಯಾಯಿತಿ ಪ್ರಯೋಜನ ಪಡೆಯಬಹುದು.
ಈ ಕಾರು 6.33 ಲಕ್ಷದಿಂದ ರೂಪಾಯಿ 8 .97 ಲಕ್ಷ ಎಕ್ಸ್ ಶೋ ರೂಮ್ ದರದಲ್ಲಿ ಸಿಗುತ್ತದೆ. ರೆನಾಲ್ಟ್ ಟ್ರೈಬರ್ ಸಬ್ 4 ಮೀಟರ್ ಎಂ ವಿಪಿಯಾಗಿದೆ. ಇದು 1 .0 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು 72 hp ಗರಿಷ್ಠ ಪವರ್ ಹಾಗು 96 Nm ಪೀಕ್ ತಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಮ್ಯಾನುವಲ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಈ ಕಾರು ಲಭ್ಯವಿದೆ.