Renault: 24 Km ಮೈಲೇಜ್ ಕೊಡುವ ಈ ಬಜೆಟ್ ಕಾರಿನ ಮುಂದೆ ಕಡಿಮೆ ಆಗುತ್ತಿದೆ ಟಾಟಾ ಕಾರ್ ಕ್ರೇಜ್, ಲಕ್ಷಕ್ಕೂ ಅಧಿಕ ಬುಕಿಂಗ್.
ಬರೋಬ್ಬರಿ 24 ಕಿಲೋಮೀಟರ್ ಮೈಲೇಜ್ ನೀಡಲಿದೆ ರೆನಾಲ್ಟ್ ಕಂಪನಿಯ ನವೀಕರಿಸಿದ ಮಾದರಿ.
Renault Mileage Cars 2023: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯಾ ಕಾರ್ ಗಳು ಲಗ್ಗೆ ಇಡುತ್ತಿದೆ. ಇತ್ತೀಚಿಗೆ ಮಾರುತಿ ಸುಜುಕಿ ಹೊಸ ಹೊಸ ಮಾದರಿಯ ಕಾರ್ ಗಳನ್ನು ಪರಿಚಯಿಸುತ್ತಿದೆ. ಮಾರುತಿ ಕಾರ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ಭರ್ಜರಿ ಸೇಲ್ ಕಾಣುತ್ತದೆ.
ಇದೀಗ ರೆನಾಲ್ಟ್ (Renault) ಕಂಪನಿ ಮಾರುತಿ ಸುಜುಕಿಯ ಬಜೆಟ್ ಕಾರುಗಳಿಗೆ ಸ್ಪರ್ಧೆ ನೀಡಲು ರೆನಾಲ್ಟ್ ಕ್ವಿಡ್ ಅನ್ನು ನವೀಕರಿಸುವ ಮೂಲಕ ಹೊಸ ವಿನ್ಯಾಸದಲ್ಲಿ ನವೀಕರಿಸಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ರೆನಾಲ್ಟ್ ನೂತನ ಮಾದರಿಯ ಕಾರ್ ಗಳು ಮಾರುತಿ ಕಾರ್ ಗಳಿಗೆ ಬರಿ ಪೈಪೋಟಿ ನೀಡಲಿವೆ.
ರೆನಾಲ್ಟ್ ಕ್ವಿಡ್ 2023 (Renault Kwid 2023)
ರೆನಾಲ್ಟ್ ಇದೀಗ ನವೀಕರಿಸಿದ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಸುಧಾರಿತ ಫೀಚರ್ ಗಳನ್ನೂ ಅಳವಡಿಸಿ ರೆನಾಲ್ಟ್ ಕ್ವಿಡ್ ಅನ್ನು ತಯಾರಿಸಲಾಗಿದೆ. ಆದರೆ ಕಂಪನಿಯು ಇನ್ನು ಕ್ವಿಡ್ ರೂಪಾಂತರದ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ರೆನಾಲ್ಟ್ ನ ಹಳೆಯ ಮಾದರಿಯು 199 ಸಿಸಿ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಹೊಂದಿದೆ.
ಬರೋಬ್ಬರಿ 24 ಕಿಲೋಮೀಟರ್ ಮೈಲೇಜ್ ನೀಡಲಿದೆ ರೆನಾಲ್ಟ್ ಕ್ವಿಡ್
ವರದಿಗಳ ಪ್ರಕಾರ ಹೊಸ ರೆನಾಲ್ಟ್ ಕ್ವಿಡ್ 2023 ರಲ್ಲಿ ಕೂಡ ಎಂಜಿನ್ ನಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇನ್ನು ರೆನಾಲ್ಟ್ ಕ್ವಿಡ್ 2023 ರಲ್ಲಿ 30 ಲೀಟರ್ ಇಂಧನ ಟ್ಯಾಂಕರ್ ಅನ್ನು ಅಳವಡಿಸಲಾಗಿದೆ. ಇನ್ನು ಈ ನೂತನ ರೆನಾಲ್ಟ್ ಕ್ವಿಡ್ ಬರೋಬ್ಬರಿ 24 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ರೆನಾಲ್ಟ್ ಕ್ವಿಡ್ ಬೆಲೆ
ಈ ಕಾರಿನಲ್ಲಿ ಯಂಚಾಲಿತ ಸನ್‌ರೂಫ್, 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬಾಸ್ ಮ್ಯೂಸಿಕ್ ಸಿಸ್ಟಮ್ ಮತ್ತು ನ್ಯಾವಿಗೇಷನ್, ಬ್ಲೂಟೂತ್, ಯುಎಸ್‌ಬಿ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಇನ್ನು ಈ ನವೀಕರಿಸಿದ ರೆನಾಲ್ಟ್ ಕ್ವಿಡ್ ಕಾರ್ ಗೆ ಸುಮಾರು 6,10,000 ದಿಂದ 8,50,000 ರೂ. ಬೆಲೆಯನ್ನು ಕಂಪನಿಯು ನಿಗಧಿಪಡಿಸಿದೆ. ಹಳೆಯ ಮಾದರಿಗಿಂತ ಈ ಕಾರ್ ನಲ್ಲಿ ವಿಭಿನ್ನ ವಿನ್ಯಾಸವನ್ನು ಅಳವಡಿಸಲಾಗಿದ್ದು ಗ್ರಾಹಕರನ್ನು ಹೆಚ್ಚಾಗಿ ಸೆಳೆಯಲಿದೆ.