Ads By Google

Renault 2024: ಕೇವಲ 4 ಲಕ್ಷಕ್ಕೆ ಮನೆಗೆ ತನ್ನಿ 22 Km ಮೈಲೇಜ್ ಕೊಡುವ ಈ ರೆನಾಲ್ಟ್ ಕಾರ್, ದಾಖಲೆಯ ಮಾರಾಟ

Renault 2024

Image Source: Youtube

Ads By Google

Renault Kwid In Best Price: ಕಾರು ಖರೀದಿ ಮಾಡುವ ಕನಸು ಹೆಚ್ಚಿನವರಿಗೆ ಇದೆ, ಆದರೆ ಹಣದ ಸಮಸ್ಯೆಯಿಂದ ಕಾರು ಖರೀದಿ ಮಾಡುವುದು ಬಹಳ ಕಷ್ಟಕರ ಆಗಿರುತ್ತದೆ. ಆದ್ರೆ ಈಗ ಮಧ್ಯಮ ವರ್ಗದ ಜನರು ಕೂಡ ಕಾರು ಖರೀದಿ ಮಾಡಬಹುದಾಗಿದೆ. ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ರೆನಾಲ್ಟ್ (Renault) ಕಂಪನಿಯ ಕ್ವಿಡ್ (Kwid) ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ.

ಭಾರತದಲ್ಲಿ ಖರೀದಿಗೆ ಲಭ್ಯ ಇರುವ ರೆನಾಲ್ಟ್ ಕ್ವಿಡ್ (Renault Kwid) ಕಾರು ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್ (ಒ), ಆರ್‌ಎಕ್ಸ್‌ಟಿ ಸೇರಿದಂತೆ 4 ರೂಪಾಂತರ, ಐಸ್ ಕೂಲ್ ವೈಟ್, ಮೂನ್ ಲೈಟ್ ಸಿಲ್ವರ್ ಒಳಗೊಂಡಂತೆ 5 – ಮೊನೊಟೋನ್, 5 – ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

Image Credit: Original Source

ರೆನಾಲ್ಟ್ ಕ್ವಿಡ್ (Renault Kwid) ಕಾರಿನ ಸುರಕ್ಷತಾ ವೈಶಿಷ್ಟತೆಗಳು

ರೆನಾಲ್ಟ್ ಕ್ವಿಡ್ ಈ ಕಾರು ಅತ್ಯಾಧುನಿಕವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೇನಾರ್ಸ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), HSA (ಹಿಲ್ ಸ್ಟಾರ್ಟ್ ಅಸಿಸ್ಟ್), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಒಳಗೊಂಡಿದೆ.

ಈ ಕಾರಿನಲ್ಲಿ 4 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು. ರೆನಾಲ್ಟ್ ಕ್ವಿಡ್, 8 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕೀಲೆಸ್ ಎಂಟ್ರಿ, ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ರೆನಾಲ್ಟ್ ಕ್ವಿಡ್ (Renault Kwid) ಕಾರಿನ ಎಂಜಿನ್ ಹಾಗು ಮೈಲೇಜ್

ರೆನಾಲ್ಟ್ ಕ್ವಿಡ್ ಕಾರು 1 – ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68 PS ಗರಿಷ್ಠ ಪವರ್, 91 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 5 – ಸ್ವೀಡ್ ಮ್ಯಾನುವಲ್/ 5 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಕಾರು 21.46 – 22.3 kmpl ಇಂಧನ ದಕ್ಷತೆಯನ್ನು ಒಳಗೊಂಡಿದೆ. ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ.

Image Credit: Wikimedia

ರೆನಾಲ್ಟ್ ಕ್ವಿಡ್ (Renault Kwid) ಕಾರಿನ ಬೆಲೆ

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ರೆನಾಲ್ಟ್ ಕ್ವಿಡ್ (Renault Kwid) ಕಾರು, ರೂ.4.70 ಲಕ್ಷದಿಂದ ರೂ.6.33 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ರೆನಾಲ್ಟ್ ಕಿಗರ್ (Renault Kiger) ಕಾರಿನ ಬೆಲೆ ಹಾಗು ಇತರೆ

ರೆನಾಲ್ಟ್ ಕಿಗರ್ (Renault Kiger) ಈ ಕಾರು ರೂ.6 ಲಕ್ಷದಿಂದ ರೂ.11.23 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 1 – ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1 – ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 18.24 – 20.5 kmpl ಮೈಲೇಜ್ ಕೊಡುತ್ತದೆ. 8 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ.

 

ರೆನಾಲ್ಟ್ ಟ್ರೈಬರ್ (Renault Triber) ಕಾರಿನ ಸಂಪೂರ್ಣ ಮಾಹಿತಿ

ರೆನಾಲ್ಟ್ ಟ್ರೈಬರ್ (Renault Triber) ಕಾರು 8 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7 – ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ಸಲುವಾಗಿ 4 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ)ಯನ್ನು ಹೊಂದಿದೆ.

ಈ ಕಾರು ರೂ.6 – ರೂ.8.97 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. ಈ ಕಾರು, 1 – ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 3 – ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 PS ಪವರ್, 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 – ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.ಈ ಕಾರಿನಲ್ಲಿ 7 ಜನ ಪ್ರಯಾಣಿಸಬಹುದಾಗಿದ್ದು, 18.2 – 20 kmpl ಮೈಲೇಜ್ ಕೊಡುತ್ತದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in