Renault New: ಹೊಸ ಕಾರ್ ಖರೀದಿ ಮಾಡುವವರಿಗೆ ಗುಡ್ ನ್ಯೂಸ್, ಭಾರತಕ್ಕೆ ಬಂತು ಅಗ್ಗದ ಬೆಲೆಯ ಸ್ವಯಂಚಾಲಿತ ಕಾರ್
ಬಜೆಟ್ ಕಾರ್ ಖರೀದಿಸುವವರಿಗೆ ರೆನಾಲ್ಟ್ ಕಡೆಯಿಂದ ಅಗ್ಗದ ಕಾರ್ ಲಾಂಚ್, ಕಡಿಮೆ ಬೆಲೆ ಆಕರ್ಷಕ ಮೈಲೇಜ್
Renault New Cheapest Car Launch: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಕಾರ್ ಖರೀದಿಸುವವರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿವೆ.
ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಕಾರ್ ಗಳ ಕಲೆಕ್ಷನ್ ಸಾಕಷ್ಟಿವೆ. ಇದೀಗ ಮಾರುಕಟ್ಟೆಯಲ್ಲಿ Renault ಕಂಪನಿಯು ತನ್ನ ಹೊಸ ಮಾದರಿಯನ್ನು ಪರಿಚಯಿಸಿಯಲಿದೆ. ಈ ನೂತನ ಮಾದರಿಯ ವೈಶಿಷ್ಟ್ಯ ಹಾಗೂ ಬೆಲೆಯ ಬಗ್ಗೆ ಕೇಳಿದರೆ ಕಾರ್ ಖರೀದಿಸಲು ನೀವು ಮನಸ್ಸು ಮಾಡುವುದಂತೂ ನಿಜ.
ಹೊಸ ಕಾರ್ ಖರೀದಿ ಮಾಡುವವರಿಗೆ ಗುಡ್ ನ್ಯೂಸ್
ಸಾಮಾನ್ಯವಾಗಿ ಕಾರ್ ಗಳ ಆರಂಭಿಕ ಬೆಲೆ 6 ಲಕ್ಷದಿಂದ ಆರಂಭವಾಗುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Renault ಕಂಪನಿಯು ಇದಕ್ಕಿಂತಲೂ ಅತಿ ಅಗ್ಗದ ಬೆಲೆಯಲ್ಲಿ ಹೊಚ್ಚ ಹೊಸ ಮಾದರಿಯನ್ನು ಪರಿಚಯಿಸಲು ನಿರ್ಧರಿಸಿದೆ.
ರೆನಾಲ್ಟ್ ಭಾರತೀಯ ಟೆಕ್ ವಲಯಕ್ಕೆ ಆಗದ ಕಾರ್ ಅನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಐದು ಉತ್ಪನ್ನಗಳನ್ನು ಬಿಡುಗಡೆ ಮಾಡಲು ರೆನಾಲ್ಟ್ ಯೋಜನೆ ಹೂಡಿದೆ. ರೆನಾಲ್ಟ್ ಕಂಪನಿಯು ಹೊಸ ವರ್ಷದಲ್ಲಿ ಕಾರ್ ಖರೀದಿಸುವ ಯೋಜನೆ ಇಟ್ಟುಕೊಂಡವರಿಗೆ ಅತಿ ಅಗ್ಗದ ಕಾರ್ ಅನ್ನು ಖರೀದಿಸುವ ಅವಕಾಶವನ್ನು ನೀಡಿದೆ.
ಭಾರತಕ್ಕೆ ಬಂತು ಅಗ್ಗದ ಬೆಲೆಯ ಸ್ವಯಂಚಾಲಿತ ಕಾರ್
ಹೊಸ 2024 Renault Kwid RXL(O) Easy-R AMT ರೂಪಾಂತರವು ಹೊಸ ಆಯ್ಕೆಯಾಗಿದೆ. ಇದು ಭಾರತದಲ್ಲಿ ಅಗ್ಗದ ಸ್ವಯಂಚಾಲಿತ ಕಾರಾಗಿದೆ. ಈ ಕಾರ್ ನ ಬೆಲೆ ಕೇವಲ 5.44 ಲಕ್ಷ ರೂ. ಆಗಿದೆ. ಇನ್ನು ಜನಪ್ರಿಯ ಮಾರುತಿ ಸುಜುಕಿ ಆಲ್ಟೊ K10 ಸ್ವಯಂಚಾಲಿತ ರೂಪಾಂತರಕ್ಕಿಂತ ಅಗ್ಗವಾಗಿದೆ.
ರೆನಾಲ್ಟ್ ಕ್ವಿಡ್ ನ ಹೊಸ ಸ್ವಯಂಚಾಲಿತ ರೂಪಾಂತರವು 999cc ಎಂಜಿನ್ ಅನ್ನು ಹೊಂದಿದೆ. ಮೂರು-ಸಿಲಿಂಡರ್, ಪೆಟ್ರೋಲ್ ಎಂಜಿನ್ 68 Bhp ಮತ್ತು 91 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ 2024 ಕ್ವಿಡ್ ಶ್ರೇಣಿಯು ಕ್ವಿಡ್ ಕ್ಲೈಂಬರ್ ನಲ್ಲಿ ಮೂರು ಹೊಸ ಡ್ಯುಯಲ್-ಟೋನ್ ಬಾಹ್ಯ ದೇಹದ ಬಣ್ಣಗಳ ಪರಿಚಯದೊಂದಿಗೆ ವಿನ್ಯಾಸವನ್ನು ಇನ್ನಷ್ಟು ಆಕರ್ಷಿಸಲಿದೆ. ಕಾರ್ ನ ವಾಹನ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಸುರಕ್ಷಿತ ಫೀಚರ್ ಅನ್ನು ಅಳವಡಿಸಲಾಗಿದೆ.