Renault: ಕೇವಲ 7 ಲಕ್ಷಕ್ಕೆ ಖರೀದಿಸಿ ಈ 7 ಆಸನಗಳ ಕಾರ್, ಒಂದು ಲೀಟರ್ ಪೆಟ್ರೋಲ್ ನಲ್ಲಿ 20 Km ಚಲಿಸುತ್ತೆ.
ಇದೀಗ ರೆನಾಲ್ಟ್ ಕಂಪನಿ 7 ಲಕ್ಷಕ್ಕೆ ಹೊಸ ಮಾದರಿಯ ಎಸ್ ಯುವಿಯನ್ನು ಪರಿಚಯಿಸಿದೆ.
Renault Triber 7 Seater SUV: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಎಂಟ್ರಿ ಕೊಡುತ್ತಿದೆ. ದೇಶದ ಜನಪ್ರಿಯ ಕಂಪನಿಗಳು ಹೊಸ ಹೊಸ ವಿನ್ಯಾಸದ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಎಲೆಕ್ಟ್ರಿಕ್ ಮಾದರಿ, ಪೆಟ್ರೋಲ್, ಡೀಸೆಲ್ ಮಾದರಿಯ ಕಾರ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟಿವೆ.
ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಎಸ್ ಯುವಿ ಗಳು ಹೆಚ್ಚು ಬಿಡುಗಡೆಯಾಗುತ್ತಿದೆ. ಇದೀಗ ರೆನಾಲ್ಟ್ ಕಂಪನಿ 7 ಹೊಸ ಮಾದರಿಯ ಎಸ್ ಯುವಿಯನ್ನು ಪರಿಚಯಿಸಿದೆ. ಈ ಎಸ್ ಯುವಿಯ ಬಗ್ಗೆ ಒಂದಿಷ್ಟು ವಿವರ ತಿಳಿಯೋಣ.
ರೆನಾಲ್ಟ್ ಟ್ರೈಬರ್ 7 ಸೀಟರ್ ಎಸ್ ಯುವಿ
ಎರ್ಟಿಗಾ ಕಂಪನಿಯ ಎಸ ಯೂವಿಗಳಿಗೆ ಠಕ್ಕರ್ ನೀಡಲು ಇದೀಗ ಮಾರುಕಟ್ಟೆಯಲ್ಲಿ ರೆನಾಲ್ಟ್ ಟ್ರೈಬರ್ 7 ಸೀಟರ್ ಎಸ್ ಯುವಿ ಸಿದ್ಧವಾಗುತ್ತಿದೆ. ಮಾರುಕಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಎಸ್‌ಯುವಿಗಳಿದ್ದು ಈ ನೂತನ ಎಸ್ ಯುವಿ ಎಲ್ಲರ ಗಮನ ಸೆಳೆಯಲಿದೆ.
ಈ ಟ್ರೈಬರ್ ಎಸ್ ಯುವಿನಲ್ಲಿ 7 ಆಸನಗಳನ್ನು ಅಳವಡಿಸಲಾಗಿದೆ. ರೆನಾಲ್ಟ್ ಟ್ರೈಬರ್ 7 ಸೀಟರ್ ಎಸ್ ಯುವಿಯನ್ನು ಮಾರುಕಟ್ಟೆಯಲ್ಲಿ 4 ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಅವುಗಳೆಂದರೆ RXE, RXL, RXT ಮತ್ತು RXZ. ಇವುಗಳನ್ನು ಎಂಟು ರೂಪಾಂತರದಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರಿಗೆ ಹೆಚ್ಚಿನ ಬೇಡಿಕೆ ಇದೆ..
ರೆನಾಲ್ಟ್ ಟ್ರೈಬರ್ 7 ಸೀಟರ್ ಎಂಜಿನ್ ಸಾಮರ್ಥ್ಯ
ರೆನಾಲ್ಟ್ ಟ್ರೈಬರ್ 7 ಸೀಟರ್ ಎಸ್ ಯುವಿನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಕಾರ್ 1.0-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ರೆನಾಲ್ಟ್ ಟ್ರೈಬರ್ ಮೈಲೇಜ್ ಮತ್ತು ಬೆಲೆ
ರೆನಾಲ್ಟ್ ಟ್ರೈಬರ್ 7 ಸೀಟರ್ ಎಸ್ ಯುವಿ ಬರೋಬ್ಬರಿ 18 .2 kmpl ನಿಂದ 20 kmpl ಮೈಲೇಜ್ ಅನ್ನು ನೀಡುತ್ತದೆ. ಇದರಲ್ಲಿ ಅನೇಕ ಸುಧಾರಿತ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು ರೆನಾಲ್ಟ್ ಟ್ರೈಬರ್ 7 ಸೀಟರ್ ಎಸ್ ಯುವಿಯ ಎಕ್ಸ್ ಶೋ ರೂಮ್ ಬೆಲೆ 6.33 ಲಕ್ಷದಿಂದ 8.97 ಲಕ್ಷ ರೂ. ಆಗಿದೆ. ಹೆಚ್ಚಿನ ಮೈಲೇಜ್ ನೀಡುವ ಎಸ್ ಯುವಿ ಇದಾಗಿದ್ದು ಗ್ರಾಹಕರು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.