Big Car: ಭಾರತದಲ್ಲಿ ಲಾಂಚ್ ಆಯಿತು 20 Km ಮೈಲೇಜ್ ಕೊಡುವ ಇನ್ನೊಂದು 7 ಸೀಟರ್ ಕಾರ್, ದಾಖಲೆಯ ಬುಕಿಂಗ್.

7 ಆಸನದ ಕಾರ್ ಅನ್ನು ಬಜೆಟ್ ಬೆಲೆಗೆ ಖರೀದಿಸಿ, ದೊಡ್ಡ ಕುಟುಂಬಕ್ಕಾಗಿ.

Renault 7 Seater Family Car 2023: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಎಂಟ್ರಿ ಕೊಡುತ್ತಿದೆ. ದೇಶದ ಜನಪ್ರಿಯ ಕಂಪನಿಗಳು ಹೊಸ ಹೊಸ ವಿನ್ಯಾಸದ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಎಲೆಕ್ಟ್ರಿಕ್ ಮಾದರಿ, ಪೆಟ್ರೋಲ್, ಡೀಸೆಲ್ ಮಾದರಿಯ ಕಾರ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟಿವೆ.

ಇದೀಗ ರೆನಾಲ್ಟ್ ಕಂಪನಿ 7 ಆಸನದ ಹೊಸ ಮಾದರಿಯ MPV ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಭಾರತದಲ್ಲಿ ಫ್ಯಾಮಿಲಿ ಕಾರು ಎಂದಾಕ್ಷಣ ದುಬಾರಿ ಬೆಲೆ ಎಂಬುದು ಮೊದಲು ಮನಸ್ಸಿಗೆ ಬರುತ್ತದೆ. ಆದರೆ ಇದೀಗ ನೀವು 7 ಆಸನದ ಕಾರ್ ಅನ್ನು ಬಜೆಟ್ ಬೆಲೆಗೆ ಖರೀದಿಸಬಹುದಾಗಿದೆ.

Renault Triber 7 Seater Price
Image Credit: Theauto

7 Seater Family Car
ನಿಮ್ಮ ಬಜೆಟ್ 7 ಲಕ್ಷಕ್ಕಿಂತ ಕಡಿಮೆ ಇದ್ದರೆ ಮತ್ತು ನಿಮ್ಮ ಕುಟುಂಬ ದೊಡ್ಡದಾಗಿದ್ದರೆ ಉತ್ತಮ ಸೌಲಭ್ಯ ಹೊಂದಿರುವ ಈ ಕಾರು ಅವಶ್ಯಕ. ದೊಡ್ಡ ಕುಟುಂಬದಲ್ಲಿ ಹೆಚ್ಚು ಸದಸ್ಯರಿರುವಾಗ ಉತ್ತಮ ಕಾರು ಬೇಕಾಗುತ್ತದೆ. ಫ್ಯಾಮಿಲಿ ಜೊತೆಗೆ ಧೀರ್ಘ ಪ್ರವಾಸ ಹೋಗುವ ಸಂದರ್ಭದಲ್ಲಿ 7 ಆಸನಗಳ ಕಾರ್ ಉತ್ತಮವಾಗಿದೆ. ಹೀಗಾಗಿ MPV ಕಾರು ಮಾತ್ರ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ.

Renault Triber 7 Seater Engine Capacity
Renault Triber 7-Seater MPV ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಕಾರ್ 1.0-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 72 bhp ಗರಿಷ್ಠ ಪವರ್ ಮತ್ತು 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Renault Triber 7 Seater Feature
Image Credit: Financialexpress

Renault Triber 7 Seater Feature
Renault Triber ನಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ ಮತ್ತು ಮೊಬೈಲ್ ಫೋನ್ ಸಂಪರ್ಕದಂತಹ ವೈಶಿಷ್ಟ್ಯ, ನಾಲ್ಕು ಏರ್‌ಬ್ಯಾಗ್‌ ಗಳು, EBD , ABS , ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ದಂತಹ ಹಲವಾರು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

Join Nadunudi News WhatsApp Group

Renault Triber 7 Seater Mileage And Price
Renault Triber 7-seater MPV ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಮೈಲೇಜ್  ಅನ್ನು ನೀಡುತ್ತದೆ. ಇದರಲ್ಲಿ ಅನೇಕ ಸುಧಾರಿತ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು Renault Triber 7-Seater MPV ಎಕ್ಸ್ ಶೋ ರೂಮ್ ಬೆಲೆ 6.3 ಲಕ್ಷದಿಂದ 8.97 ಲಕ್ಷ ರೂ. ಆಗಿದೆ. ಹೆಚ್ಚಿನ ಮೈಲೇಜ್ ನೀಡುವ MPV ಇದಾಗಿದ್ದು ಗ್ರಾಹಕರು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಕಂಪನಿಯು ಇದನ್ನು RXE, RXL, RXT ಮತ್ತು RXZ ಎಂಬ ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ.

Join Nadunudi News WhatsApp Group